Asianet Suvarna News Asianet Suvarna News

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ!

ನನ್ನ ಗೆಳೆಯ ಸಾರ್ವಜನಿಕ ಪ್ರದೇಶಗಳಲ್ಲಿ ತೀವ್ರವಾಗಿ ಉದ್ರೇಕಗೊಂಡು ಸೆಕ್ಸ್ ಮಾಡುವ ಆಸಕ್ತಿ ತೋರಿಸುತ್ತಾನೆ. ಏಕಾಂತದಲ್ಲಿ ಹಾಗಿರುವುದಿಲ್ಲ. ಏನೀ ಸಮಸ್ಯೆ?

about Agoraphilia is thrill of doing sex in public places
Author
Bengaluru, First Published Sep 20, 2020, 4:05 PM IST
  • Facebook
  • Twitter
  • Whatsapp

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆರಡು. ನನಗೆ ಮದುವೆ ಫಿಕ್ಸ್ ಆಗಿದೆ. ಹುಡುಗನ ವಯಸ್ಸು ಇಪ್ಪತ್ತೈದು. ಒಂದು ವರ್ಷದಿಂದ ನಾನು ಅವನನ್ನು ಬಲ್ಲೆ. ಅವನ ಜೊತೆ ಅವನ ಅಪಾರ್ಟ್‌ಮೆಂಟ್‌ಗೂ ಹೋಗಿದ್ದೇನೆ. ಪಾರ್ಕ್‌, ಮಾಲ್, ಥಿಯೇಟರ್‌ಗಳಿಗೆ ಹೋಗಿದ್ದೇನೆ. ನಾನು ಆತನಲ್ಲಿ ಗಮನಿಸಿದ ಒಂದು ಕುತೂಹಲದ ಗುಣ ಎಂದರೆ, ಅಪಾರ್ಟ್‌ಮೆಂಟ್‌ನಲ್ಲಿ ನಾವಿಬ್ಬರೇ ಇರುವಾಗ ಆತ ತಣ್ಣಗಿರುತ್ತಾನೆ. ಅಥವಾ ಸೆಕ್ಸ್‌ನಲ್ಲಿ ಹೆಚ್ಚೇನೂ ಆಸಕ್ತಿ ತೋರಿಸುವುದಿಲ್ಲ. ಆದರೆ ಸಾರ್ವಜನಿಕ ಜಾಗಗಳಲ್ಲಿ ಆತ ಹೆಚ್ಚು ಉದ್ರಿಕ್ತನಾಗುತ್ತಾನೆ. ಥಿಯೇಟರ್‌ನ ಒಳಗೆ ಸಿನಿಮಾ ನೋಡುತ್ತಿರುವಾಗ ಆತನಲ್ಲಿ ಸೆಕ್ಸ್ ಆಸಕ್ತಿ ತೀವ್ರವಾಗಿ ಕೆರಳುತ್ತದೆ. ಅಥವಾ ಪಾರ್ಕ್‌ನಲ್ಲಿರುವಾಗ ನನ್ನ ಮೈಯೆಲ್ಲ ಬಳಸಿಕೊಳ್ಳುತ್ತಾನೆ. ಅಲ್ಲಿರುವ ಜನ ನೋಡುತ್ತಿದ್ದಾರೆ ಎಂದು ದೂರ ತಳ್ಳಿದರೂ, ಅವನ ಆಸಕ್ತಿ ಇನ್ನಷ್ಟು ಕೆರಳುತ್ತದೆಯೇ ಹೊರತು ಶಾಂತನಾಗುವುದಿಲ್ಲ. ಇದೊಂದು ಸಮಸ್ಯೆ ಹೊರತುಪಡಿಸಿದರೆ ಚಿನ್ನದಂಥ ಬಾಯ್‌ಫ್ರೆಂಡ್‌. ಇದೇನು ಮಾನಸಿಕ ಸಮಸ್ಯೆಯೇ, ದೈಹಿಕವೇ? ಇದನ್ನು ಬಿಡಿಸುವುದು ಹೇಗೆ?

about Agoraphilia is thrill of doing sex in public places

ಉತ್ತರ: ನೀವಿಬ್ಬರೇ ಇರುವಾಗ ಸೆಕ್ಸ್‌ನಲ್ಲಿ ಆಸಕ್ತಿ ತೋರಿಸದಿದ್ದರೂ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ ಎಂದಿದ್ದೀರಿ. ಇದೊಂದು ಮಾನಸಿಕ ಸಮಸ್ಯೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಅಗೋರಾಫೀಲಿಯಾ ಎನ್ನುತ್ತಾರೆ. ಈ ಸಮಸ್ಯೆ ಹೊಂದಿದವರು ಸಾರ್ವಜನಿಕ ಸ್ಥಳಗಳಲ್ಲಿ, ಹತ್ತಾರು ಮಂದಿ ನೋಡುತ್ತಿದ್ದರೆ ಸೆಕ್ಸ್ ಮಾಡಲು ಇಷ್ಟಪಡುತ್ತಾರೆ. ಅದರಲ್ಲೇ ಹೆಚ್ಚಿನ ಸುಖ ಹೊಂದುತ್ತಾರೆ. ಇದಕ್ಕೆ ಒಂದು ಕಾರಣ ಎಂದರೆ, ಆ ಕ್ರಿಯೆಯಲ್ಲಿ ಸಿಗುವ ಥ್ರಿಲ್. ಏನೋ ಎವರೆಸ್ಟ್ ಹತ್ತಿದಂತಹ ಸಾಹಸ ಮಾಡಿದ ಥ್ರಿಲ್ ಅನ್ನು ಇವರು ಅನುಭವಿಸುತ್ತಾರೆ. ಆದರೆ ಈ ಕ್ರಿಯೆ ಸುರಕ್ಷಿತವೂ ಅಲ್ಲ, ಕಾನೂನಾತ್ಮಕವಾಗಿ ಮಾನ್ಯವೂ ಅಲ್ಲ. ಆದರೆ ಇದರಲ್ಲಿ ತೊಡಗವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂರೋಹಾರ್ಮೋನ್‌ ಡೋಪಮೈನ್ ಬಿಡುಗಡೆ ಆಗುತ್ತದೆ. ಡೋಪಮೈನ್ ಸುಖ, ಸಂತೋಷ ನೀಡುವ ಹಾರ್ಮೋನ್. ಕೆಲವು ಪುರುಷರು, ಕೆಲವೊಮ್ಮೆ ಮಹಿಳೆಯರು ಕೂಡ, ಸಾರ್ವಜನಿಕ ಪ್ರದೇಶಗಳಲ್ಲಿ ನಗ್ನರಾಗುವುದನ್ನು ನೋಡಬಹುದು. ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನೂ ಗಮನಿಸಿರಬಹುದು. ಇದೂ ಅಗೋರಾಫೀಲಿಯಾದ ಒಂದು ವಿಧವೇ.

#Feelfree: ಮೊದಲ ಬಾರಿಗೆ ತುಂಬಾ ನೋವಾಗುತ್ತೆ ಅಂತಾರಲ್ಲ, ನಿಜವಾ? 

ಇದನ್ನು ನೀವು ನಿಮ್ಮ ಭಾವಿ ಪತಿಗೆ ತಿಳಿಸಿಹೇಳಿ. ಇದು ಮಾನಸಿಕ ಸಮಸ್ಯೆಯ ಒಂದು ವಿಧ ಎಂಬುದನ್ನು ಆತ ಹರ್ಟ್ ಆಗದ ಹಾಗೆ ಮನದಟ್ಟು ಮಾಡಿಸಿ, ಇದನ್ನು ಹೋಗಲಾಡಿಸಲು ಕೌನ್ಸೆಲಿಂಗ್ ಅಗತ್ಯ. ಸೆಕ್ಸ್ ಸಾರ್ವಜನಿಕ ಕ್ರಿಯೆ ಅಲ್ಲ, ಅದಕ್ಕೆ ಏಕಾಂತ ಅಗತ್ಯ. ಏಕಾಂತದಲ್ಲಿ ಅದು ಯಾವುದೇ ಜನರ ಭಯವಿಲ್ಲದ, ಸುಂದರ ಹಾಗೂ ಸಂತೋಷಕರ ಕ್ರಿಯೆಯಾಗಿರುತ್ತದೆ ಎಂಬುದು ಅವರಿಗೆ ಮನದಟ್ಟಾದರೆ ಸಾಕು. ಈ ಸಮಸ್ಯೆ ತಲೆದೋರಲು ಸಮಸ್ಯಾತ್ಮಕ ಬಾಲ್ಯದಿಂದ ಹಿಡಿದು ಹಾಸ್ಟೆಲ್‌ ಜೀವನದ ಸಾರ್ವಜನಿಕ ಸೆಕ್ಸ್ ನಡವಳಿಕೆಗಳ ವರೆಗೆ ಬೇರೆಬೇರೆ ಕಾರಣಗಳಿರಬಹುದು. ಅದೇನೇ ಇದ್ದರೂ, ನಿಮ್ಮ ಗಮನ ಸಮಸ್ಯೆಯ ಮೂಲವನ್ನು ಹುಡುಕುವುದರ ಬಗೆಗಲ್ಲ. ಸಮಸ್ಯೆಯ ನಿವಾರಣೆಯ ಕಡೆಗಿರಲಿ. 

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು, ಮುಂದಿನ ವಾರ ಮದುವೆಯಾಗುತ್ತಿದ್ದೇನೆ. ಆದರೆ ನನ್ನ ಶಿಶ್ನ ತುಂಬಾ ಸಣ್ಣದು. ನಿಮಿರಿದಾಗ ಮೂರು ಇಂಚು ದೊಡ್ಡದಾಗಬಹುದು ಅಷ್ಟೇ. ನಾನು ಸಂಗಾತಿಯನ್ನು ತೃಪ್ತಿಪಡಿಸಲು ಸಮರ್ಥನಾ?

ಉತ್ತರ: ನಿಮ್ಮ ಶಿಶ್ನದ ಉದ್ದ ಸಂಗಾತಿಯನ್ನು ತೃಪ್ತಿಪಡಿಸಲು ಸಾಕು. ಸೆಕ್ಸ್‌ನಲ್ಲಿ ಶಿಶ್ನದ ಉದ್ದ ಮುಖ್ಯವಾಗುವುದೇ ಇಲ್ಲ. ನೀವು ಹೇಗೆ ಸಂಗಾತಿಯನ್ನು ಸಂತೋಷದ ಉತ್ತುಂಗಕ್ಕೆ ಒಯ್ಯುತ್ತೀರಿ, ನೀವು ಹೇಗೆ ಸಂತೋಷ ಪಡೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಮುನ್ನಲಿವು ಮುಂತಾದ ಸಂಭೋಗಕ್ಕೆ ಮೊದಲಿನ ಇತರ ಕ್ರಿಯೆಗಳು ತುಂಬಾ ಮುಖ್ಯ. 

Follow Us:
Download App:
  • android
  • ios