ನಟನ ಬರ್ತಡೇ ಪಾರ್ಟಿಯಲ್ಲಿ ಡಿಕೆಶಿ ಜೊತೆ ಬಿಜೆಪಿಯ ಬಿಸಿ ಪಾಟೀಲ್ ಗಂಭೀರ ಚರ್ಚೆ, ತೀವ್ರ ರಾಜಕೀಯ ಕುತೂಹಲ

ಇದೀಗ ಚಿತ್ರನಟನ ಬರ್ತ್ ಡೇ ಪಾರ್ಟಿಯಲ್ಲಿ ಡಿಕೆ ಶಿವಕುಮಾರ್ ಮತ್ತು ಕೌರವ ಬಿಸಿ ಪಾಟೀಲ್  ಜೊತೆ ಡೀಪ್ ಡಿಸ್ಕಷನ್ ನಡೆದಿದೆ. ಇದು ರಾಜ್ಯದ ರಾಜಕೀಯ  ಕುತೂಹಲಕ್ಕೆ ಕಾರಣವಾಗಿದೆ.

BJP leader BC patil deep discussion with DCM DK Shivakumar  at actor Kiccha Sudeep birthday party gow

ಬೆಂಗಳೂರು (ಸೆ.3): ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ್ದೇ ಸುದ್ದಿ. ಪ್ರತಿನಿತ್ಯ ನಡೆಯುತ್ತಲೇ ಇದೆ ರಹಸ್ಯ ಮೀಟಿಂಗ್, ಚರ್ಚೆ, ಏನಾಗ್ತಿದೆ ಎಂಬುದೇ  ರಾಜ್ಯದ ಜನತೆಯ ಕುತೂಹಲ. ಇದೀಗ ಚಿತ್ರನಟನ ಬರ್ತ್ ಡೇ ಪಾರ್ಟಿಯಲ್ಲಿ ಡಿಕೆ ಶಿವಕುಮಾರ್ ಮತ್ತು ಕೌರವ ಬಿಸಿ ಪಾಟೀಲ್  ಜೊತೆ ಡೀಪ್ ಡಿಸ್ಕಷನ್ ನಡೆದಿದೆ. 

ನಟ ಕಿಚ್ಚ ಸುದೀಪ್ ಬರ್ತ್ ಡೇ ಪಾರ್ಟಿಯಲ್ಲಿ ಕೌರವ ಬಿಸಿ ಪಾಟೀಲ್ ಜೊತೆ ಡಿಕೆಶಿ ಡೀಪ್ ಡಿಸ್ಕಷನ್ ಮಾಡಿದ್ದು, ಬಿಜೆಪಿ ಮಾಜಿ ಶಾಸಕ ರಾಜೂಗೌಡ ಕೂಡ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ.

ಸಂತೋಷ್‌ ಹೇಳಿಕೆ: 40 ಏಕೆ, 136 ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಡಿಕೆಶಿ

ಶನಿವಾರ ರಾತ್ರಿ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಕಿಚ್ಚ ಸುದೀಪ್ ಬರ್ತಡೇ ಪಾರ್ಟಿ ನಡೆದಿತ್ತು, ಈ ವೇಳೆ ಸಿನೆಮಾ ರಂಗದ ಗಣ್ಯರು ಸೇರಿದಂತೆ ಅನೇಕ ರಾಜಕೀಯ ನಾಯಕರು ಕೂಡ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮೂವರು ರಾಜಕೀಯ ನಾಯಕರ ಮಧ್ಯೆ ಗಂಭೀರ ಮಾತುಕತೆ ನಡೆದಿದೆ. ಅರ್ಧ ಗಂಡೆಗೂ ಹೆಚ್ಚಿನ ಕಾಲ ಕುಳಿತು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ  ಪೊಲಿಟಿಕಲ್ ತ್ರಿಮೂರ್ತಿಗಳ ಪ್ರತ್ಯೇಕ ಮಾತುಕತೆ ಕುತೂಹಲ ಮೂಡಿಸಿದೆ.

ಸುರಪುರ‌ ಬಿಜೆಪಿ ಮಾಜಿ ಶಾಸಕ ರಾಜುಗೌಡ  ಹಿರೇಕೆರೂರಿನ ಮಾಜಿ ಶಾಸಕ‌ ಬಿಸಿ ಪಾಟೀಲ್‌ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅರ್ಧಗಂಟೆಗೂ ಹೆಚ್ಚು ಚರ್ಚೆ ನಡೆಸಿದ್ದಾರೆ. ಒಂದೆಡೆ ಮೂಲ ಕಾಂಗ್ರೆಸ್ಸಿಗರನ್ನ ಪಕ್ಷಕ್ಕೆ ಮರಳಿ ಕರೆತರಲು ಕಾಂಗ್ರೆಸ್  ಗಾಳ ಹಾಕಿದೆ. ಹೀಗಾಗಿ ದಿಗ್ಗಜರುಗಳ ಮಾತುಕತೆ  ಕುತೂಹಲ ಮೂಡಿಸಿದೆ.

ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅಲ್ಲದೇ ಬಿಜೆಪಿ ಮಾಜಿ ಶಾಸಕರನ್ನೂ ಕೂಡ ಕಾಂಗ್ರೆಸ್ ಸೆಳೆಯಲು ಮುಂದಾಗಿದೆ. ಹೀಗಾಗಿ ಸುರಪುರದಲ್ಲಿ ಸೋತಿರುವ ಬಿಜೆಪಿ ಮಾಜಿ ಶಾಸಕ ರಾಜೂಗೌಡ ಜೊತೆಗಿನ ಚರ್ಚೆ ಕೂಡ ಮಹತ್ವ ಪಡೆದಿದೆ.

Latest Videos
Follow Us:
Download App:
  • android
  • ios