ಮನೆ ಸೊಸೆಗೆ ಸೇರಬೇಕಾದ ಬೆಂಡೋಲೆ ಮೊಮ್ಮಗಳು ಸಾರಾ ಪಾಲಾದ ಕತೆ ಹೇಳಿದ ನಟಿ ಶರ್ಮಿಳಾ

ಅಜ್ಜಿಯ ಸೀರೆ ಅಮ್ಮನ ಆಭರಣ ಇಂತಹ ಕೆಲವೊಂದು ಅಮೂಲ್ಯ ವಸ್ತುಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಹೋಗುತ್ತದೆ. ಕೆಲವೊಂದು ಮನೆಗೆ ಬಂದ ಸೊಸೆಗೆ ಸೇರಿದರೆ ಮತ್ತೆ ಕೆಲವೊಂದು ಮಗಳ ಪಾಲಾಗುತ್ತದೆ. ಆದರೆ ಸೈಫ್ ಅಲಿಖಾನ್ ಮನೆಯಲ್ಲಿ ಈ ಆಭರಣ ಮೊಮ್ಮಗಳ ಪಾಲಾಗಿದೆ. ಈ ವಿಚಾರವನ್ನು ಸ್ವತಃ ಶರ್ಮಿಳಾ ಠಾಗೋರ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

Actress Sharmila told the story of her wedding earrings which belongs to daughter in law of the family but goes to grand daughter Sara Ali Khan akb

ಅಜ್ಜಿಯ ಸೀರೆ ಅಮ್ಮನ ಆಭರಣ ಇಂತಹ ಕೆಲವೊಂದು ಅಮೂಲ್ಯ ವಸ್ತುಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಹೋಗುತ್ತದೆ. ಕೆಲವೊಂದು ಮನೆಗೆ ಬಂದ ಸೊಸೆಗೆ ಸೇರಿದರೆ ಮತ್ತೆ ಕೆಲವೊಂದು ಮಗಳ ಪಾಲಾಗುತ್ತದೆ. ಆದರೆ ಸೈಫ್ ಅಲಿಖಾನ್ ಮನೆಯಲ್ಲಿ ಈ ಆಭರಣ ಮೊಮ್ಮಗಳ ಪಾಲಾಗಿದೆ. ಈ ವಿಚಾರವನ್ನು ಸ್ವತಃ ಶರ್ಮಿಳಾ ಠಾಗೋರ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಅಪ್ಪ ಸೈಫ್ ಅಲಿ ಖಾನ್ ಅಮ್ಮ ಅಮೃತಾ ಸಿಂಗ್ ಬೇರೆ ಬೇರೆಯಾದರೂ ಪಟೌಡಿ ಕುಟುಂಬದೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ ಈ ಸ್ಟಾರ್ ಕಿಡ್ ಸಾರಾ ಆಲಿ ಖಾನ್, ಅಜ್ಜಿ ಬಾಲಿವುಡ್ ನಟಿ ಶರ್ಮಿಳಾ ಠಾಗೋರ್ ಜೊತೆಗೆ ತಾನು ಒಳ್ಳೆಯ ಸಮಯ ಕಳೆಯುತ್ತಿರುವ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ ಸಾರಾ ಅಲಿ ಖಾನ್. ಹೀಗಿರುವಾಗ ಮೊಮ್ಮಗಳು ಸಾರಾ ಜೊತೆ ತನ್ನ ಒಡನಾಟ ಎಂತದ್ದು ಅಜ್ಜಿ ಎಂದರೆ ಆಕೆಗೆ ಎಷ್ಟು ಇಷ್ಟ ಎಂಬುದನ್ನು ಸ್ವತಃ ಶರ್ಮಿಳಾ ಠಾಗೋರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಮುಖ ಮುಚ್ಚಿಕೊಂಡು ಗೆಳತಿ ಪಾಲಕ್ ಜೊತೆ ಹೊಸ ವರ್ಷ ಸ್ವಾಗತಿಸಿದ ಸೈಫ್ ಪುತ್ರ

ಈ ಹಿಂದೆ ಶರ್ಮಿಳಾ ಮೊಮ್ಮಗಳು ತನ್ನ ಅಜ್ಜಿಯ ಕಿವಿಯೋಲೆಯನ್ನು ತಾನು ತೆಗೆದುಕೊಂಡ ಬಗ್ಗೆ ಹೇಳಿಕೊಂಡಿದ್ದರು. ಇದಾದ ನಂತರ ಈಗ ಅಜ್ಜಿ ಶರ್ಮಿಳಾ ಕೂಡ ತಮ್ಮ ಕಿವಿಯೋಲೆ ಸಾರಾಳ ಪಾಲಾದ ಬಗ್ಗೆ ಮಾತನಾಡಿ ಅದರ ಹಿನ್ನೆಲೆಯನ್ನು ಹೇಳಿದ್ದಾರೆ.  ಕೌನ್ ಬನೇಗಾ ಕರೋಡ್ಪತಿ ಶೋಗೆ ಬಂದಿದ್ದ ಶರ್ಮಿಳಾ ಅವರು ಕಾರ್ಯಕ್ರಮ ನಿರೂಪಕ ಅಮಿತಾಭ್ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಾರಾಳಿಗೆ ಅವುಗಳ ಮೇಲೆ ಇದ್ದ ವ್ಯಾಮೋಹವನ್ನು ಹೇಳಿಕೊಂಡಿದ್ದಾರೆ. ಈ ಕಿವಿಯೋಲೆಗಳನ್ನು ಮೂಲತಃ ಶರ್ಮಿಳಾ ಅವರು ತಮ್ಮ ಮೊದಲ ಸೊಸೆ, ಸೈಫ್ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಗೆ ನೀಡಿದ್ದರಂತೆ. ಇಬ್ರಾಹಿಂ ಹುಟ್ಟಿದ ವೇಳೆ ಈ ಆಭರಣವನ್ನು ಉಡುಗೊರೆಯಾಗಿ ಸೊಸೆಗೆ ನೀಡಿದ್ದರಂತೆ ಶರ್ಮಿಳಾ.

ಆ ಆಭರಣಗಳು ಕುಟುಂಬದ ಪರಂಪರೆಯಾಗಿದ್ದು ಇದು ಮುಂದೆ ಸೈಫ್ ಪುತ್ರ ಇಬ್ರಾಹಿಂ ಖಾನ್ ಪತ್ನಿಯ ಪಾಲಾಗಬೇಕಿತ್ತು. ಆದರೆ ಅದನ್ನು ಬೇರೆಯವರು ತೆಗೆದುಕೊಂಡಿದ್ದಾರೆ ಯಾರು ಎಂದು ಗೆಸ್ ಮಾಡಿ ಎಂದು ನಗುತ್ತಾ ಕೇಳಿದ್ದರು ಶರ್ಮಿಳಾ. ಈ ವೇಳೆ ಅಮಿತಾಭ್, ಯಾರು ಸಾರಾ ಅಲಿಖಾನಾ ಅಂತ ಕೇಳಿದ್ದರು. ಅದಕ್ಕೆ ಶರ್ಮಿಳಾ ತಲೆ ಅಲ್ಲಾಡಿಸುತ್ತಾ ಹೌದು ಎಂದು ಹೇಳಿದ್ದರು.  ನಾನು ಮದುವೆಯಲ್ಲಿ ಧರಿಸಿದ್ದ ಬೆಂಡೋಲೆ ಇದಾಗಿತ್ತು. ಅದನ್ನು ನಾನು ಸೊಸೆ ಅಮೃತಾಗೆ ಕೊಟ್ಟಿದೆ. ಇಬ್ರಾಹಿಂ ದೊಡ್ಡವನಾದ ನಂತರ ಅದು ಆತನ ಪತ್ನಿಗೆ ಸೇರಬೇಕಿತ್ತು ಎಂದು ಹೇಳಿದ್ದರು ಶರ್ಮಿಳಾ. 

ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!

ಝರಾ ಹಕ್ತೆ ಝರಾ ಬಚ್ಕೆ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸಾರಾ ಅಲಿ ಖಾನ್ ಅವರು  ಕೂಡ ಶರ್ಮಿಳಾ ಅವರ ಈ ಬೆಂಡೋಲೆ ಕತೆ ಹೇಳಿದ್ದರು. ಅದರಲ್ಲಿ ಆಕೆ ಹೇಳಿದ್ದಳು ಈ ಬೆಂಡೋಲೆ ತನಗೇ ಮಾತ್ರ ಸೇರಬೇಕೆಂದು ತನ್ನ ಅಜ್ಜ ಲಿಖಿತ  ರೂಪದಲ್ಲಿ ಘೋಷಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದರು. 

ಇನ್ನು ಶರ್ಮಿಳಾ ಠಾಗೋರ್ ಬಾಲಿವುಡ್‌ನ 60-70ರ ದಶಕದ ಖ್ಯಾತ ನಟಿ. 14 ವರ್ಷದವರಿರುವಾಗಲೇ ಸಿನಿಮಾಗೆ ಬಂದ ಶರ್ಮಿಳಾ ಠಾಗೋರ್ ನಂತರ ಕ್ರಿಕೆಟಿಗ ಮನ್ಸೂರ್ ಆಲಿ ಖಾನ್ ಅವರನ್ನು ಮದುವೆಯಾಗಿ ಈಗ ಮಕ್ಕಳು ಮೊಮ್ಮಕ್ಕಳೊಂದಿಗೆ ಜೀವನ ಮಾಡುತ್ತಿರುವ ಶರ್ಮಿಳಾ ಅವರಿಗೆ ಈಗ ಇಳಿ ಹರೆಯ.  ವಯಸ್ಸು 80ಕ್ಕೆ ಸಮೀಪದಲ್ಲಿದ್ದರೂ, ಅದೇ ಮ್ಯಾಜಿಕಲ್ ಲುಕ್ ಸ್ಟೆಲ್‌ನಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ ಶರ್ಮಿಳಾ. 

ಅಮೃತಾ ಜೊತೆ ಮದ್ವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದ ಸೈಫ್‌: KWK 8 ಶೋನಲ್ಲಿ ಮಗನ ಕಿತಾಪತಿ ನೆನೆದ ಅಮ್ಮ

Latest Videos
Follow Us:
Download App:
  • android
  • ios