Relationship Tips: 14 ವರ್ಷದಿಂದ ಒಂದೇ ಹುಡುಗಿ ಡೇಟ್ ಮಾಡ್ತಿರೋ ನಟ ನೀಡಿರೋ ಸಲಹೆ ಇದು
ಹೊಸ ಸಂಬಂಧ ದಿನ ಕಳೆದಂತೆ ಹಳಸಲು ಶುರುವಾಗುತ್ತದೆ. ಸಂಬಂಧ ಸದಾ ತಾಜಾ ಇರಬೇಕೆಂದ್ರೆ ಇಬ್ಬರ ಪರಿಶ್ರಮ ಮುಖ್ಯ. ಪ್ರೀತಿಯಲ್ಲಿ ಮುಳ್ಳು ಸಿಗಬಾರದು ಅಂದ್ರೆ ಇಬ್ಬರು ನಿರಂತರ ಪ್ರಯತ್ನ ಮಾಡ್ಬೇಕು. ಕೆಲವೊಂದು ವಿಷ್ಯವನ್ನು ತಿಳಿದಿರಬೇಕು.
ಭುವನ್ ಬಾಮ್ ಯುಟ್ಯೂಬ್ ಜಗತ್ತಿನಲ್ಲಿ ಚಿರಪರಿಚಿತ ವ್ಯಕ್ತಿ. ನಟ ಮತ್ತು ಗಾಯಕರಾಗಿ ಭುವನ್ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ನಟ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ 'ತಾಜಾ ಖಬರ್' ಮತ್ತು ವೆಬ್ ಸರಣಿ ರಾಫ್ತಾ-ರಫ್ತಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ವೃತ್ತಿಜೀವನದಲ್ಲಿ ಯಶಸ್ಸು ಕಂಡಿರುವ ಭುವನ್ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಗಮನ ಸೆಳೆದಿದ್ದಾರೆ. ಅವರನ್ನು ಡೌನ್ ಟು ಅರ್ಥ್ ಎನ್ನಬಹುದು.
ಭುವನ್ (Bhuvan) ಗೆ ಹಣ, ಖ್ಯಾತಿ ಎರಡೂ ಇದೆ. ಆದ್ರೂ ಭುವನ್ ಬದಲಾಗಿಲ್ಲ. ಈಗ್ಲೂ ತಮ್ಮ ಶಾಲಾ ಸಮಯದಲ್ಲಿ ಮನಸ್ಸು ಗೆದ್ದ ಹುಡುಗಿ ಜೊತೆಗಿದ್ದಾರೆ. ಆಕೆಯ ಜೊತೆಯೇ ಡೇಟಿಂಗ್ (Dating ) ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಭುವನ್, 14 ವರ್ಷಗಳಿಂದ ಒಂದೇ ಹುಡುಗಿಯನ್ನು ಡೇಟಿಂಗ್ ಮಾಡುತ್ತಿದ್ದೇನೆ ಎಂದಿದ್ದರು. ಸಂದರ್ಶನ (Interview) ದಲ್ಲಿ ಭುವನ್, ಸಂಗಾತಿ ಹೆಸರನ್ನು ಹೇಳಿಲ್ಲ. ಆದ್ರೆ ಮಾಧ್ಯಮಗಳು ಭುವನ್ ಡೇಟ್ ಮಾಡ್ತಿರುವ ಹುಡುಗಿ ಅರ್ಪಿತಾ ಭಟ್ಟಾಚಾರ್ಯ ಎಂದಿವೆ. ಸಂದರ್ಶನದಲ್ಲಿ ಪ್ರೀತಿ ವಿಷ್ಯ ಹೇಳಿದ ಭುವನ್, ದೀರ್ಘಕಾಲ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಸಲಹೆಯನ್ನು ನೀಡಿದ್ದಾರೆ. ಈಗಿನ ದಿನಗಳಲ್ಲಿ ಪ್ರೇಮ ಸಂಬಂಧ ವಾರ ಇರೋದೇ ಕಷ್ಟ ಎನ್ನುವಂತಾಗಿದೆ. ಒಂದೆಡರು ವರ್ಷದವರೆಗೆ ಒಬ್ಬರನ್ನೇ ಡೇಟಿಂಗ್ ಮಾಡಿದ್ರೆ ಅದು ದೊಡ್ಡ ವಿಷ್ಯ. ಹಾಗಿರುವಾಗ 14 ವರ್ಷ ಒಂದೇ ಹುಡುಗಿ ಜೊತೆಗಿರಬೇಕೆಂದ್ರೆ ಅವರು ಪಾಲಿಸುವ ನಿಯಮವೇನು ಎಂಬುದನ್ನು ಈಗಿನ ಯುವಜನತೆ ತಿಳಿಯಲೇಬೇಕು.
BEHAVIOR TIPS: ಜನ ನಿಮಗೆ ಗೌರವಿಸ್ತಾ ಇಲ್ಲ ಅನಿಸ್ತಾ ಇದ್ಯಾ? ಏನಿರಬಹುದು ಕಾರಣ?
ಭುವನ್ ಪ್ರಕಾರ, ಅವರು ಎಂದಿಗೂ ಒಟ್ಟಿಗೆ ಇಲ್ಲವಂತೆ. ಯಾವಾಗ್ಲೂ ಸಂಬಂಧಕ್ಕೆ ವೈಯಕ್ತಿಕ ಜಾಗವನ್ನು ಕೊಡುತ್ತಾರಂತೆ. ಇಬ್ಬರ ಮಧ್ಯೆ ಸಾಕಷ್ಟು ಸ್ಪೇಸ್ (Space) ಇದೆಯಂತೆ. ಇಷ್ಟೇ ಅಲ್ಲ ಯಾವಾಗಲೂ ಪರಸ್ಪರ ನಾವು ಬೆಂಬಲಿಸುತ್ತೇವೆ. ನಮ್ಮಿಬ್ಬರ ಆಲೋಚನೆ ಸಂಪೂರ್ಣ ಭಿನ್ನವಾಗಿದೆ. ಹಾಗಾಗಿ ಒಬ್ಬರು ಯೋಚಿಸಲು ಸಾಧ್ಯವಾಗದಿದ್ದರೆ ಅದನ್ನು ಇನ್ನೊಬ್ಬರು ಯೋಚಿಸುತ್ತಾರೆ. ಇದ್ರಿಂದಾಗಿ ಪ್ರತಿ ವಿಷ್ಯವನ್ನೂ ನಾವು ಚರ್ಚಿಸಿ, ಒಳ್ಳೆಯ ನಿರ್ಧಾರತೆಗೆದುಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಭುವನ್.
ಅಹಂಕಾರ: ಯಾರನ್ನೂ ಮುಕ್ತವಾಗಿ ಪ್ರೀತಿಸಲು ಅಹಂಕಾರ ಬಿಡೋದಿಲ್ಲ. ಇದರಿಂದ ಹೆಚ್ಚಿನ ಸಂಬಂಧಗಳು ಹಾಳಾಗುತ್ತವೆ. ಪ್ರೀತಿಸುವ ವ್ಯಕ್ತಿ ಜೊತೆ ಮಾತ್ರವಲ್ಲ, ಸದಾ ನಿಮ್ಮ ಜೊತೆಗಿರಬೇಕು ಎಂಬ ವ್ಯಕ್ತಿ ಜೊತೆಯೂ ನೀವು ಅಹಂ ತರಬಾರದು. ಭುವನ್ ಪ್ರಕಾರ, ಸಂಬಂಧದಲ್ಲಿ ಎಂದಿಗೂ ಅಹಂ ನುಸುಳಬಾರದು. ಅಹಂಕಾರವನ್ನು ದೂರವಿಟ್ರೆ ದೀರ್ಘಕಾಲ ಸಂಬಂಧ ಸುಂದರವಾಗಿರುತ್ತದೆ.
ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!
ಪರಸ್ಪರರ ಮಾತು ಕೇಳಿ: ಪ್ರೀತಿಯಲ್ಲಿರುವ ವ್ಯಕ್ತಿ ಕೇಳಿಸಿಕೊಳ್ಳುವ ಗುಣ ಹೊಂದಿರಬೇಕು. ಸಂಗಾತಿಯ ಮಾತಿಗೂ ಬೆಲೆ ನೀಡಬೇಕು. ಒಂದು ವಿಷ್ಯವನ್ನು ಇಬ್ಬರೂ ಚರ್ಚಿಸಬೇಕು. ಸಂಗಾತಿ ಯಾವ ದೃಷ್ಟಿಯಿಂದ ಹೇಳ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಅವರ ಭಾವನೆಗೆ ಮಾನ್ಯತೆ ನೀಡ್ಬೇಕು. ಆಗ ಕಷ್ಟದ ಸಂದರ್ಭವನ್ನು ಇಬ್ಬರು ಆರಾಮವಾಗಿ ಜಯಿಸಬಹುದು. ಭುವನ್ ಪ್ರಕಾರ, ಕೇಳಿದಾಗ ಬಗೆಹರಿಯುವ ಸಮಸ್ಯೆ ಮಾತನಾಡಿದಾಗ ಬಗೆಹರಿಯೋದಿಲ್ಲ ಎನ್ನುತ್ತಾರೆ.
ಸ್ವಾಭಿಮಾನಕ್ಕೆ ನೀಡಿ ಮನ್ನಣೆ: ನಮ್ಮ ಆತ್ಮಗೌರವ ಬಹಳ ಮುಖ್ಯ. ಸಂಬಂಧದಲ್ಲಿ ಅನೇಕ ಬಾರಿ ಸ್ವಾಭಿಮಾನಕ್ಕೆ ವಿರುದ್ಧವಾಗಿ ನಡೆಯಬೇಕಾಗುತ್ತದೆ. ಅದ್ರ ಜೊತೆ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನರು ಅದರಂತೆ ನಡೆಯುತ್ತಾರೆ. ಆದ್ರೆ ಇದು ತಪ್ಪು. ಸಂಬಂಧದಲ್ಲಿ ನಮ್ಮ ಸ್ವಾಭಿಮಾನಕ್ಕೆ ಬೆಲೆಯಿಲ್ಲವೆಂದ್ರೆ ಅದು ಆರೋಗ್ಯಕರ ಸಂಬಂಧ ಎನ್ನಿಸಿಕೊಳ್ಳಲಾರದು. ಪ್ರೀತಿಸುವ ಸಂಗಾತಿ ಎಂದಿಗೂ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಮಾಡೋದಿಲ್ಲ. ಒಂದ್ವೇಳೆ ಪದೇ ಪದೇ ಇದು ಆಗ್ತಿದೆ ಅಂದ್ರೆ ಆ ಸಂಬಂಧದಿಂದ ನೀವು ಹೊರಗೆ ಬರೋದು ಒಳ್ಳೆಯದು. ಯಾಕೆಂದ್ರೆ ಅಲ್ಲಿ ಪ್ರೀತಿಯಿಲ್ಲ ಎನ್ನುವುದು ಸ್ಪಷ್ಟ.