Gen Z ಗಳು ಆಫೀಸ್‌ ಸಂಸ್ಕೃತಿ ಬದಲಿಸಿದ್ದಾರೆ. ಅವರು ಕೆಲ್ಸ ಮಾಡುವ ವಿಧಾನ, ಅವರು ಕೆಲ್ಸ ವಿರೋಧಿಸುವ ವಿಧಾನ ಎಲ್ಲವೂ ಬದಲಾಗಿದೆ. ಹಾಗೆಯೇ ಅವರು ಕಚೇರಿಯಲ್ಲಿ ಬಳಸುವ ಹೊಸ ಪದಗಳ ಅರ್ಥವೂ ಭಿನ್ನವಾಗಿದೆ.

ಇಂದಿನ ಆಫೀಸ್ ಸಂಸ್ಕೃತಿ ವೇಗವಾಗಿ ಬದಲಾಗುತ್ತಿದೆ. ಅದರೊಂದಿಗೆ ಕೆಲಸ ಮಾಡುವ ವಿಧಾನ ಮಾತ್ರವಲ್ಲ, ಬಳಸುವ ಭಾಷೆಯೂ ಹೊಸ ರೂಪ ಪಡೆದುಕೊಳ್ಳುತ್ತಿದೆ. ವಿಶೇಷವಾಗಿ Gen Z ಉದ್ಯೋಗಿಗಳು ತಮ್ಮದೇ ಆದ ಕೆಲವು ಹೊಸ ಪದಗಳನ್ನು ಬಳಸುತ್ತಿದ್ದಾರೆ. ಈ ಪದಗಳು ಕೇವಲ ಟ್ರೆಂಡ್ಗಾಗಿ ಹುಟ್ಟಿಲ್ಲ. ಕೆಲಸ, ವೈಯಕ್ತಿಕ ಜೀವನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅವರ ದೃಷ್ಟಿಕೋನವನ್ನೂ ಪ್ರತಿಬಿಂಬಿಸುತ್ತವೆ.

Gen Z ಬಳಸ್ತಿರುವ ಹೊಸ ಪದ

ಕ್ವೈಟ್ ಕ್ವಿಟಿಂಗ್ : ಕೆಲಸ ಬಿಟ್ಟರು ಅನ್ನೋದು ಈ ಪದದ ಅರ್ಥವಲ್ಲ. ಇದರ ಅರ್ಥ, ಸಂಬಳಕ್ಕೆ ತಕ್ಕಷ್ಟು ಕೆಲಸ ಮಾತ್ರ ಮಾಡುವುದು. ಅಗತ್ಯವಿಲ್ಲದ ಓವರ್ಟೈಮ್ ಅಥವಾ ಹೆಚ್ಚುವರಿ ಕೆಲಸಕ್ಕೆ ಅವರು ಒಪ್ಪುವುದಿಲ್ಲ ಎಂದರ್ಥ.

https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b

ರೇಜ್ ಅಪ್ಲೈಯಿಂಗ್ : ಕೆಲಸದ ಒತ್ತಡ ಅಥವಾ ಮೇಲಧಿಕಾರಿಗಳ ವರ್ತನೆಯಿಂದ ಬೇಸರವಾದಾಗ, ಉದ್ಯೋಗಿ ಕೋಪದಲ್ಲೇ ಬೇರೆ ಕಂಪನಿಗಳಿಗೆ ತನ್ನ ರೆಸ್ಯೂಮ್ ಕಳುಹಿಸಲು ಆರಂಭಿಸುತ್ತಾನೆ. ಇದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸುವ ಒಂದು ವಿಧಾನವಾಗಿದೆ.

ಲೌಡ್ ಕ್ವಿಟಿಂಗ್ : ಇದು ಕ್ವೈಟ್ ಕ್ವಿಟಿಂಗ್ಗೆ ಸಂಪೂರ್ಣ ವಿರುದ್ಧ. ಉದ್ಯೋಗಿ ಮೌನವಾಗಿ ಕೆಲಸ ಬಿಡುವುದಿಲ್ಲ. ತನ್ನ ಅಸಮಾಧಾನವನ್ನು ಎಲ್ಲರ ಮುಂದೆ ಹೇಳಿ ನಂತರ ರಾಜೀನಾಮೆ ನೀಡುತ್ತಾನೆ.

ಬೇರ್ ಮಿನಿಮಮ್ ಮಂಡೇ : ವಾರದ ಮೊದಲ ದಿನವಾದ ಸೋಮವಾರ ಹೆಚ್ಚು ಒತ್ತಡ ತೆಗೆದುಕೊಳ್ಳದೆ, ಅತ್ಯಗತ್ಯ ಕೆಲಸಗಳನ್ನು ಮಾತ್ರ ಮಾಡುವ ಪದ್ಧತಿಗೆ ಈ ಹೆಸರು ಬಂದಿದೆ. ಇದರಿಂದ ವಾರವನ್ನು ನೆಮ್ಮದಿಯಾಗಿ ಆರಂಭಿಸಬಹುದು ಎಂಬುದು ಅವರ ನಂಬಿಕೆ.

https://kannada.asianetnews.com/karnataka-districts/bengaluru-techie-turns-rapido-captain-to-pay-bills-exposes-harsh-reality-of-gig-work-gdp/articleshow-604s4k7

ಘೋಸ್ಟಿಂಗ್ ದ ಬಾಸ್ : ಕಚೇರಿ ಸಮಯ ಮುಗಿದ ನಂತರ ಅಥವಾ ರಜೆಯ ದಿನಗಳಲ್ಲಿ ಬಾಸ್ನ ಕರೆ ಅಥವಾ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡದೆ, ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುವುದನ್ನು ಈ ಪದ ಸೂಚಿಸುತ್ತದೆ.

ಒಟ್ಟಿನಲ್ಲಿ, Gen Z ಪೀಳಿಗೆ ಕೆಲಸಕ್ಕಷ್ಟೇ ಅಲ್ಲ, ಮಾನಸಿಕ ಆರೋಗ್ಯ, ಕೆಲಸ–ಜೀವನ ಸಮತೋಲನ ಮತ್ತು ವೈಯಕ್ತಿಕ ಸಮಯಕ್ಕೂ ಸಮಾನ ಮಹತ್ವ ನೀಡುತ್ತಿದೆ. ಈ ಹೊಸ ಪದಗಳು ಅವರ ಆಧುನಿಕ ಕೆಲಸದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.