ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕಿ ಅಖಿಲಾ ಪಜಿಮಣ್ಣು!
ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಬೆಸ್ಟ್ ಗಾಯಕಿಯಾಗಿ ಗುರುತಿಸಿಕೊಂಡಿರುವ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ ಕೋಗಿಲೆ ಸಂಗೀತ ರಿಯಾಲಿಟಿ ಶೋ ಮೂಲಕ ಗಾಯಕಿಯಾಗಿ ಜರ್ನಿ ಆರಂಭಿಸಿದ ಅಖಿಲಾ ಪಜಿಮಣ್ಣು ಮಂಗಳೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಫೆಬ್ರವರಿ 2ರಂದು ಮಂಗಳೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ಅಖಿಲಾ (akhila pajimannu) ಮತ್ತು ಧನಂಜಯ್ ಶರ್ಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ಅಖಿಲಾ ಸ್ಪರ್ಧಿಸುತ್ತಿದ್ದಾರೆ. ತಮ್ಮ ಕಂಠದಿಂದ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
'ನಿಮ್ಮ ಜೊತೆ ಪ್ರತಿಯೊಂದು ಕ್ಷಣವನ್ನು ನೆನಪುಗಳಾಗಿ ಉಳಿಸಿಕೊಳ್ಳಲು ಇಷ್ಟ ಪಡುತ್ತೀನಿ. ನಮ್ಮ ಕಣ್ಣುಗಳು ಹೆಚ್ಚಿಗೆ ಮಾತನಾಡಲಿ. ಕಣ್ಣಿಗೆ ಕಾಣಿಸದ ವಿಚಾರಗಳು ಮನಸ್ಸಿಗೆ ಅರ್ಥವಾಗುತ್ತದೆ' ಎಂದು ಅಖಿಲಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರೇಶ್ಮೆ ಪಂಚೆ ಶರ್ಟ್‌ನಲ್ಲಿ ಧನಂಜಯ್ ಕಾಣಿಸಿಕೊಂಡರೆ, ಕೆಂಪು ಬಣ್ಣ ರೇಶ್ಮೆ ಸೀರಿಯಲ್ಲಿ ಅಖಿಲಾ ಮಿಂಚುತ್ತಿದ್ದಾರೆ. ಇವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಶ್ಚಿತಾರ್ಥದ ನಂತರ ಅಖಿಲಾ ಪಜಿಮಣ್ಣು ಫ್ಯಾಮಿಲಿ ಮತ್ತು ಭಾವಿ ಪತಿ ಜೊತೆ ರಾಜಸ್ಥಾನ ಟ್ರಿಪ್ ಮಾಡಿದ್ದಾರೆ. ರಾಜಸ್ಥಾನ ಶೈಲಿಯ ಆಭರಣ, ಉಡುಗೆ ಧರಿಸಿ ಪತಿ ಜೊತೆ ಚಂದದ ಫೋಟೋ ತೆಗೆಸಿಕೊಂಡಿದ್ದಾರೆ.