ನಮ್ಮೆಲ್ಲರಲ್ಲೂ ಸ್ವಲ್ಪ ಮೆಚುರಿಟಿ, ಸ್ವಲ್ಪ ಇಮ್ಮೆಚುರಿಟಿ, ಸ್ವಲ್ಪ ಜ್ಞಾನ, ಸ್ವಲ್ಪ ಅಜ್ಞಾನ, ಸ್ವಲ್ಪ ಮಕ್ಕಳಂತಾಡುವುದು, ಸ್ವಲ್ಪ ಅಜ್ಜನಂತಾಡುವುದು ಎಲ್ಲವೂ ಇರುತ್ತದೆ. ಆದರೆ, ಯಾವ ಕ್ಷಣಕ್ಕೆ, ಸನ್ನಿವೇಶಕ್ಕೆ, ಸಂದರ್ಭಕ್ಕೆ ಹೇಗಿರುತ್ತೇವೆ ಎಂಬುದರ ಮೇಲೆ ನಮ್ಮ ಮೆಚುರಿಟಿ ಹಾಗೂ ಬಾಲಿಶತನಗಳನ್ನು ಅಳೆಯಲಾಗುತ್ತದೆ. ಯಾವಾಗ ನಾವು ನಮ್ಮ ಬಗ್ಗೆ ಬಿಟ್ಟು ಇತರರ ಬಗ್ಗೆ ಚಿಂತಿಸಲು ಆರಂಭಿಸುತ್ತೀವೋ ಅದೇ ಮೆಚುರಿಟಿ ಎನ್ನುತ್ತಾರೆ ಆಲ್ಬರ್ಟ್ ಐನ್‌ಸ್ಟೀನ್. 

ಬದಲಾಗುತ್ತಿದೆ ಆಕರ್ಷಣೆಯ ಟ್ರೆಂಡ್, ಹೆಚ್ಚುತ್ತಿರುವ ಸೆಪಿಯೋಸೆಕ್ಷುಯಲ್‌ ವರ್ಗ!

ಬಾಲ್ಯ ಕಳೆದ ಮೇಲೂ ಬಾಲಿಶರಾಗಿ ಆಡುವುದು ಸರಿಯನಿಸುವುದಿಲ್ಲ. ವಯಸ್ಸಿಗನುಗುಣವಾದ ವರ್ತನೆಯಿದ್ದರೆ ಮಾತ್ರ ಪ್ರಬುದ್ಧರೆನಿಸಿಕೊಳ್ಳಬಹುದು. ಅದರಲ್ಲೂ ಇನ್ನೂ ಬಾಲ್ಯದ ಕಲ್ಪನೆ, ಆಸೆಗಳು ಹೋಗಿಲ್ಲವೆಂದರೆ, ತಾನೇ ಎಲ್ಲದರ ಆಕರ್ಷಣೆಯ ಕೇಂದ್ರವಾಗಿರಬೇಕೆಂಬ ಬಯಕೆಯಿದ್ದರೆ ಅದು ಭಾವನಾತ್ಮಕ ಬಾಲಿಶತನವೆನಿಸಿಕೊಳ್ಳುತ್ತದೆ. ಏಕೆಂದರೆ, ಹೀಗಿರುವವರು ರಿಯಾಲಿಟಿಯನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುತ್ತಿರುತ್ತಾರೆ. 

ಇದರೊಂದಿಗೆ ವ್ಯಕ್ತಿಯ ಭಾವನೆಗಳ ಬಲ ಹಾಗೂ ಸ್ವನಿಯಂತ್ರಣ ಕೂಡಾ ಭಾವನಾತ್ಮಕ ಮೆಚುರಿಟಿಯನ್ನುವಲಂಬಿಸಿರುತ್ತವೆ. 

ಭಾವನಾತ್ಮಕ ಪ್ರಬುದ್ಧತೆ ಹೊಂದಿಲ್ಲದವರ ಜೊತೆ ಬಾಳ್ವೆ ಮಾಡುವುದು ಕಷ್ಟ. ಆದರೆ, ಯಾರಿಗೆ ಎಮೋಶನಲ್ ಮೆಚ್ಯುರಿಟಿ ಇಲ್ಲ ಎಂದು ತಿಳಿಯುವ ಬಗೆ ಹೇಗೆ? ಅದನ್ನು ಅರಿಯುವ ಸಲುವಾಗಿಯೇ ಅಂಥವರ ಗುಣಸ್ವಭಾವಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮಲ್ಲೂ ಈ ಸ್ವಭಾವಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳುವತ್ತ  ಗಮನ ಹರಿಸಿ.

1. ಸ್ವಾರ್ಥತೆ

ಮಗುವಿಗೆ ತನ್ನ ಸುತ್ತಲೇ ಜಗತ್ತಿದೆ ಎನಿಸುತ್ತದೆ. ಹಾಗಾಗಿಯೇ ಆತ ಅರ್ಧ ರಾತ್ರಿಯಲ್ಲಿ ಬೇಕಿದ್ದರೂ ಹಸಿವಾಯಿತೆಂದು ಕೂಗಿ ಎಲ್ಲರನ್ನೂ ಎಬ್ಬಿಸಬಲ್ಲ. ಆದರೆ, ಬಹುತೇಕರಿಗೆ ತಾವು ಬೆಳೆಯುತ್ತಾ ಹೋದಂತೆಲ್ಲ ಜಗತ್ತು ತಮ್ಮ ಸುತ್ತಲೇ ಸುತ್ತುತ್ತಿಲ್ಲ ಎಂಬುದು ಅರ್ಥವಾಗುತ್ತದೆ. ನಾವು ಬಯಸಿದ್ದೆಲ್ಲ ಬೇಕೆಂದಾಗ ಸಿಗುವುದಿಲ್ಲ ಎಂಬುದು ತಿಳಿಯುತ್ತದೆ. ಎಲ್ಲರೂ ಅವರವರ ಅಗತ್ಯಕ್ಕೆ ಬೇಕಾದಂತೆ ಬಾಳುತ್ತಿದ್ದಾರೆ ಎಂಬುದೂ ತಿಳಿಯುತ್ತದೆ. 

ಶೇರೆಂಟಿಂಗ್: ಮಕ್ಕಳ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ!

ಪ್ರಬುದ್ಧತೆ ಎಂದರೆ ನಮ್ಮ ಅಂಹಕಾರದಿಂದ ಹೊರಬರುವುದು. ಅಂದರೆ ಭ್ರಮೆಯಿಂದ ಹೊರಬರುವುದು. ಇತರೆ ಜನರ ಜಗತ್ತುಗಳನ್ನು ಅರ್ಥ ಮಾಡಿಕೊಳ್ಳುವುದು. 

2. ಬದ್ಧತೆಯಲ್ಲಿ ಸಮಸ್ಯೆ

ಇಮ್ಮೆಚುರಿಟಿಯ ಮತ್ತೊಂದು ಲಕ್ಷಣ ಎಂದರೆ ಕಮಿಟ್‌ಮೆಂಟ್ ವಿಷಯದಲ್ಲಿ ಕಷ್ಟಪಡುವುದು. ಯಾವುದಕ್ಕೂ ಕಮಿಟ್ ಆಗಲು ಸಾಧ್ಯವಾಗದಿರುವುದು. ಇವರಿಗೆ ಒಂದು ಸಿಗುತ್ತಲೇ ಮತ್ತೊಂದು ಹೆಚ್ಚು ಆಕರ್ಷಕವಾಗಿ ಸೆಳೆಯಲಾರಂಭಿಸುತ್ತದೆ. ಸಂಬಂಧಗಳ ವಿಷಯವಾಗಲಿ, ಉದ್ಯೋಗದ ವಿಷಯವಾಗಲಿ- ಯಾವುದೊಂದಕ್ಕೂ ಕೊಡಬೇಕಾದಷ್ಟು ಬದ್ಧತೆಯನ್ನು ಇವರು ಪ್ರದರ್ಶಿಸಲಾರರು. ತಕ್ಷಣದ ಖುಷಿಗಾಗಿ ಭವಿಷ್ಯದ ಬಗ್ಗೆ ಯೋಚಿಸದೆ ಕ್ರಿಯೆಯಲ್ಲಿ ತೊಡಗುವವರಿವರು. ಭವಿಷದ ಒಳಿತಿಗಾಗಿ ಯಾವುದೇ ತ್ಯಾಗಕ್ಕೆ ಇವರು ಸಿದ್ಧರಿರುವುದಿಲ್ಲ. 

3. ಇತರರ ಮೇಲೆ ಆರೋಪ ಹೊರಿಸಿವುದು. 

ಭಾವನಾತ್ಮಕವಾಗಿ ಪ್ರಬುದ್ಧತೆ ಹೊಂದಿಲ್ಲದವರು ಎಲ್ಲದಕ್ಕೂ ಇತರರ ಮೇಲೆ ಆರೋಪ ಹೊರಿಸುವ ಗುಣ ಹೊಂದಿರುತ್ತಾರೆ. ತಮ್ಮ ತಪ್ಪುಗಳನ್ನವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ತಾವು ಮಾಡುವ ತಪ್ಪುಗಳ ಬಗ್ಗೆ ಅವರಿಗೆ ಹೆಚ್ಚು ಯೋಚನೆ ಇರುವುದಿಲ್ಲ. ಆದರೆ, ಅದಕ್ಕಾಗಿ ಶಿಕ್ಷೆಯಾಗುವ ಭಯವಿರುತ್ತದೆ. ಹಾಗಾಗಿ, ತಕ್ಷಣ ತಮ್ಮ ತಪ್ಪನ್ನು ಇತರರ ಮೇಲೆ ಹಾಕುತ್ತಾರೆ. ಸಂಬಂಧಗಳಲ್ಲೂ ಅಷ್ಟೇ, ತಮ್ಮನ್ನು ಯಾರಾದರೂ ದೂಷಿಸುವ ಮೊದಲೇ ಅವರ ಮೇಲೆ ತಪ್ಪನ್ನು ಎತ್ತಿ ಹಾಕಿ ಬಿಡುತ್ತಾರೆ. ಇದರಿಂದ ಹಲವು ಸಮಸ್ಯೆಗಳಾಗುತ್ತವೆ. ನಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು, ಅದನ್ನು ಒಪ್ಪಿಕೊಳ್ಳುವುದು, ಅದರಿಂದ ಕಲಿಯುವುದು ಪ್ರಬುದ್ಧರ ಲಕ್ಷಣ.

4. ಅಲವಂಬನೆ

ಭಾವನಾತ್ಮಕವಾಗಿ ಬಾಲಿಶತನ ಹೊಂದಿರುವವರು ಇತರರ ಮೇಲೆ ಅತಿಯಾಗಿ ಅವಲಂಬಿತರಾಗಿರುತ್ತಾರೆ. ತಾವು ಪ್ರೀತಿಸುವ ಕಾರಣಕ್ಕಾಗಿ ಅವರಿಗೆ ಇನ್ನೊಬ್ಬರು ಬೇಕಾಗಿರುವುದಿಲ್ಲ. ಬದಲಿಗೆ ತಮಗೆ ಅವಶ್ಯಕತೆ ಇದೆ ಎಂಬ ಕಾರಣಕ್ಕಾಗಿ ಅವರು ಮತ್ತೊಬ್ಬರ ಗೆಳೆತನ ಬಯಸುತ್ತಾರೆ. ತಮಗೆ ಬೇಕಾದಂತೆ ಇರುವುದೇ ಸ್ವಾತಂತ್ರ್ಯ ಎಂಬುದು ಅವರ ನಿಲುವು. ಯಾವುದಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿ ಬಂದಾಗ ಮಾತ್ರ ಅವರು ಇತರರು ತಮ್ಮ ಹೊರೆಯನ್ನು ಕಡಿಮೆ ಮಾಡಲಿ ಎಂದು ಬಯಸುತ್ತಾರೆ.

5. ಹಣದ ವಿಷಯದಲ್ಲಿ ಬೇಜವಾಬ್ದಾರಿ

ಯಾವ ವಿಷಯದಲ್ಲೂ ಜವಾಬ್ದಾರಿ ಇವರ ಸ್ವತ್ತಲ್ಲ ಎಂಬಂತೆ ವರ್ತಿಸುವವರು ಭಾವನಾತ್ಮಕ ಬಾಲಿಶತನ ಉಳ್ಳವರು. ಹಣದ ವಿಷಯಕ್ಕೂ ಇದು ಸುಳ್ಳಲ್ಲ. ಆ ಕ್ಷಣಕ್ಕೆ ಬೇಕೆನಿಸಿದ್ದನ್ನೆಲ್ಲ ಕೊಂಡುಕೊಳ್ಳುತ್ತಾರೆ. ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ನಂತರದ ದಿನಗಳಲ್ಲಿ ಅದು ತಮಗೆ ಅಗತ್ಯವೇ ಇರಲಿಲ್ಲ ಎಂಬುದು ಇವರ ಗಮನಕ್ಕೆ ಬರುತ್ತದೆ. ಕೆಲವೊಮ್ಮೆ ಇವರು ಹೂಡಿಕೆ, ಸಾಲ ಕೊಡುವುದು ಮುಂತಾದ ವಿಷಯದಲ್ಲಿ ಬೇಕಾಬಿಟ್ಟಿ ರಿಸ್ಕ್ ತೆಗೆದುಕೊಳ್ಳುತ್ತಾರೆ.