Love Breakup: ವಿವಾಹಿತನ ಜೊತೆ ಸಂಬಂಧ ಬೆಳೆಸಿ ನೋವುಂಡ ಹುಡುಗಿ

ಪ್ರೀತಿಯಲ್ಲಿ ಯಾವಾಗ ಮೋಸವಾಗುತ್ತೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಜೀವನ ಪರ್ಯಂತ ನಿನ್ನೊಂದಿಗಿರ್ತೇನೆ ಎಂದವರೆ ಬಿಟ್ಟು ಹೋಗ್ತಾರೆ. ಆ ವಿರಹದ ನೋವನ್ನು ಸಹಿಸಲು ಸಾಧ್ಯವಿಲ್ಲ. ಅದ್ರಲ್ಲೂ ಎರಡು ಬಾರಿ ಮೋಸವಾದ್ರೆ…
 

A Girl Who Fell In Love And Cheated A Second Time

ಪ್ರೀತಿ (Love)ಯಲ್ಲಿ ಮೋಸ (Cheating) ಹೋದಾಗ ಅದ್ರಿಂದ ಹೊರ ಬರುವುದು ಸುಲಭವಲ್ಲ. ಮನಸ್ಸು ಸಂಪೂರ್ಣ ಕುಗ್ಗಿರುತ್ತದೆ. ಜೀವನ ಬೇಡವೆನ್ನುವ ಭಾವನೆ ಮೂಡುತ್ತದೆ. ಹಳೆ ನೆನಪುಗಳ ಜೊತೆ ಒಂಟಿತನ ಮನಸ್ಸನ್ನು ಕಿತ್ತು ತಿನ್ನುತ್ತದೆ. ಹೃದಯ ಒಡೆದು ಹೋದ ನೋವಿನಿಂದ ಚೇತರಿಸಿಕೊಂಡು ಮತ್ತೆ ಸಹಜ ಸ್ಥಿತಿಗೆ ಬರಲು ಕೆಲವರಿಗೆ ವರ್ಷಗಳೇ ಬೇಕು. ಈ ಬ್ರೇಕ್ ಅಪ್ (Break Up) ನೋವಿನಲ್ಲಿ ಆಸರೆಯಾಗಿ ಯಾರೂ ಸಿಕ್ಕಿದ್ರೂ ಮನಸ್ಸು ಅವರನ್ನು ಒಪ್ಪಿಕೊಳ್ಳುತ್ತದೆ. ತಪ್ಪುಗಳ ಬಗ್ಗೆ ಆಲೋಚನೆ ಮಾಡದೆ ಪ್ರೀತಿ ಸಿಕ್ಕಿದೆ ಎಂಬ ಖುಷಿಯಲ್ಲಿ ಜನರು ತೇಲಾಡುತ್ತಾರೆ. ಈ ಹುಡುಗಿಗೆ ಕೂಡ ಅದೇ ಆಗಿದೆ. ಬ್ರೇಕ್ ಅಪ್ ನೋವಿನಲ್ಲಿದ್ದವಳಿಗೆ ಇನ್ನೊಂದು ಜೀವನ ಆಸರೆ ಸಿಕ್ಕಿತ್ತು. ಆದ್ರೆ ಕೊನೆಯಲ್ಲಿ ಆಕೆ ನಿರೀಕ್ಷಿಸದ ಘಟನೆ ನಡೆಯಿತು. ಮತ್ತೆ ನರಕಯಾತನೆ ಅನುಭವಿಸಬೇಕಾಯ್ತು. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಹೇಳಿಕೊಂಡ ನೋವಿನ ಕಥೆಯನ್ನು ನಾವಿಂದು ಹೇಳ್ತೇವೆ.

ಕೈಕೊಟ್ಟ ಪ್ರೇಮಿ : ಇದು 2018ರಲ್ಲಿ ನಡೆದ ಘಟನೆ. ಹುಡುಗಿಯ ಮೊದಲ ಪ್ರೇಮಿ ಕೈಕೊಟ್ಟಿದ್ದನಂತೆ. ಇನ್ನೊಂದು ಹುಡುಗಿಗಾಗಿ ಈಕೆಯಿಂದ ದೂರವಾಗಿದ್ದನಂತೆ. ಆತನ ನೆನಪಿನಲ್ಲಿ ಆಕೆ ನಿದ್ರೆ ಬಿಟ್ಟಿದ್ದಳಂತೆ. ಖಿನ್ನತೆ, ಕೀಳರಿಮೆ ಆಕೆಯನ್ನು ಕಾಡ್ತಿತ್ತಂತೆ. 

ರಾಶಿ ಪ್ರಕಾರ ನೀವು ಈ ಸ್ವಭಾವ ಬದಲಿಸ್ಕೊಂಡ್ರೆ ಹೆಚ್ಚುತ್ತೆ ದಾಂಪತ್ಯಸುಖ!

ಸಿಕ್ಕಿತ್ತು ಒಂದು ಆಸರೆ : ಬ್ರೇಕ್ ಅಪ್ ನೋವಿನಿಂದ ಹೊರ ಬರಲು ನಿರ್ಧರಿಸಿದ್ದ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಕವಿತೆಗಳನ್ನು ಹಂಚಿಕೊಳ್ಳುತ್ತಿದ್ದಳಂತೆ. ಕವಿತೆಗಳ ವೇದಿಕೆಯಲ್ಲಿ ಅನೇಕ ನೋವಿನ ಕವಿತೆಗಳನ್ನು ಹಾಕ್ತಿದ್ದಳಂತೆ. ಒಂದು ದಿನ ಕವಿತೆ ಪೋಸ್ಟ್ ಮಾಡ್ತಿದ್ದಂತೆ ಸಂದೇಶವೊಂದು ಬಂದಿತ್ತಂತೆ. ನಿಮ್ಮ ಕವಿತೆಗಳು ನೀವು ತುಂಬಾ ದುಃಖದಲ್ಲಿದ್ದೀರಿ ಎಂಬುದನ್ನು ತೋರಿಸುತ್ತಿದೆ. ನೀವು ಹುಷಾರಾಗಿದ್ದೀರಿ ಅಲ್ಲವೆ ಎಂದು ಪ್ರಶ್ನೆ ಕೇಳಿದ್ದರಂತೆ. ಇದೇ ಮೊದಲ ಬಾರಿ ಹೇಗಿದ್ದೀರಾ ಎಂಬ ಪ್ರಶ್ನೆ ಆಕೆಗೆ ಖುಷಿ ನೀಡಿತ್ತಂತೆ.  

ಮೊದಲ ಬಾರಿ ಭೇಟಿ : ಆ ದಿನ ರಾತ್ರಿಯಿಂದಲೇ ಇಬ್ಬರ ಮಧ್ಯೆ ಚಾಟಿಂಗ್ ಶುರುವಾಗಿತ್ತಂತೆ. ಫೋನ್ ಮಾಡಿ ಮಾತನಾಡ್ತಿದ್ದ ಸುರೇಶ್ ಗೆ ಹುಡುಗಿ ತನ್ನೆಲ್ಲ ನೋವು ಹೇಳಿಕೊಂಡಿದ್ದಳಂತೆ. ಇಬ್ಬರ ಮಧ್ಯೆ ಮಾತು ಹೆಚ್ಚಾಗ್ತಿದ್ದಂತೆ ಇಬ್ಬರು ಭೇಟಿಗೆ ನಿರ್ಧರಿಸಿದ್ದರಂತೆ. ಆತನನ್ನು ನೋಡಲು ನಾನು ತುಂಬಾ ಕಾತುರನಾಗಿದ್ದೆ. ಆತನ ಮಾತುಗಳು ನನ್ನ ನೋವನ್ನು ಮರೆಸಿತ್ತು ಎನ್ನುತ್ತಾಳೆ ಹುಡುಗಿ. ಆಕೆ ಕಾದಿದ್ದ ದಿನ ಬಂದಿತ್ತಂತೆ. ಯಂಗ್ ಆಗಿರ್ತಾನೆಂದುಕೊಂಡಿದ್ದ ಹುಡುಗಿಗೆ ಆತನನ್ನು ನೋಡ್ತಿದ್ದಂತೆ ಬೇಸರವಾಗಿತ್ತಂತೆ. ಆಕೆಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದ ಸುರೇಶ್ ಗೆ ಮದುವೆ ಕೂಡ ಆಗಿತ್ತಂತೆ.

ಮುಂದುವರೆದಿತ್ತು ಇಬ್ಬರ ಪ್ರೀತಿ : ಮದುವೆಯಾಗಿದೆ ಎಂಬ ಸಂಗತಿ ತಿಳಿದ್ರೂ ಆತನಿಂದ ದೂರವಾಗಲು ಹುಡುಗಿಗೆ ಮನಸ್ಸಾಗಲಿಲ್ಲವಂತೆ. ಹಾಗಾಗಿಯೇ ಇಬ್ಬರ ಭೇಟಿ ಮುಂದುವರೆದಿತ್ತು ಎನ್ನುತ್ತಾಳೆ. ಆತನನ್ನು ಪ್ರೀತಿಸಲು ಶುರು ಮಾಡಿದ್ದ ನನಗೆ ಮದುವೆಯಾಗುವ ಭರವಸೆಯನ್ನು ಆತ ನೀಡಿದ್ದ ಎನ್ನುತ್ತಾಳೆ ಆಕೆ. ಇಷ್ಟೇ ಅಲ್ಲ ಇಬ್ಬರು ಅನೇಕ ಬಾರಿ ಹೊರಗೆ ಹೋಗಿದ್ದರಂತೆ. ಬಹಳ ಹತ್ತಿರಕ್ಕೆ ಬಂದಿದ್ದ ಇವರ ಪ್ರೀತಿಗೆ ವರ್ಷವಾಗಿತ್ತು.

ದಾಂಪತ್ಯ ಜೀವನ ರೋಮ್ಯಾಂಟಿಕ್ ಆಗಿರಲು ಫೆಂಗ್ ಶುಯಿ ಸೂತ್ರಗಳು

ಪ್ರೀತಿಯಲ್ಲಿ ಮತ್ತೊಮ್ಮೆ ಮೋಸ : ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗ್ಲೇ ಹುಡುಗಿ ಮದುವೆಯಾಗುವಂತೆ ಸುರೇಶ್ ಗೆ ಒತ್ತಾಯ ಮಾಡ್ತಿದ್ದಳಂತೆ. ಪದೇ ಪದೇ ಆಕೆ ಮಾತು ಕೇಳಿ ರೋಸಿದ್ದ ಸುರೇಶ್ ಸತ್ಯ ಹೊರ ಹಾಕಿದ್ದನಂತೆ. ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ. ನನಗೆ ಆಗ್ಲೇ ಮದುವೆಯಾಗಿದೆ ಎಂದಿದ್ದನಂತೆ. ಇಷ್ಟೇ ಅಲ್ಲ ಎಲ್ಲ ಕಡೆ ಬ್ಲಾಕ್ ಮಾಡಿದ್ದ ಆತನ ಬಗ್ಗೆ ಒಂದು ಸುಳಿವು ಕೂಡ ಹುಡುಗಿಗೆ ಇರಲಿಲ್ಲವಂತೆ. ಬ್ಲಾಕ್ ಮೇಲ್ ಮಾಡಲು ಸಾಧ್ಯವಾಗದಂತೆ ಪ್ಲಾನ್ ಮಾಡಿದ್ದ ಸುರೇಶ್, ಮನೆ ಎಲ್ಲಿದೆ ಎಂಬುದನ್ನು ಕೂಡ ಹೇಳಿರಲಿಲ್ಲವಂತೆ. ಪ್ರೀತಿಯಲ್ಲಿ ಎರಡನೇ ಬಾರಿ ಮೋಸ ಹೋದ ನಾನು ಸಂಪೂರ್ಣ ಕುಸಿದಿದ್ದೇನೆ ಎನ್ನುತ್ತಾಳೆ ಹುಡುಗಿ.

Latest Videos
Follow Us:
Download App:
  • android
  • ios