Asianet Suvarna News Asianet Suvarna News

ಇಲ್ಲಿ ನಡೆಯುತ್ತೆ ಭೂತದ ಮದುವೆ, ಹೆಣ್ಣು ಶವಕ್ಕಿರುತ್ತೆ ಭಾರೀ ಬೇಡಿಕೆ, ಮಗಳ ಕಳೇಬರವನ್ನೇ ಮಾರಿದ ಅಪ್ಪ!

ವಿಶ್ವದ ಒಂದೊಂದು ಭಾಗದಲ್ಲಿ ಒಂದೊಂದು ಪದ್ಧತಿ, ಸಂಪ್ರದಾಯವಿದೆ. ಕೆಲವೊಂದು ಪದ್ಧತಿ ಭಯ ಹುಟ್ಟಿಸುತ್ತದೆ. ಚೀನಾದಲ್ಲಿ ಇಂತದ್ದೇ ಒಂದು ಸಂಪ್ರದಾಯವಿದೆ. ಇದಕ್ಕೆ ಶವ ಬೇಕು. ಅದ್ರಲ್ಲೂ ಹೆಣ್ಣು ಮಕ್ಕಳ ಶವಕ್ಕೆ ಹೆಚ್ಚು ಡಿಮ್ಯಾಂಡ್.  

Adoptive Parents Sold Dead Body Of Daughter in china for ghost wedding roo
Author
First Published Nov 30, 2023, 3:23 PM IST

ಚೀನಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಬಡ ರಾಷ್ಟ್ರದಲ್ಲಿ ಮಕ್ಕಳನ್ನು ಮಾರಾಟ ಮಾಡುವ ಜನರನ್ನು ನಾವು ನೋಡ್ತೇವೆ. ಆದ್ರೆ ಚೀನಾದಲ್ಲಿ ಮಗಳ ಶವವನ್ನು ದಂಪತಿ ಮಾರಾಟ ಮಾಡಿದ್ದಾರೆ. ತಮ್ಮ 16 ವರ್ಷದ ಮಗಳ ಶವವನ್ನು ಅವರು ಮಾರಾಟ ಮಾಡಿದ್ದಾರೆ. ಮೃತ ಹುಡುಗಿಯ ನಿಜವಾದ ತಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾನೆ. ಭೂತಗಳ ಮದುವೆಗಾಗಿ ದಂಪತಿ ಮಗುವಿನ ಶವವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 

ಘಟನೆ ಶಾಂಡೊಂಗ್ (Shandong) ಪ್ರಾಂತ್ಯದಲ್ಲಿ ನಡೆದಿದೆ. ಪೊಲೀಸರಿಗೆ ದೂರು ನೀಡಿದ ವ್ಯಕ್ತಿ ಮೃತ ಹುಡುಗಿಯ ನಿಜವಾದ ತಂದೆಯಂತೆ. ಆತನಿಗೆ ಈಗಾಗಲೇ ಅವಳಿ ಮಕ್ಕಳಿದ್ದ ಕಾರಣ, ಮೂರನೇ ಮಗುವನ್ನು ಸಾಕಲು ಕಷ್ಟ ಎನ್ನುವ ಕಾರಣಕ್ಕೆ ಮಗಳನ್ನು ದತ್ತು ನೀಡಿದ್ದ. ದಂಪತಿ (Couple) ಮಗಳನ್ನು ದತ್ತು ಪಡೆದಿದ್ದರು.  ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಿಯೋದನ್, ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಳು. ನಂತ್ರ ದತ್ತು ಪಡೆದ ದಂಪತಿ ಹುಡುಗಿ ಶವವನ್ನು ಮಾರಾಟ ಮಾಡಿದ್ದಾರೆ. ನಿಜವಾದ ತಂದೆ ಹೇಳಿಕೊಂಡಿರುವ ವ್ಯಕ್ತಿ ದೂರಿನ ಮೇಲೆ ಪೊಲೀಸರು ದಂಪತಿ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಸುಮಾರು 7.88 ಲಕ್ಷ ರೂಪಾಯಿ ಸಿಕ್ಕಿದೆ. ಆದ್ರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

ವಿಮಾನದಲ್ಲೇ ಕಿತ್ತಾಡಿದ ದಂಪತಿ, ಜರ್ಮನಿಗೆ ಹೋಗಬೇಕಾದ ಫ್ಲೈಟ್ ದೆಹಲಿಯಲ್ಲೇ ತುರ್ತು ಭೂ ಸ್ಪರ್ಶ!

ಮಗಳ ಶವ ಮಾರಾಟ ಮಾಡಿದ್ದು ಯಾರಿಗೆ? : ಈ ದಂಪತಿ ಮಗಳ ಶವವನ್ನು ಇನ್ನೊಂದು ಶವದ ಜೊತೆ ಮದುವೆ ಮಾಡಲು ನೀಡಿದ್ದಾರೆ. ಇದಕ್ಕಾಗಿ ಅವರು ಹಣ ಪಡೆದಿದ್ದಾರೆ. ಚೀನಾದಲ್ಲಿ ಭೂತಗಳ ಮದುವೆ ಹೊಸತಲ್ಲ. 3000 ವರ್ಷ ಹಿಂದಿನಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಸಿಟಿಯಲ್ಲಿ ಈ ಪದ್ಧತಿ ಕಡಿಮೆ ಆದ್ರೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಭೂತಗಳ ಮದುವೆ ನಡೆಯುತ್ತಿರುತ್ತದೆ. 

ಭೂತಗಳ ಮದುವೆ : ಮೊದಲೇ ಹೇಳಿದಂತೆ ಚೀನಾದಲ್ಲಿ ಇದು ಹಳೆಯ ಪದ್ಧತಿ. ಇಲ್ಲಿ ಭೂತಗಳ ಮದುವೆ ಸಾಮಾನ್ಯ. ಜನರು ಮದುವೆಯಾಗದೆ ಸಾವನ್ನಪ್ಪಿದ್ರೆ ಸತ್ತ ನಂತ್ರ ಸಂಬಂಧಿಕರಿಗೆ ತೊಂದರೆ ನೀಡುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಜನರಿಗಿದೆ. ಸತ್ತ ಮೇಲೆ ಅವರಿಗೆ ಯಾರ ಜೊತೆ ಇರೋದಿಲ್ಲ. ಅವರು ಆ ಪ್ರಪಂಚದಲ್ಲಿ ಒಂಟಿಯಾಗಿರಬೇಕಾಗುತ್ತದೆ. ಇದ್ರಿಂದ ಕೋಪಗೊಳ್ಳುವ ಅವರು ಸಂಬಂಧಿಕರಿಗೆ ತೊಂದರೆ ನೀಡ್ತಾರೆ ಎಂದು ನಂಬಿರುವ ಜನರು, ಸತ್ತ ಮೇಲೆ ಮದುವೆ ಮಾಡ್ತಾರೆ.

ಮದುವೆಯಾಗದೆ ಸಾವನ್ನಪ್ಪಿದ ಎರಡು ಶವಗಳಿಗೆ ಈ ಮದುವೆ ನಡೆಯುತ್ತದೆ. ಸಾಮಾನ್ಯ ಮದುವೆಯಂತೆ ಇಲ್ಲಿ ಶವಗಳ ಮದುವೆ ಮಾಡಲಾಗುತ್ತದೆ. ಮದುವೆಯ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮರಣಾನಂತರದ ಜೀವನ ಸುಖವಾಗಿರಲಿ ಎಂದು ಬಯಸುತ್ತಾರೆ. ಮದುವೆಯ ಸಮಯದಲ್ಲಿ ಹುಡುಗಿಯ ಮೂಳೆಗಳನ್ನು ಹುಡುಗನ ಸಮಾಧಿಯಲ್ಲಿ ಹಾಕಲಾಗುತ್ತದೆ.

ಚೀನಾದಲ್ಲಿ ಒಂದೇ ದಿನದ ವ್ಯಾಲಿಡಿಟಿ ಇರೋ ಮದುವೆ : ಕಾರಣ ಕೇಳಿದ್ರೆ ಅಚ್ಚರಿ ಗ್ಯಾರಂಟಿ

ವಧುವಿನ ಮನೆಯವರು ವಧುವಿಗೆ ಹಣದ ಬೇಡಿಕೆ ಇಟ್ಟು, ವರದಕ್ಷಿಣೆ ಪಡೆಯುತ್ತಾರೆ. ಅದು ಕೇವಲ ಕಾಗದದ ರೂಪದಲ್ಲಿರುತ್ತದೆ. ನಿಜವಾಗಿ ಹಣ ಪಡೆಯುವುದಿಲ್ಲ. ಚೀನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಅಲ್ಲಿನ ಪುರುಷರಿಗೆ ಮದುವೆ ಆಗ್ತಿಲ್ಲ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಶವಕ್ಕೂ ಇಲ್ಲಿ ಬೇಡಿಕೆ ಹೆಚ್ಚಿದೆ. ಹೆಣ್ಣು ಮಕ್ಕಳ ಶವವನ್ನು ಐದು ಲಕ್ಷಕ್ಕೆ ಮಾರಾಟ ಮಾಡುವವರಿದ್ದಾರೆ. ಹಣಕ್ಕೋಸ್ಕರ ಕೆಲ ಹೆಣ್ಣು ಮಕ್ಕಳನ್ನು ಕಿಡ್ನಪ್ (Kidnap) ಮಾಡಿ ನಂತ್ರ ಅವರನ್ನು ಕೊಂದು ಶವದೊಂದಿಗೆ ಮದುವೆ ಮಾಡುವ ಅನೇಕ ಘಟನೆಗಳು ಇಲ್ಲಿ ವರದಿಯಾಗುತ್ತಿರುತ್ತವೆ. ಸಾವಿನ ನಂತ್ರ ಮೃತರಿಗೆ ಖುಷಿ ನೀಡುವುದೇ ಈ ಪದ್ಧತಿ ಉದ್ದೇಶವಾಗಿದೆ.  

Latest Videos
Follow Us:
Download App:
  • android
  • ios