Asianet Suvarna News Asianet Suvarna News

ಪ್ರೀತಿಗೆ ವಯಸ್ಸಿನ ಹಂಗಿಲ್ಲ ನೋಡಿ..95ರ ಹರೆಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಪ್ರೀತಿಗೆ (Love) ವಯಸ್ಸಿಲ್ಲ ಎನ್ನುವ ಮಾತಿದೆ. ಆ ಮಾತನ್ನು ಬ್ರಿಟನ್‌ನ ಈ ನವ ದಂಪತಿ (New couple|) ನಿಜ ಮಾಡಿ ತೋರಿಸಿದ್ದಾರೆ. 95 ವರ್ಷದ ಜುಲಿಯನ್‌ ಮೊಯ್ಲೆ 84 ವರ್ಷದ  ವಲೇರಿ ವಿಲಿಯಮ್ಸ್‌ ಹಿರಿಯರ ಸಮ್ಮುಖದಲ್ಲಿ ಮದುವೆ (Marriage)ಯಾಗಿದ್ದು, ಸದ್ಯದಲ್ಲೇ ಮಧುಚಂದ್ರಕ್ಕೂ (Honeymoon) ಹೋಗಲಿದ್ದಾರೆ. ವೃದ್ಧಾಪ್ಯದಲ್ಲೂ ಪ್ರೀತಿಯನ್ನು ಕಂಡು ಕೊಂಡ ಜೋಡಿಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

95 Year Old Man Gets Married For First Time, Proves It Is Never Too Late To Find True Love Vin
Author
Bengaluru, First Published May 23, 2022, 3:33 PM IST

ಮದುವೆ (Marriage) ಎರಡು ಜೀವಗಳ ಜೊತೆ ಸಂಬಂಧ ಬೆಸೆಯುವುದಲ್ಲ. ಎರಡು ಕುಟುಂಬ (Family)ಗಳನ್ನು ಒಂದು ಮಾಡುತ್ತದೆ. ಇದೇ ಕಾರಣಕ್ಕೆ ಮದುವೆ ಮುನ್ನ ನೂರು ಬಾರಿ ಆಲೋಚನೆ (Think) ಮಾಡಲಾಗುತ್ತದೆ. ಮದುವೆ ನಂತ್ರ ಎರಡೂ ಕುಟುಂಬ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಆದ್ರೆ ಕೆಲ ನಂಬಿಕೆಗಳು (Belief) ಸಮಸ್ಯೆಯುಂಟು ಮಾಡುತ್ತದೆ. 

ಮದುವೆಯೆಂಬ ವಿಚಾರ ಬಂದಾಗ ಹಲವಾರು ಆಚಾರ-ವಿಚಾರಗಳು ಸಂಪ್ರದಾಯಗಳು ಇರುತ್ತವೆ. ಇಂತಿಷ್ಟೇ ವಯಸ್ಸಿನಲ್ಲಿ ಮದುವೆಯಾಗಬೇಕು. ಹುಡುಗ-ಹುಡುಗಿಯ ಮಧ್ಯೆ ನಿರ್ಧಿಷ್ಟ ವಯಸ್ಸಿನ ಅಂತರವಿರಬೇಕು. ನಕ್ಷತ್ರ, ಗೋತ್ರ, ರಾಶಿ ಸರಿ ಹೊಂದಬೇಕು. ಹೀಗೆ ಮದುವೆಯ ವಿಷಯಕ್ಕೆ ಬಂದಾಗ ಹಿರಿಯರು ಹಲವು ವಿಚಾರಗಳನ್ನು ಹೇಳಿ ಕೊಡುತ್ತಾರೆ. ಅದರಲ್ಲಿ ಮುಖ್ಯವಾದುದು ಬೇಗ ಮದುವೆಯಾಗಬೇಕು ಎಂಬುದು. ಹುಡುಗಿಯರು ವಯಸ್ಸಿಗೆ ಬಂದಾಗಲೇ ಕಾಲೇಜು ಬಿಡಿಸಿ ಹುಡುಗನನ್ನು ಹುಡುಕಲು ಆರಂಭಿಸುತ್ತಾರೆ. ಹೆಚ್ಚು ಕಲಿತರೆ ಹುಡುಗ ಸಿಕ್ಕನು ಎಂಬ ಭಯ. ಕೆಲ ಹುಡುಗಿಯರು ಚೆನ್ನಾಗಿ ಕಲಿತು, ಉದ್ಯೋಗ ಹಿಡಿದು ಕುಳಿತುಬಿಟ್ಟರೆ ಅವರಿಗೆ ಹಿರಿಯರು ಛೀಮಾರಿ ಹಾಕುವುದು ತಪ್ಪಲ್ಲ. 30-35ಕ್ಕೆ ಮದುವೆಯಾದರೂ ಅವರಿಗೆ 60 ವರ್ಷ ಆಯೀತೇನೋ ಎಂಬಂತೆ ಬಿಂಬಿಸುತ್ತಾರೆ. ಅಜ್ಜಿಯಾದ್ಯಲ್ಲಾ ಇನ್ನು ಯಾವಾಗ ಮದುವೆಯೆಂದು ಹಂಗಿಸುತ್ತಾರೆ.

Marriage Problem : 34 ವರ್ಷವಾದ್ರೂ ಈ ಕಾರಣಕ್ಕೆ ಯುವತಿಗೆ ಮದುವೆಯಾಗ್ತಿಲ್ಲ !

ಯಾವುದೇ ವ್ಯಕ್ತಿ ತಾನು ಪ್ರೀತಿಸಲು ಅಥವಾ ಮದುವೆಯಾಗಲು ವಯಸ್ಸಿನ ಮಿತಿ ಇದೆಯೇ? ಸಂಪ್ರದಾಯಗಳ ಮೂಲಕ ಹೋಗುವುದೆಂದರೆ, ಬಹುಶಃ ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿ ಇರುತ್ತವೆ. ಹಾಗಂತ ವೃದ್ಧಾಪ್ಯದಲ್ಲಿ ಮದುವೆಗಬಾರದು ಅನ್ನೋ ಕಟ್ಟುಪಾಡಿಲ್ಲ. ಪ್ರೀತಿಗೆ ವಯಸ್ಸಿಲ್ಲ ಎನ್ನುವ ಮಾತಿದೆ. ಆ ಮಾತನ್ನು ಬ್ರಿಟನ್‌ನ ಈ ನವ ದಂಪತಿ ನಿಜ ಮಾಡಿ ತೋರಿಸಿದ್ದಾರೆ. 95 ವರ್ಷದ ಜುಲಿಯನ್‌ ಮೊಯ್ಲೆ 84 ವರ್ಷದ  ವಲೇರಿ ವಿಲಿಯಮ್ಸ್‌ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಮದುವೆ (Marriage) ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ಮಾತಿದೆ. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತೆ ಅಂತಾನೂ ಹಿರಿಯರು ಹೇಳ್ತಾರೆ. ಈ ಹಿರಿಯ ಜೋಡಿಯ ವಿಚಾರದಲ್ಲಿ ಈ ಮಾತು ನಿಜವಾಗಿದೆ. 95 ವರ್ಷದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದಲ್ಲಿ ಕನಸಿನ ಹುಡುಕಿಯನ್ನು ಕಂಡುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ನಿಜವಾದ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ಜೂಲಿಯನ್ ಮೊಯ್ಲ್ ಎಂಬ ವ್ಯಕ್ತಿ ತನ್ನ ಪತ್ನಿ ವ್ಯಾಲೆರಿ ವಿಲಿಯಮ್ಸ್ (84) ಅವರನ್ನು 23 ವರ್ಷಗಳ ಹಿಂದೆ ಯುಕೆ ಕಾರ್ಡಿಫ್‌ನಲ್ಲಿರುವ ಚರ್ಚ್‌ನಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರು ಸ್ನೇಹಿತರಾಗಿದ್ದಾರೆ. ಆದರೆ, ಈ ವೇಳೆ ಅವರು ತಾವು ಗಂಡ-ಹೆಂಡತಿ ಆಗುತ್ತೇವೆ ಎಂದು ಊಹಿಸಿರಲಿಲ್ಲ. 

ಗಂಡ ಯಾವಾಗ್ಲೂ ಆಫೀಸ್ ಟ್ರಿಪ್‌ನಲ್ಲಿರಲಿ, ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ಬೋದು ಅಂದುಕೊಳ್ಳುತ್ತೇನೆ, ತಪ್ಪಾ ?

ಜೂಲಿಯನ್ ಮೊಯ್ಲ್ ಫೆಬ್ರವರಿಯಲ್ಲಿ ವ್ಯಾಲೆರಿ ವಿಲಿಯಮ್ಸ್‌ಗೆ ವಿವಾಹ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ವಿಲೇರಿ ಪ್ರೀತಿಯಿಂದ ಒಪ್ಪಿದ್ದಾರೆ ಕೂಡ. ಇಬ್ಬರೂ ಮೇ 19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಆಸಕ್ತಿಯ ಸಂಗತಿಯೆಂದರೆ, ಅವರು ಮೊದಲು ಭೇಟಿಯಾಗಿದ ಚರ್ಚ್‌ನಲ್ಲೇ ವಿವಾಹವಾಗಿದ್ದಾರೆ. ಸಮಾರಂಭವನ್ನು ಕ್ಯಾಲ್ವರಿ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 40 ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.

ನವಜೋಡಿಯು, ಜೂಲಿಯನ್ ಅವರ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದ್ದಾರಂತೆ. ಹಾಗೆಯೇ ಈ ವರ್ಷದ ಕೊನೆಯಲ್ಲಿ ಅವರು ತಮ್ಮ ಮಧುಚಂದ್ರವನ್ನು ಸಹ ಆಚರಿಸಲಿದ್ದಾರೆ. ಅಂದಹಾಗೆ, ಜೂಲಿಯನ್ 1954 ರಲ್ಲಿ ಆಸ್ಟ್ರೇಲಿಯಾದಿಂದ ಯುಕೆಗೆ ವಲಸೆ ಬಂದಿದ್ದರು. 1970 ಮತ್ತು 1982 ರ ನಡುವೆ ವೆಲ್ಷ್ ನ್ಯಾಷನಲ್ ಒಪೆರಾದಲ್ಲಿ ಮೊದಲ ಏಕವ್ಯಕ್ತಿ ವಾದಕರಾಗಿದ್ದರು. ಅಂತೂ ವೃದ್ಧಾಪ್ಯದಲ್ಲೂ ಜೋಡಿ ಪ್ರೀತಿಯನ್ನು ಕಂಡು ಕೊಂಡಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ.

Follow Us:
Download App:
  • android
  • ios