Asianet Suvarna News Asianet Suvarna News

Weird Marriage: ಮದುಮಗನ್ನಲ್ಲ, ಅವನ ತಂಗಿಯನ್ನ ಮದುವೆ ಆಗ್ತಾಳೆ ಮದುಮಗಳು

Weird Wedding Practice: ಭಾರತದಲ್ಲಿ ಅನೇಕ ಚಿತ್ರ – ವಿಚಿತ್ರ ಪದ್ಧತಿಗಳಿವೆ. ಬೇರೆ ಬೇರೆ ಜಾತಿ, ಜನಾಂಗ, ಊರು, ಕೇರಿಯಲ್ಲಿ ಬೇರೆ ಬೇರೆ ಪದ್ಧತಿಗಳಿವೆ. ಇಲ್ಲಿನ ಮದುವೆಗಳು ಕೂಡ ಭಿನ್ನವಾಗಿರುತ್ತವೆ. ಇಂದು ವಿಚಿತ್ರ ಮದುವೆಯೊಂದರ ಬಗ್ಗೆ ನಾವು ಮಾಹಿತಿ ನೀಡ್ತೇವೆ.
 

A Different Marriage Takes Place In The Tribe
Author
Bangalore, First Published Apr 29, 2022, 1:15 PM IST

ಗುಜರಾತ್‌ (Gujarat ) ನಲ್ಲಿ ವಿಚಿತ್ರ ಮದುವೆ (Weird Marriage) ಯೊಂದು ಎಲ್ಲರ ಗಮನ ಸೆಳೆದಿದೆ. ಮದುವೆಯಲ್ಲಿ ವರ (Groom), ಅದ್ಧೂರಿ ಮೆರವಣಿಗೆಯಲ್ಲಿ ಮಂಟಪಕ್ಕೆ ಬಂದು ವಧುವಿನ ಕೈ ಹಿಡಿದು ಆಕೆಯನ್ನು ತನ್ನ ಮನೆ (Home)ಗೆ ಕರೆದುಕೊಂಡು ಹೋಗ್ತಾನೆ. ವರನಾದವನು ವಧುವಿನ ಜೊತೆ ಸಪ್ತಪದಿ ತುಳಿದು, ತಾಳಿ ಕಟ್ಟಿ ಮದುವೆಯಾಗುವ ಸಂಪ್ರದಾಯ ನಮ್ಮಲ್ಲಿದೆ. ಆದ್ರೆ ಗುಜರಾತ್ ನಲ್ಲಿ ನಡೆದ ಆ ಮದುವೆ ಸ್ವಲ್ಪ ಭಿನ್ನವಾಗಿದೆ. ವರನ ಜಾಗದಲ್ಲಿ ವರನ ಸಹೋದರಿ ಮದುವೆಯಾಗಿದ್ದಾಳೆ. ಯಸ್, ಅಚ್ಚರಿಯಾದ್ರೂ ಇದು ಸತ್ಯ. ವರನ ಬದಲು ಮಂಟಪಕ್ಕೆ ಬಂದ ವರನ ಸಹೋದರಿ, ವಧುವನ್ನು ಮದುವೆಯಾಗಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ.  ಇಂದು ಈ ವಿಭಿನ್ನ ಮದುವೆ ನಡೆದದ್ದು ಎಲ್ಲಿ ಹಾಗೂ ಯಾಕೆ ಈ ಮದುವೆ ನಡೆದಿದೆ ಎನ್ನುವ ಬಗ್ಗೆ ನಾವು ಹೇಳ್ತೇವೆ.

ವಿಭಿನ್ನ ಮದುವೆ ನಡೆದಿದ್ದು ಎಲ್ಲಿ ? : ಈ ಗಮನ ಸೆಳೆದ ವಿವಾಹ ಮಹೋತ್ಸವ ನಡೆದಿದ್ದು ಗುಜರಾತಿನ ಛೋಟಾ ಉದೇಪುರ್ ಜಿಲ್ಲೆಯಲ್ಲಿ. ವರನ ಗ್ರಾಮದಲ್ಲಿ ವರನ ತಂಗಿ ಮದುವೆಗೆ ಹೋಗುವ ಸಂಪ್ರದಾಯವಿದೆ. ಮೆರವಣಿಗೆ ಮಾತ್ರವಲ್ಲ, ತಂಗಿ ವಧುವಿನ ಜೊತೆ ಮಂಟಪಕ್ಕೆ ಹೋಗ್ತಾಳೆ. ಎಲ್ಲ ಮದುವೆ ಸಂಪ್ರದಾಯವನ್ನು ಆಕೆಯೇ ಪೂರ್ತಿಗೊಳಿಸ್ತಾಳೆ. ಇದರ ನಂತರ ಅತ್ತಿಗೆ ಜೊತೆ ವರನ ಮನೆಗೆ ಬರ್ತಾಳೆ. 

ಅನಾದಿ ಕಾಲದಿಂದ ನಡೆದು ಬಂದಿದೆ ಈ ಸಂಪ್ರದಾಯ : ವರದಿಗಳ ಪ್ರಕಾರ, ಅಂಬಲ ಗ್ರಾಮದ ಹರಿಸಿಂಗ್ ರೈಸಿಂಗ್ ರಥ್ವಾ ಅವರ ಪುತ್ರ ನರೇಶ್ ಇತ್ತೀಚೆಗೆ ಫೆರ್ಕುವ ಗ್ರಾಮದ ವಜಲಿಯಾ ಹಿಮ್ತಾ ರಥ್ವಾ ಅವರ ಪುತ್ರಿ ಲೀಲಾ ಅವರನ್ನು ವಿವಾಹವಾಗಿದ್ದಾರೆ. ಆದರೆ ನರೇಶ್ ಅಂಬಾಲದಿಂದ ಮೆರವಣಿಗೆ ತೆಗೆದುಕೊಂಡು ಹೋಗಲಿಲ್ಲ. ಆತನ ಸಹೋದರಿ ಮೆರವಣಿಗೆ ಏರಿದ್ದಳು. ಇದರ ಹಿಂದೆ ಅವರ ಹಳ್ಳಿಯ ಸಂಪ್ರದಾಯವಿದೆ. ಇದನ್ನು ಬುಡಕಟ್ಟು ಸಮಾಜದ ಜನರು ಈಗಲೂ ಸಹ ಗೌರವಿಸುತ್ತಿದ್ದಾರೆ.

ಚಿನ್ನಾಭರಣ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಉಪಕಾರಿ

ಪದ್ಧತಿ ಹಿಂದಿದೆ ಬಲವಾದ ನಂಬಿಕೆ : ಈ ರೀತಿ ಮದುವೆಯಾಗುವುದರ ಹಿಂದಿನ ನಂಬಿಕೆಯೆಂದರೆ ಅಂಬಲ, ಸುರ್ಖೇಡ ಮತ್ತು ಸನದ ಗ್ರಾಮಗಳ ಆರಾಧ್ಯ ದೈವಗಳು ಭರಮದೇವ ಮತ್ತು ಖೂನಪಾವ. ಅವರನ್ನು ಬುಡಕಟ್ಟು ಸಮಾಜದ ಆರಾಧ್ಯ ದೇವರುಗಳೆಂದು ಪರಿಗಣಿಸಲಾಗಿದೆ. ಭರಮದೇವ ಬ್ರಹ್ಮಚಾರಿ ದೇವರು ಎಂಬುದು ಸ್ಥಳೀಯ ಜನರ ನಂಬಿಕೆ. ಆದುದರಿಂದ ಅಂಬಲ, ಸುರ್ಖೇಡ, ಸನದ ಗ್ರಾಮದ ಹುಡುಗರು  ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡರೆ ಆ ದೇವರ ಕೋಪಕ್ಕೆ ಗುರಿಯಾಗುತ್ತಾರೆ. ಅವರ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ.  ದೇವರ ಕೋಪದಿಂದ ತಪ್ಪಿಸಿಕೊಳ್ಳಲು, ವರನ ಸಹೋದರಿ  ಮದುವೆ ಸಂಪ್ರದಾಯವನ್ನು ನೆರವೇರಿಸುತ್ತಾಳೆ. ಮೆರವಣಿಗೆ ಸೇರಿದಂತೆ ಎಲ್ಲ ಪದ್ಧತಿ ಮುಗಿಸಿ, ನವ ವಧುವನ್ನು ಮನೆಗೆ ತರುವ ಜವಾಬ್ದಾರಿ ಆಕೆ ಮೇಲಿರುತ್ತದೆ.  

HOME REMEDIES : ಚಪ್ಪಲಿ ಕಚ್ಚಿ ಗಾಯವಾಗಿದ್ಯಾ? ಹಾಗಿದ್ರೆ ಈ ಟಿಪ್ಸ್ ಬಳಸಿ

ಸಂಪ್ರದಾಯ ಮುರಿಯಲು ಹೋದವರ ಕಥೆ ಏನಾಯ್ತು ? : ಶತಮಾನಗಳಿಂದಲೂ ಗ್ರಾಮದಲ್ಲಿ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಅಂಬಲ ಗ್ರಾಮದ ನಿವಾಸಿ ಬೇಸನ್ ರಾತ್ವಾ. ಆದರೆ, ಕೆಲ ವರ್ಷಗಳ ಹಿಂದೆ ಮೂವರು ಯುವಕರು ಈ ಸಂಪ್ರದಾಯವನ್ನು ಬದಿಗೊತ್ತಿ ಹೊಸ ಬದಲಾಣೆ ತರಲು ಯತ್ನಿಸಿದ್ದರು. ಆದ್ರೆ ಅದೇ ತಪ್ಪಾಯ್ತು ಎನ್ನುತ್ತಾರೆ ಗ್ರಾಮಸ್ಥರು. ಸಂಪ್ರದಾಯ ಮುರಿಯಲು ಹೋದವರು ಹೆಚ್ಚು ದಿನ ಬದುಕಲಿಲ್ಲವಂತೆ. ಮೂವರೂ ಸಾವನ್ನಪ್ಪಿದ್ದಾರೆ. ಹಾಗಾಗಿ ಮತ್ತೆ ಅದೇ ಸಂಪ್ರದಾಯದಲ್ಲಿ ಈ ಗ್ರಾಮದಲ್ಲಿ ಮದುವೆಗಳು ನಡೆಯಲಾರಂಭಿಸಿವೆ. ದೇವರ ಕೋಪಕ್ಕೆ ಗುರಿಯಾಗದೆ ಮದುವೆ ಮುಗಿಸಿಕೊಂಡು, ಎಲ್ಲರ ಸುರಕ್ಷತೆ ಕಾಪಾಡುವುದಕ್ಕಾಗಿ ಜನರು ಈ ಪದ್ಧತಿಯನ್ನು ಬಿಡ್ತಿಲ್ಲ. 

Follow Us:
Download App:
  • android
  • ios