ಲಿವ್ ಇನ್ ರಿಲೇಶನ್‌ಶಿಪ್ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ, ವೈವಾಹಿಕ ವ್ಯವಸ್ಥೆ ನಾಶವೆಂದು ಕಿಡಿ
ಭಾರತದಲ್ಲಿ ಹೆಚ್ಚುತ್ತಿರುವ ಲಿವ್ ಇನ್ ಸಂಬಂಧಗಳಿಂದ ಮದುವೆ ಎಂಬ ವ್ಯವಸ್ಥೆ ನಾಶವಾಗುತ್ತಿದೆ. ಪ್ರತಿ ಋುತುವಿಗೊಂದು ಸಂಗಾತಿಯನ್ನು ಬದಲಿಸುವ ಲಿವ್ ಇನ್ ರಿಲೇಶನ್‌ಶಿಪ್ ಕ್ರೂರ ವ್ಯವಸ್ಥೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ.
ಅಲಹಾಬಾದ್ (ಸೆ.3): ಭಾರತದಲ್ಲಿ ಹೆಚ್ಚುತ್ತಿರುವ ಲಿವ್ ಇನ್ ಸಂಬಂಧಗಳಿಂದ ಮದುವೆ ಎಂಬ ವ್ಯವಸ್ಥೆ ನಾಶವಾಗುತ್ತಿದೆ. ಪ್ರತಿ ಋುತುವಿಗೊಂದು ಸಂಗಾತಿಯನ್ನು ಬದಲಿಸುವ ಲಿವ್ ಇನ್ ರಿಲೇಶನ್‌ಶಿಪ್ ಅನ್ನು ಸುಸ್ಥಿರ ಹಾಗೂ ಆರೋಗ್ಯಕರ ಸಮಾಜದ ಲಕ್ಷಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ.
‘ಮದುವೆಯೆಂಬ ವ್ಯವಸ್ಥೆಯು ನೀಡುವ ಭದ್ರತೆ, ಸಾಮಾಜಿಕ ಸ್ವೀಕಾರಾರ್ಹತೆ ಹಾಗೂ ಸ್ಥಿರತೆಯನ್ನು ಲಿವ್ ಇನ್ ಸಂಬಂಧಗಳು ಒದಗಿಸಲು ಸಾಧ್ಯವಿಲ್ಲ. ಭಾರತದಲ್ಲಿ ಮಧ್ಯಮ ವರ್ಗಕ್ಕಿರುವ ನೈತಿಕ ದೃಷ್ಟಿಕೋನವನ್ನು ನಾವು ಕಡೆಗಣಿಸಬಾರದು. ದೇಶದಲ್ಲಿ ಮದುವೆಯೆಂಬ ವ್ಯವಸ್ಥೆ ಸಂಪೂರ್ಣ ನಾಶವಾದ ಮೇಲೆ ಬೇಕಾದರೆ ನಾವು ಲಿವ್ ಇನ್ ಸಂಬಂಧಗಳನ್ನು ಸಹಜ ಎಂದು ಪರಿಗಣಿಸಬಹುದು. ಸೋಕಾಲ್ಡ್ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ ಮದುವೆಯೆಂಬ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಆಗದೆ ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ. ಅಂತಹುದೇ ಟ್ರೆಂಡ್ ಈಗ ಭಾರತದಲ್ಲೂ ಶುರುವಾಗಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕಿಚ್ಚನ ಬರ್ತ್‌ಡೇ ಪಾರ್ಟಿಯಲ್ಲಿ ಡಿಸಿಎಂ ಡಿಕೆಶಿ ಜೊತೆ ಬಿಜೆಪಿಯ ಬಿಸಿ ಪಾಟೀಲ್, ರಾಜುಗೌಡ ಗಂಭೀರ ಚರ್ಚೆ
ಅದ್ನಾನ್ ಎಂಬ ಲಿವ್ ಇನ್ ಸಂಗಾತಿಯ ವಿರುದ್ಧ ಇತ್ತೀಚೆಗೆ ಉತ್ತರ ಪ್ರದೇಶದ ಸಹಾರಣ್‌ಪುರದ 19 ವರ್ಷದ ಯುವತಿಯೊಬ್ಬಳು ಅತ್ಯಾಚಾರದ ದೂರು ನೀಡಿದ್ದಳು. ಆತ ಮದುವೆಯಾಗುವುದಾಗಿ ವಂಚಿಸಿ ತನ್ನನ್ನು ಗರ್ಭವತಿಯನ್ನಾಗಿ ಮಾಡಿದ್ದಾನೆಂದು ದೂರಿದ್ದಳು. ಆತನಿಗೆ ಜಾಮೀನು ಮಂಜೂರು ಮಾಡುವ ವೇಳೆ ಆದೇಶದಲ್ಲಿ ಏಕಸದಸ್ಯ ಪೀಠ ಲಿವ್ ಇನ್ ಸಂಬಂಧಗಳ ವಿರುದ್ಧ ಕಿಡಿಕಾರಿದೆ.
ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು, ಸುಪ್ರೀಂ ಮಹತ್ವದ ಆದೇಶ
‘ವಿವಾಹಿತರಲ್ಲಿನ ಅನೈತಿಕ ಸಂಬಂಧಗಳು ಹಾಗೂ ಅವಿವಾಹಿತರ ಲಿವ್ ಇನ್ ಸಂಬಂಧಗಳನ್ನು ಪ್ರಗತಿಪರ ಸಮಾಜದ ಲಕ್ಷಣ ಎಂಬಂತೆ ಬಿಂಬಿಸಲಾಗುತ್ತಿದೆ. ಯುವಕರು ಇಂತಹ ಸಿದ್ಧಾಂತಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಅದರ ದೂರಗಾಮಿ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರ್ಥವಾಗುತ್ತಿಲ್ಲ’ ಎಂದು ಕೋರ್ಟ್ ಇದೇ ವೇಳೆ ಕಳವಳ ವ್ಯಕ್ತಪಡಿಸಿದೆ.