Wife Affair: ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯನ ಜೊತೆಯೇ ಪತ್ನಿ ಸೆಕ್ಸ್…ಏನ್ಸಾಡ್ಲಿ?
ಜೀವನದಲ್ಲಿ ನಾವು ಕಲ್ಪನೆ ಮಾಡದ್ದು ನಡೆದು ಹೋಗಿರುತ್ತದೆ. ಆಗ ಏನ್ಮಾಡ್ಬೇಕು ಎಂಬುದು ನನಗೆ ಗೊತ್ತಾಗೋದಿಲ್ಲ. ದಾಂಪತ್ಯ ಜೀವನದಲ್ಲಿ ಕೂಡ ಈ ಗೊಂದಲ ಕಾಡೋದು ಸಾಮಾನ್ಯ. ಪತ್ನಿ ಬೇರೆಯವರ ಜೊತೆಗಿರೋದನ್ನು ನೋಡಿಯೂ ಈತನಿಗೆ ಏನೂ ಮಾಡಲಾಗ್ತಿಲ್ಲ.
ಮೋಸ (Cheating) ಮಾಡಲು ನಾನಾ ಹಾದಿಗಳಿವೆ. ಕೆಲವೊಮ್ಮೆ ಸಂಗಾತಿ (Partner) ಮೋಸ ಮಾಡ್ತಿದ್ದಾರಾ ಎಂಬ ಪ್ರಶ್ನೆ ಕಾಡಿದ್ರೂ ಪ್ರೀತಿ (Love) ಯಲ್ಲಿ ಅದು ಮರೆಮಾಚಿ ಹೋಗುತ್ತದೆ. ಸಂಗಾತಿಯ ಪ್ರೀತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ನಿರಂತರ ಮೋಸ ಮಾಡ್ತಿರುತ್ತಾರೆ. ಆದ್ರೆ ಅದನ್ನು ನಂಬಲು ಇನ್ನೊಬ್ಬ ಸಂಗಾತಿಗೆ ಸಾಧ್ಯವಾಗುವುದಿಲ್ಲ. ಯಾವುದು ಸತ್ಯ (Truth), ಯಾವುದು ಸುಳ್ಳು ಎಂಬ ಗೊಂದಲದಲ್ಲಿಯೇ ಅರ್ಥ ಜೀವನ ಕಳೆದಿರುತ್ತದೆ. ಇಲ್ಲೊಬ್ಬ ವ್ಯಕ್ತಿಯೂ ಈಗ ಉಭಯ ಸಂಕಟದಲ್ಲಿದ್ದಾನೆ. ಪತಿ ಮೋಸ ಮಾಡ್ತಿದ್ದಾಳೆ ಎಂಬುದು ಗೊತ್ತಾಗ್ತಿದೆ. ಆದ್ರೆ ಅದನ್ನು ಒಪ್ಪಿಕೊಂಡು ಮುಂದೆ ಹೋಗಲು ಸಾಧ್ಯವಾಗ್ತಿಲ್ಲ. ಆಕೆಯನ್ನು ಸಹಿಸಿಕೊಂಡು ಜೀವನ ನಡೆಸಲೂ ಆಗ್ತಿಲ್ಲ. ಪತ್ನಿ ಖಿನ್ನತೆ ಹೆಸರಿನಲ್ಲಿ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಿರೋದನ್ನು ನೋಡಿದ ಮೇಲೆ ಈತನಿಗೆ ನಿದ್ರೆ ಬರ್ತಿಲ್ಲ. ಅಷ್ಟಕ್ಕೂ ಆ ವ್ಯಕ್ತಿಯ ಹೆಂಡತಿ ಮಾಡಿದ ಮೋಸವೇನು ಎಂಬುದು ಇಲ್ಲಿದೆ.
ಖಿನ್ನತೆಗೊಳಗಾದ ಪತ್ನಿ : ಆತನಿಗೆ ಮದುವೆಯಾಗಿ ಕೆಲವೇ ಕೆಲವು ವರ್ಷ ಕಳೆದಿದೆ. ಮದುವೆಗೂ ಮುನ್ನವೇ ಪತ್ನಿ ಖಿನ್ನತೆಗೊಳಗಾಗಿದ್ದಳಂತೆ. ಆಕೆ ಮಾನಸಿಕ ಸ್ಥಿತಿ ಸುಧಾರಣೆಗಾಗಿ ಕೌನ್ಸಿಲರ್ ಬಳಿ ಹೋಗ್ತಿದ್ದಾಳೆ. ಆಕೆ ವೈದ್ಯರ ಬಳಿ ಹೋಗೋದು ಇವನಿಗೆ ಸಮಸ್ಯೆಯಲ್ಲ. ಪ್ರತಿಯೊಬ್ಬರಿಗೂ ಅವರ ಆರೋಗ್ಯ ಮುಖ್ಯ. ಪತ್ನಿ ಸದಾ ಸಂತೋಷವಾಗಿರಲಿ ಎಂದು ಬಯಸುವ ನಾನು, ಆಕೆ ಕೌನ್ಸಿಲರ್ ಬಳಿ ಹೋದ್ರೆ ಬೇಸರಪಟ್ಟುಕೊಳ್ಳುವುದಿಲ್ಲ ಎನ್ನುವ ವ್ಯಕ್ತಿ, ಪತ್ನಿಯನ್ನು ತುಂಬಾ ಪ್ರೀತಿಸ್ತಾನಂತೆ.
ಸುರಕ್ಷಿತ ಲೈಂಗಿಕತೆಯ ಮಹತ್ವ ತಿಳಿಸಲು ವೆಜಿಟೇಬಲ್ ಕಾಂಡೋಮ್ !
ಕೌನ್ಸಿಲರ್ ಜೊತೆಯೇ ಪತ್ನಿಯ ಸಂಬಂಧ : ಚಿಕಿತ್ಸೆ ಪಡೆಯುತ್ತಿರೋದು ಸಮಸ್ಯೆಯಲ್ಲ. ಆದ್ರೆ ಚಿಕಿತ್ಸೆ ನೀಡ್ತಿರುವ ವ್ಯಕ್ತಿ ಜೊತೆ ಸಂಬಂಧ ಬೆಳೆಸಿರುವುದು ದೊಡ್ಡ ಆಘಾತ ನೀಡಿದೆ. ಪತ್ನಿ ವೈದ್ಯನ ಜೊತೆ ಸಂಬಂಧ ಬೆಳೆಸಿದ್ದನ್ನು ಪತಿ ಕಣ್ಣಾರೆ ಕಂಡಿದ್ದಾನೆ. ಪ್ರತಿ ದಿನ ವೈದ್ಯರಿಗೆ ರೋಮ್ಯಾಂಟಿಕ್ ಸಂದೇಶಗಳನ್ನು ರವಾನೆ ಮಾಡ್ತಾಳಂತೆ. ಈ ಸತ್ಯ ತಿಳಿದ ದಿನದಿಂದ ಈತನಿಗೆ ನಿದ್ರೆ ಬರ್ತಿಲ್ಲ. ಪತ್ನಿಯನ್ನು ಸ್ವೀಕರಿಸಲು ಸಾಧ್ಯವಾಗ್ತಿಲ್ಲ.
ಪತ್ನಿಯ ವಿಚಿತ್ರ ವರ್ತನೆ : ಪ್ರೀತಿಸುವ ಪತ್ನಿಯನ್ನು ಕಳೆದುಕೊಳ್ಳಲು ಸಾಧ್ಯವಾಗದ ವ್ಯಕ್ತಿ ಒಮ್ಮೆ ಆಕೆ ಜೊತೆ ಈ ವಿಷ್ಯವನ್ನು ಪ್ರಸ್ತಾಪಿಸಿದ್ದಾನೆ. ಆ ಸಮಯದಲ್ಲಿ ಪತ್ನಿ ವರ್ತನೆ ವಿಚಿತ್ರವಾಗಿತ್ತಂತೆ. ಪತ್ನಿ ಬೋಲ್ಡ್ ಆಗಿ ನಡೆದುಕೊಂಡಿದ್ದಳಂತೆ. ಆಕೆಯ ಆ ಅವತಾರವನ್ನು ನಾನೆಂದೂ ನೋಡಿರಲಿಲ್ಲ ಎನ್ನುತ್ತಾನೆ ಪತಿ. ಖಿನ್ನತೆ ಹೆಸರಿನಲ್ಲಿ ಪತ್ನಿ ನನಗೆ ಮೋಸ ಮಾಡ್ತಾಳೆ ಎಂದುಕೊಂಡಿರಲಿಲ್ಲ. ಈ ಬಗ್ಗೆ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ. ನನಗೆ ಏನ್ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾನೆ ಆತ.
Love Tips: ನಿಮಗೊಪ್ಪುವ ಸಂಗಾತಿ ಆಯ್ಕೆ ಹೇಗೆ?
ತಜ್ಞರ ಸಲಹೆ : ಪ್ರೀತಿಸಿದ ವ್ಯಕ್ತಿ ಮೋಸ ಮಾಡಿದ್ರೆ ಅದನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ವಂಚನೆಗೊಳಗಾದ ವ್ಯಕ್ತಿಯು ಅಸಹಾಯಕತೆ ಮತ್ತು ಖಿನ್ನತೆಗೆ ಒಳಗಾಗುತ್ತಾನೆ. ಆದ್ರೆ ಈ ಎಲ್ಲ ನಡೆದ ನಂತ್ರವೂ ನೀವೊಮ್ಮೆ ಪತ್ನಿ ಜೊತೆ ಮಾತನಾಡಿ ಎನ್ನುತ್ತಾರೆ ತಜ್ಞರು. ಪತ್ನಿ ಅನೇಕ ವರ್ಷಗಳಿಂದ ಖಿನ್ನತೆಗೊಳಗಾಗಿದ್ದಾಳೆಂದು ನೀವೇ ಹೇಳ್ತಿದ್ದೀರಿ. ಈ ಸಂದರ್ಭದಲ್ಲಿ ಅವಳ ಬಗ್ಗೆ ತಪ್ಪು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಖಿನ್ನತೆ ಹಿಂದಿನ ಕಾರಣವೇನು ಎಂಬುದನ್ನು ಮೊದಲು ತಿಳಿಯಬೇಕು. ಆಗ ಸಮಸ್ಯೆ ಬಗೆಹರಿಸಬಹುದು. ಪತ್ನಿ ಜೊತೆ ನೀವಿರುವುದು ಬಹಳ ಮುಖ್ಯ. ಆಕೆಯನ್ನು ಖಿನ್ನತೆಯಿಂದ ಹೊರಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಪ್ರೀತಿಯಿಂದಲೇ ಇದು ನಡೆಯಬೇಕು. ನೀವು ಆಕೆಯನ್ನು ಎಷ್ಟು ಪ್ರೀತಿ ಮಾಡ್ತೀರಿ ಎಂಬುದನ್ನು ಆಕೆಗೆ ತಿಳಿಸಬೇಕು. ಆದಷ್ಟು ಸಮಯವನ್ನು ಆಕೆ ಜೊತೆ ಕಳೆಯಿರಿ. ನಿಮ್ಮಲ್ಲಿರುವ ಯಾವುದೋ ಕೊರತೆ ವೈದ್ಯರ ಹತ್ತಿರ ಆಕೆಯನ್ನು ಕರೆದೊಯ್ದಿರಬಹುದು. ಹಾಗಾಗಿ ಆ ನ್ಯೂನ್ಯತೆಯನ್ನು ತುಂಬಲು ಪ್ರಯತ್ನಿಸಿ. ಆಕೆ ಮೇಲೆ ಆರೋಪ ಮಾಡುವ ಮೊದಲು ಎಲ್ಲಿ ತಪ್ಪಾಗಿದೆ ಎಂಬುದನ್ನು ಪರೀಕ್ಷಿಸಿ ಎನ್ನುತ್ತಾರೆ ತಜ್ಞರು.