ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ಗುರಿ ಹೊಂದಿರುತ್ತಾರೆ. ಆದರೆ, ಆ ಗುರಿ ಮುಟ್ಟುವ ಹಾದಿಯಲ್ಲಿ ಆಗಾಗ ಆಲಸ್ಯ, ನಿರಾಸೆ ಪ್ರತ್ಯಕ್ಷವಾಗಿ ಕಾರ್ಯಕ್ಷಮತೆಯನ್ನು ತಗ್ಗಿಸುತ್ತವೆ. ಪ್ರತಿದಿನ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುವುದು ನಿಜಕ್ಕೂ ಬೋರ್ ಮೂಡಿಸುವ ವಿಷಯವೇ. ಆದರೆ, ಗುರಿ ತಲುಪಬೇಕೆಂದರೆ ನಿರಂತರ ಪರಿಶ್ರಮ ಅಗತ್ಯ. ಹಾಗಾದ್ರೆ ನಮ್ಮ ಕಾರ್ಯಕ್ಷಮತೆ, ಉತ್ಸಾಹ ಕುಗ್ಗದಂತೆ ಮಾಡಲು ಏನು ಮಾಡಬೇಕು? ಆಗಾಗ ನಮ್ಮನ್ನು ನಾವೇ ಪ್ರೇರೇಪಿಸಿಕೊಳ್ಳಬೇಕು. ಈ ಮೂಲಕ ನಮ್ಮ ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಳ್ಳಬೇಕು. ಹಾಗಾದ್ರೆ. ನಮ್ಮನ್ನು ನಾವು ಹೇಗೆ ಪ್ರೇರೇಪಿಸಿಕೊಳ್ಳಬಹುದು.

'ಮೈಂಡ್‌ ಎಸೆಯೋ ಗೂಗ್ಲಿಗಳಿಗೆ ಬೌಲ್ಡ್ ಆಗ್ಬೇಡಿ!'

ಹಿಂದಿನ ಸಕ್ಸಸ್ ಸೀಕ್ರೇಟ್:  ನೀವು ಈ ಹಿಂದೆ ಮಾಡಿದ ಸಾಧನೆಗಳನ್ನು ನೆನಪಿಸಿಕೊಳ್ಳಿ. ಅದಕ್ಕೆ ನೀವು ಹೇಗೆಲ್ಲ ಯೋಜನೆ ರೂಪಿಸಿದ್ದೀರಿ? ಸಾಧನೆ ಹಾದಿಯಲ್ಲಿ ಎದುರಾದ ಅಡ್ಡಿ ಆತಂಕಗಳೇನು? ಅವುಗಳನ್ನೆಲ್ಲ ನೀವು ಹೇಗೆ ಮೆಟ್ಟಿ ನಿಂತು ಯಶಸ್ಸನ್ನು ನಿಮ್ಮದಾಗಿಸಿಕೊಂಡಿದ್ದೀರಿ. ನಿಮಗೆ ಯಶಸ್ಸು ಹೇಗೆ ಸಿಕ್ಕಿತು? ಈ ಎಲ್ಲ ವಿಚಾರಗಳನ್ನು ನೆನಪಿಸಿಕೊಳ್ಳಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಈಗ ನಿಮ್ಮ ಮುಂದಿರುವ ಸವಾಲನ್ನು ಧೈರ್ಯವಾಗಿ ಎದುರಿಸಬಲ್ಲೆ ಎಂಬ ವಿಶ್ವಾಸ ಮೂಡುತ್ತದೆ. ನಿಮ್ಮ ಮೇಲೆ ನಿಮಗಿರುವ ನಂಬಿಕೆ ಮತ್ತು ವಿಶ್ವಾಸವೇ ನಿಮ್ಮನ್ನು ಬಹುದೊಡ್ಡ ಸಾಧನೆಗೆ ಪ್ರೇರೇಪಿಸಬಲ್ಲದು.

ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳಿ: ನಿಮ್ಮ ಆತ್ಮವಿಶ್ವಾಸವೇ ನಿಮಗೆ ಪ್ರೇರಣೆ ನೀಡಬಲ್ಲದು.. ಆತ್ಮವಿಶ್ವಾಸಕ್ಕೆ ಕಠಿಣ ಹಾದಿಯಲ್ಲೂ ನಿಮ್ಮನ್ನು ಮುನ್ನಡೆಸುವ ಸಾಮಥ್ರ್ಯವಿದೆ. ಆದಕಾರಣ ನಿಮ್ಮ ಆತ್ಮವಿಶ್ವಾಸ ಎಂದೂ ಕುಗ್ಗದಂತೆ ಎಚ್ಚರವಹಿಸಿ. ‘ನನ್ನಲ್ಲಿ ಸಾಮಥ್ರ್ಯವಿದೆ, ಬುದ್ಧಿವಂತಿಕೆಯಿದೆ. ಅಸಾಧ್ಯವಾದ ಕಾರ್ಯವನ್ನು ಮಾಡುವ ಶಕ್ತಿಯಿದೆ’É ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಜೊತೆಗೆ ನಿಮ್ಮ ಸಾಮಥ್ರ್ಯದ ಮೇಲೆ ಸದಾ ನಂಬಿಕೆಯಿಡಿ. ಒಂದು ಗುರಿ ತಲುಪಿದ ಬಳಿಕ ಇನ್ನೊಂದು ಗುರಿಯನ್ನು ಹಾಕಿಕೊಳ್ಳಿ. ಅದನ್ನು ಪೂರ್ಣಗೊಳಿಸುವ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಿ.

ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

ಸ್ಫೂರ್ತಿ ಕಥೆಗಳೇ ಮೆಟ್ಟಿಲಾಗಲಿ:  ಮನಸ್ಸು ನಿರಾಸೆಗೊಳಗಾದಾಗ, ಯಾವುದೇ ಕಾರ್ಯ ಮಾಡಲು ಆಸಕ್ತಿ ಕಳೆದುಕೊಂಡಾಗ ಮನಸ್ಸನ್ನು ಪ್ರೇರೇಪಿಸಲು ಪ್ರಯತ್ನಿಸಿ. ಸಾಧಕರ ಜೀವನಚರಿತ್ರೆಗಳನ್ನು ಓದಿ. ಇದರಿಂದ ಅವರು ಬದುಕಿನಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸಿದರು. ಅದನ್ನು ಹೇಗೆ ಎದುರಿಸಿದರು ಎಂಬುದು ತಿಳಿಯುತ್ತದೆ. ಅವರ ಸಾಧನೆಯ ಹಾದಿ ನಿಮ್ಮನ್ನು ಕೂಡ ಉನ್ನತ ಸಾಧನೆ ಮಾಡುವಂತೆ ಪ್ರೇರೇಪಿಸುತ್ತದೆ.

ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕ ಚಿಂತನೆಗಳು ಸಾಧನೆಗೆ ಪ್ರೇರೇಪಿಸುತ್ತವೆ. ಆದಕಾರಣ ಸದಾಕಾಲ ಒಳ್ಳೆಯ ವಿಚಾರಗಳ ಬಗ್ಗೆಯೇ ಚಿಂತಿಸಿ. ನಿಮ್ಮಲ್ಲಿರುವ ಸಾಮಥ್ರ್ಯ, ಕೌಶಲಗಳ ಬಗ್ಗೆ ಮನಸ್ಸಿಗೆ ಆಗಾಗ ಮನವರಿಕೆ ಮಾಡಿ. ಮುಂದೆ ಆಗುವುದೆಲ್ಲವೂ ಒಳ್ಳೆಯದೇ ಆಗಿರುತ್ತದೆ ಎಂಬ ಸಕಾರಾತ್ಮಕ ಮನೋಭಾವದಿಂದ ಕಾರ್ಯನಿರ್ವಹಿಸಿ. ನಕಾರಾತ್ಮಕ ಚಿಂತನೆಗಳು ಮನಸ್ಸನ್ನು ಆವರಿಸದಂತೆ ಎಚ್ಚರ ವಹಿಸಿ.

ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಿ: ನಿಮ್ಮ ದೌರ್ಬಲ್ಯಗಳು ಯಾವುವು ಎಂಬುದನ್ನು ತಿಳಿದು ಅದನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿ. ದೌರ್ಬಲ್ಯಗಳು ಯಾವ ರೀತಿ ನಿಮ್ಮ ಸಾಧನೆಯ ಹಾದಿಗೆ ಮಾರಕವಾಗಿವೆ ಎಂಬುದನ್ನು ವಿಶ್ಲೇಷಿಸಿ. ಪ್ರತಿ ಸಮಸ್ಯೆಗೂ ಒಂದು ಪರಿಹಾರವಿರುವಂತೆ ದೌರ್ಬಲ್ಯಗಳಿಂದ ಹೊರಬರಲು ಕೂಡ ಒಂದು ದಾರಿ ಇದ್ದೇಇರುತ್ತದೆ. ಆ ದಾರಿ ಯಾವುದು ಎಂಬುದನ್ನು ಯೋಚಿಸಿ. ಖಂಡಿತಾ ಪರಿಹಾರ ಸಿಕ್ಕೇಸಿಗುತ್ತದೆ.

ಮಾಹಿತಿ ಕಲೆ ಹಾಕಿ: ಯಾವುದೇ ಕಾರ್ಯ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕಿ. ನಿಮ್ಮ ಬಳಿ ಹೆಚ್ಚು ಮಾಹಿತಿಯಿದ್ದಷ್ಟು ಆ ಕೆಲಸ ಸುಲಭವಾಗುತ್ತದೆ. ಜೊತೆಗೆ ಆ ಹಾದಿಯಲ್ಲಿ ಎದುರಾಗುವ ಸವಾಲುಗಳು, ಅದನ್ನು ಎದುರಿಸುವ ಮಾರ್ಗ ಎಲ್ಲವೂ ನಿಮಗೆ ಮೊದಲೇ ಸ್ಪಷ್ಟವಾಗುತ್ತದೆ. ಮಾಹಿತಿ ಕೊರತೆಯಿದ್ದಾಗ ಸೂಕ್ತ ನಿರ್ಧಾರ ಕೈಗೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಮಾಹಿತಿಯಿದ್ದಾಗ ಮುಂದೆ ಸಾಗಲು ಮನಸ್ಸೇ ನಿಮಗೆ ಪ್ರೇರಣೆ ನೀಡುತ್ತದೆ.

2020ರಲ್ಲಿ ಈ ಟೆಕ್ನಾಲಜಿಯೆಲ್ಲ ನಿಜವಾಗುತ್ತಾ?

ಹೋಲಿಸಿಕೊಂಡು ಕೊರಗಬೇಡಿ: ನಮ್ಮನ್ನು ಸಾಧನೆಯ ಹಾದಿಯಿಂದ ಹಿಂದೆ ಸರಿಯುವಂತೆ ಮಾಡುವುದು ಅಥವಾ ಸೋಲಿನ ಹಾದಿಯಲ್ಲಿ ನಡೆಯುವಂತೆ ಮಾಡುವುದು ಹೋಲಿಕೆ. ಹೌದು, ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವುದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಹೀಗಾದಾಗ ಯಾವ ಕೆಲಸ ಮಾಡಲು ಕೂಡ ಮನಸ್ಸು ಹಿಂಜರಿಯುತ್ತದೆ. ಆದಕಾರಣ ಇನ್ನೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ.