BMW ಕಾರಿನಲ್ಲಿ ಯುವಕನ ಫೋಟೋ ನೋಡಿ ಹುಟ್ಟಿತು ಪ್ರೀತಿ, ಮದ್ವೆ ಬೆನ್ನಲ್ಲೇ ಮುಳ್ಳಾಗಿ ಚುಚ್ಚಿತು ಅದೇ ಕಾರು!
ಯುವಕನ ಬಹುತೇಕ ಎಲ್ಲಾ ಫೋಟೋದಲ್ಲಿ BMW ಕಾರೊಂದು ಇತ್ತು. ಈ ಫೋಟೋ ನೋಡಿ ಯುವತಿಗೆ ಪ್ರೀತಿ ಶುರುವಾಗಿತ್ತು. ಸೋಶಿಯಲ್ ಮಾಡಿಯಾದಲ್ಲಿ ಸಂಪರ್ಕ ಸಾಧಿಸಿದ ಯುವತಿ ಪ್ರಪೋಸ್ ಕೂಡ ಮಾಡಿದ್ದಾಳೆ. ಪ್ರೀತಿ ಶುರುವಾಯ್ತು, ಮದುವೆಯೂ ಆಯ್ತು. ಆದರೆ ಒಂದೇ ವಾರಕ್ಕೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.
ಆಗ್ರ(ಆ.12) ಪ್ರೀತಿ ಎಲ್ಲಿ, ಯಾವಾಗ,ಹೇಗೆ ಹುಟ್ಟುತ್ತೆ ಅನ್ನೋದು ಹೇಳೋಕೆ ಆಗಲ್ಲ. ಇದಕ್ಕೆ ಪ್ರೀತಿ ಕುರುಡು ಅಂತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಶುರುವಾಗಿ, ಮದುವೆಯಾಗಿ ಸಂಸಾರ ಸಾಗಿಸುತ್ತಿರುವ ಹಲವು ಜೋಡಿಗಳಿವೆ. ಮದುವೆ ಕೂಡ ಆನ್‌ಲೈನ್ ಮೂಲಕವೇ ನಡೆದಿದೆ. ಹೀಗೆ ಸೋಶಿಯಲ್ ಮೀಡಿಯಾದ ಫೋಟೋ ನೋಡಿ ಯುವತಿಗೆ ಪ್ರೀತಿ ಶುರುವಾಗಿತ್ತು. ಯುವಕನ ಬಹುತೇಕ ಫೋಟೋದಲ್ಲಿ ಐಷರಾಮಿ BMW ಕಾರಿತ್ತು.BMW ಕಾರಿನಿಂದ ಶುರುವಾದ ಪ್ರೀತಿಗೆ ಇದೀಗ ಅದೇ BMW ಕಾರು ಸಂಕಷ್ಟ ತಂದಿದೆ.
ಉತ್ತರ ಪ್ರದೇಶದ ಆಗ್ರಾದ ಯುವತಿ ಕೆಲಸ ಮಾಡಿಕೊಂಡು ಆರಾಮಾಗಿದ್ದಳು. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬನ ಫೋಟೋ ಕಣ್ಣಿಗೆ ಬಿದ್ದಿದೆ. ಯುವಕ ನೋಡಲು ಆಕರ್ಷಕವಾಗಿದ್ದ. ಆದರೆ ಅದಕ್ಕಿಂತ ಹೆಚ್ಚಾಗಿ, ಆತನ ಸೋಶಿಯಲ್ ಮೀಡಿಯಾ ಖಾತೆಯ ಗ್ಯಾಲರಿಯಲ್ಲಿರುವ ಬಹುತೇಕ ಎಲ್ಲಾ ಫೋಟೋಗಳಲ್ಲೂ BMW ಕಾರಿತ್ತು. BMW ಕಾರಿನ ಮುಂದೆ, ಪ್ರಯಾಣದ ಫೋಟೋಗಳನ್ನು ಹಂಚಿಕೊಂಡಿದ್ದ. ಈ ಫೋಟೋ ನೋಡಿದ ಯುವತಿಗೆ ಅಲ್ಲೆ ಪ್ರೇಮಾಂಕುರವಾಗಿದೆ.
ಡಿವೋರ್ಸ್ ಬಳಿಕ ಅರಿವಾಯಿತು ತಪ್ಪು:ಆದೇಶ ರದ್ದುಗೊಳಿಸಲು ಮನವಿ ಮಾಡಿದ ಜೋಡಿಗೆ ಕೋರ್ಟ್ ಶಾಕ್!
ಪ್ರತಿ ದಿನ ಯುವಕನ ಫೋಟೋಗೆ ಲೈಕ್ಸ್, ಕಮೆಂಟ್ಸ್ ಮಾಡತೊಡಿಗಿದ್ದಾಳೆ. ಆದರೆ ಯುವಕನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. BMW ಕಾರು, ಹೈಕ್ಲಾಸ್ ಜೀವನ, ಹೀಗಾಗಿ ಸೋಶಿಯಲ್ ಮೀಡಿಯಾಗೆ ಉತ್ತರಿಸವ ಸಾಧ್ಯತೆ ಕಡಿಮೆ ಎಂದುಕೊಂಡಿದ್ದಳು. ಹೀಗಿರುವಾಗ ಯುವತಿಯ ಕಮೆಂಟ್ಸ್‍ಗೆ ಪ್ರತಿಕ್ರಿಯೆ ಒಂದು ಬಂದಿತ್ತು. ಖುಷಿಯಿಂದ ತೇಲಾಡಿದ ಯುವತಿ, ಸತತ ಪ್ರಯತ್ನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರಾಗಿದ್ದಾರೆ.
ವಿದೇಶದಲ್ಲಿ ಕೆಲಸ, ಐಷಾರಾಮಿ ಕಾರು, ಜೀವನದಿಂದ ಯುವತಿ ಖುಷಿಯಾಗಿದ್ದಾಳೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಸಿಂಪಲ್ ಆಗಿ ಹೇಳಬೇಕೆಂದರೆ ಯುವತಿ, ಈತನ ಪ್ರೀತಿಗಾಗಿ ಇಷ್ಟೆಲ್ಲಾ ಕಸರತ್ತು ಮಾಡಿದ್ದಳು. ಪ್ರೀತಿ ಶುರುವಾಯಿತು, ಗಾಢವಾಯಿತು. ಇದರ ನಡುವೆ ಕೆಲವು ಬಾರಿ ಯುವತಿ ಆತನ ಭೇಟಿ ಮಾಡಿದ್ದಾಳೆ. ಐಷಾರಾಮಿ ಹೊಟೆಲ್‌ನಲ್ಲಿ ಆಹಾರ ಸವಿಸಿದ್ದಾರೆ. ಯುವತಿ ಮದುವೆಗೆ ಒತ್ತಾಯಿಸಲು ಆರಂಭಿಸಿದ್ದಾಳೆ. ಕೊನೆಗೆ ಆತ ಮದುವೆಗೆ ಒಕೆ ಎಂದಿದ್ದಾನೆ.
ಯುವಕನ ಮನೆಯಲ್ಲಿ ಹೆಚ್ಚಿನ ತಕರಾರರು ಇರಲಿಲ್ಲ. ಆದರೆ ಯುವತಿ ಮನೆಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿರುವ ವರ ಬೇಡ ಎಂದಿದ್ದಾರೆ. ಆದರೆ ಪಟ್ಟು ಬಿಡದ ಯುವತಿ ಪೋಷಕರನ್ನೂ ಒಪ್ಪಿಸಿ ಮದುವೆಯಾಗಿದ್ದಾಳೆ. ಅದ್ಧೂರಿಯಾಗಿ ಮದುವೆ ನಡೆದಿದೆ. ಮದುವೆ ಬಳಿಕ ಮಂಟಪದಿಂದ ಹುಡುಗನ ಮನೆಗೆ ತೆರಳಲು ಅದೇ BMW ಕಾರು ಬಂದಿದೆ. ಕಾರಿನಲ್ಲಿ ಕುಳಿತು ಮನೆಗೆ ತೆರಳಿದ್ದಾರೆ. ಮನೆಗೆ ಪ್ರವೇಶಿಸುತ್ತಿದ್ದಂತೆ ಯುವತಿ ಕನಸುಗಳು ನುಚ್ಚು ನೂರಾಗಿದೆ. ಕಾರಣ ಈತನ ಮನೆ ಸಣ್ಣ ಜೋಪಡಿ ರೀತಿ ಇತ್ತು. ಈ ಮನೆಯಲ್ಲಿ ಕಾರು ಬಿಟ್ಟು ಸೈಕಲ್ ಕೂಡ ಇರಲಿಲ್ಲ. 6 ದಿನದಲ್ಲೇ ಯುವತಿಗೆ ಗಂಡನ ಬಳಿ ಕಾರು ಇಲ್ಲ, ಮನೆಯೂ ಇಲ್ಲ, ವಿದೇಶದಲ್ಲೂ ಕೆಲಸವೂ ಇಲ್ಲ ಅನ್ನೋದು ಗೊತ್ತಾಗಿದೆ. ತವರಿಗೆ ಬಂದ ಯುವತಿ ಇದೀಗ ದೂರು ನೀಡಿದ್ದಾಳೆ.
ಐವರ ಜೊತೆ ಮದುವೆ, 49 ಹುಡ್ಗೀರ ಜೊತೆ ಮುಹೂರ್ತ ಫಿಕ್ಸ್: ಬೆಚ್ಚಿ ಬೀಳಿಸಿದ ವಂಚಕನ ಲೈಫ್‌ಸ್ಟೈಲ್!