ಮದುವೆ, ಸಂಬಂಧ, ಮಕ್ಕಳು, ವೃದ್ಧಾಪ್ಯ ಹೀಗೆ ಸಮಾಜದಲ್ಲಿ ಎಲ್ಲ ಕೆಲಸಕ್ಕೂ ಒಂದು ಸಮಯ ನಿಗದಿ ಮಾಡಲಾಗಿದೆ. ಅನೇಕರು ಅದರಂತೆ ನಡೆಯಲು ಪ್ರಯತ್ನಿಸ್ತಾರೆ. ಆದ್ರೆ ಸಮಯಕ್ಕೆ ಸರಿಯಾಗಿ ಆಗ್ಬೇಕಾದ ಕೆಲಸ ಆಗದೆ ಹೋದಾಗ ಬೇಸರಗೊಳ್ತಾರೆ. ಇದ್ರ ಜೊತೆ ಮುಂದೆ ಆ ಕೆಲಸ ಮಾಡಲು ಸಾಧ್ಯವೆ ಇಲ್ಲ ಎಂಬ ಭಯದಲ್ಲಿರ್ತಾರೆ. ವರ್ಷ 40 ಆದ್ಮೇಲೆ ಮೊದಲ ಬಾರಿ ಸಂಭೋಗ ಬೆಳೆಸೋದು ಎಷ್ಟು ಸರಿ ಅಂತಾ ಪ್ರಶ್ನೆ ಮಾಡೋರಿಗೆ ಇಲ್ಲಿದೆ ಉತ್ತರ.
ವಯಸ್ಸು (Age) 35ರ ಗಡಿ ದಾಟುತ್ತಿದ್ದಂತೆ ಅನೇಕರು ತಮಗೆ ವಯಸ್ಸಾಯ್ತು ಎನ್ನಲು ಶುರು ಮಾಡ್ತಾರ. ವರ್ಷ 40 ಆಗ್ತಿದ್ದಂತೆ 100 ವರ್ಷವಾದವರಂತೆ ವರ್ತಿಸಲು ಶುರು ಮಾಡ್ತಾರೆ. ಇದೇ ಕಾರಣಕ್ಕೆ ಲೈಂಗಿಕ ಕ್ರಿಯೆಯಿಂದ ದೂರವಿರಲು ಶುರು ಮಾಡ್ತಾರೆ. ಆದ್ರೆ ಪ್ರೀತಿ (Love)ಗೆ ಯಾವುದೇ ವಯಸ್ಸಿನ ಮಿತಿ ಇಲ್ಲವೋ ಅದೇ ರೀತಿ ನಮ್ಮ ಆಸೆ ಹಾಗೂ ಲೈಂಗಿಕತೆಗೂ ವಯಸ್ಸಿನ ಗಡಿಯಿಲ್ಲ ಎಂಬುದನ್ನು ನಾವು ತಿಳಿದಿರಬೇಕು. ಸಂಭೋಗ ಬೆಳೆಸಲು ಯಾವುದೇ ವಯಸ್ಸಿಲ್ಲ. ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ (Busy) ಯಿರುವ ಜನರು 40ರ ನಂತ್ರ ಸ್ವಲ್ಪ ಸಮಯ ಹೊಂದಿಸಿಕೊಂಡಿದ್ದಾರೆ ಎಂದುಕೊಳ್ಳಿ. ಇನ್ನೇನು ವಯಸ್ಸಾಯ್ತು ಇನ್ಯಾಕೆ ಮದುವೆ, ಮಕ್ಕಳು (Children) , ಸಂಸಾರ ಎನ್ನುತ್ತಾರೆ. ಆದ್ರೆ ಲೈಂಗಿಕತೆಗೆ ಎಂದಿಗೂ ತಡವಾಯ್ತು ಎಂಬ ಮಾತನ್ನು ಬಳಸುವುದು ಸೂಕ್ತವಲ್ಲ. ನೀವು 40, 50 ಅಥವಾ 60 ವರ್ಷ ವಯಸ್ಸಿನವರಾಗಿದ್ದರೂ ಸಂಭೋಗ ಸುಖವನ್ನು ನೀವು ಜೀವನದ ಯಾವುದೇ ಹಂತದಲ್ಲಿ ಅನುಭವಿಸಬಹುದು. ಖಂಡಿತ ವಯಸ್ಸಾದಂತೆ ದೇಹ ಭಿನ್ನವಾಗಿ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ. 20ರ ಹರೆಯದಲ್ಲಿದ್ದಂತೆ ಶಕ್ತಿ ಆಗ ಇರುವುದಿಲ್ಲ. ಆದ್ರೆ ಲೈಂಗಿಕ ತೃಪ್ತಿಯು ಯಾವಾಗಲೂ ನಿಮ್ಮ ಹೃದಯದ ಆಸೆ ಮತ್ತು ಕಲ್ಪನೆ ಜೊತೆ ಸಂಬಂಧ ಹೊಂದಿದೆ. ಇಂದು ವಯಸ್ಸಾದ್ಲೇಲೂ ಲೈಂಗಿಕ ಸುಖ ನಮಗೆ ಹೇಗೆ ಸಿಗುತ್ತದೆ ಎಂಬುದನ್ನು ನಾವು ಹೇಳ್ತೇವೆ.
ಕನ್ಯತ್ವ (Verginity) ಒಂದು ನಿರ್ಮಿತ ಪರಿಕಲ್ಪನೆ : ಕನ್ಯತ್ವದ ಬಗ್ಗೆ ಜನರಲ್ಲಿ ಅನೇಕ ಕಲ್ಪನೆಗಳಿವೆ. ಕನ್ಯತ್ವಕ್ಕೆ ಭಾರತದಲ್ಲಿ ಈಗ್ಲೂ ಮಹತ್ವ ನೀಡಲಾಗುತ್ತದೆ. ಮದುವೆ ಮೊದಲು ಕನ್ಯತ್ವ ಕಳೆದುಕೊಳ್ಳುವುದು ಅಪರಾಧವೆಂದು ಭಾವಿಸಲಾಗುತ್ತದೆ. ಕನ್ಯತ್ವವನ್ನು ಪರಿಶುದ್ಧಕ್ಕೆ ಹೋಲಿಕೆ ಮಾಡಲಾಗುತ್ತದೆ. ಹಿಂದಿದ್ದ ಮಹತ್ವ ಈಗ ಇದಕ್ಕೆ ಇಲ್ಲ. ಜನರು ನಂಬಿಕೆ, ಪದ್ಧತಿಗಿಂತ ತಮ್ಮ ಆಸೆಗೆ ಮಹತ್ವ ನೀಡ್ತಿದ್ದಾರೆ. ಹಾಗಾಗಿ ನಿಮಗೆ 40 ವರ್ಷವಾದ್ರೂ ನೀವು ಸಂಭೋಗ ಸುಖ ಪಡೆಯಬಹುದು. ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು.
ಕಾಮಿ ಆಂಟಿ ವೈಯಾರದ ಬಲೆಗೆ ಬಿದ್ದ ಬಾಲಕ, ಆಗಿದ್ದು ಮಾತ್ರ ದುರಂತ !
ನಿಮ್ಮ ಜೊತೆಗಿದ್ದಾರೆ ಸಾಕಷ್ಟು ಜನ : ನಮಗೆ ಮಾತ್ರ ಈ ತೊಂದ್ರೆ ಎಂದು ನಾವು ಭಾವಿಸ್ತೇವೆ. ಆದ್ರೆ ಬೇರೆಯವರಿಗೆ ಮತ್ತಷ್ಟು ಸಮಸ್ಯೆಯಿದೆ ಎಂಬುದು ನಮ್ಮ ಅರಿವಿಗೆ ಬರೋದೇ ಇಲ್ಲ. ಹಾಗೆ ಸಂಭೋಗ ಕೂಡ. ಭಾರತದಂತಹ ದೇಶದಲ್ಲಿ ಇದ್ರ ಬಗ್ಗೆ ಯಾವಾಗ್ಲೂ ಬಹಿರಂಗವಾಗಿ ಮಾತನಾಡುವುದಿಲ್ಲ. ಮಾತನಾಡಿದ್ರೂ ಸರಿಯಾದ ಮಾಹಿತಿ ನೀಡುವುದಿಲ್ಲ. 40ರ ಗಡಿ ದಾಟಿದ ನಂತ್ರವೂ ನಾನು ಸಂಭೋಗ ಬೆಳೆಸಿಲ್ಲವೆಂದು ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ದಾರಿಯಲ್ಲಿ ಅನೇಕರಿದ್ದಾರೆ. ಕೆಲವರು ದೇಹದ ಆಕಾರದ ಬಗ್ಗೆ ಅಭದ್ರತೆ ಹೊಂದಿದ್ದಾರೆ. ಮತ್ತೆ ಕೆಲವರು ಬೇರೆ ಕಾರಣಕ್ಕೆ ಸಂಭೋಗ ಬೆಳೆಸಿರುವುದಿಲ್ಲ. ಈ ಸತ್ಯ ನಿಮಗೆ ತಿಳಿದಿರಬೇಕು. ಇಷ್ಟು ವಯಸ್ಸಿನಲ್ಲಿ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುತ್ತಿರುವ ವ್ಯಕ್ತಿ ನಾನೊಬ್ಬನೇ ಇರಬೇಕೆಂಬ ಗಿಲ್ಟಿ (Guilty) ನಿಮಗೆ ಬೇಡ.
ಸಂಗಾತಿ ಜೊತೆ ಸೆಕ್ಸ್ ಮಾಡಿದ ನಂತರ ಮದುವೆಯಾಗಿದ್ದೇ ಮರೆತು ಹೋಯ್ತು !
ಇದು ತುಂಬಾ ಸಾಮಾನ್ಯ : 40 ನೇ ವಯಸ್ಸಿನಲ್ಲಿ ವರ್ಜಿನ್ ಆಗಿರುವುದು ತುಂಬಾ ಸಾಮಾನ್ಯ. ನೀವು ಇನ್ನೂ ಯಾರನ್ನೂ ಮದುವೆಯಾಗಿಲ್ಲ ಅಥವಾ ಇನ್ನೂ ಲೈಂಗಿಕತೆಯನ್ನು ಹೊಂದಿಲ್ಲದಿದ್ದರೆ ಚಿಂತಿಸಬೇಕಾಗಿಲ್ಲ. ಇದು ತುಂಬಾ ವೈಯಕ್ತಿಕ ವಿಷಯವಾಗಿದೆ. ಅದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಬೇರೆಯವರು ನಿರ್ಧರಿಸಲು ಸಾಧ್ಯವಿಲ್ಲ ಎಂಬುದು ನಿಮಗೆ ತಿಳಿದಿರಬೇಕು. ನೀವು ಆತ್ಮವಿಶ್ವಾಸದಿಂದ ಮತ್ತು ಮಾನಸಿಕವಾಗಿ ಸಿದ್ಧರಾಗಿರುವಾಗ ಸಂಭೋಗ ಸುಖ ಪಡೆಯಲು ಪ್ರಯತ್ನಿಸಬಹುದು. ಗೆಳೆಯರ ಒತ್ತಡದಲ್ಲಿ ಅಥವಾ ಹಿಂದೆ ಉಳಿಯುವ ಭಯದಿಂದ ಶಾರೀರಿಕ ಸಂಬಂಧ ಬೆಳೆಸಬಾರದು. ಇದ್ರಿಂದ ನಿಮಗೆ ನೆಮ್ಮದಿ, ಸುಖ ಸಿಗಲು ಸಾಧ್ಯವಿಲ್ಲ.
