ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಪರಿಶೀಲಿಸಲು ಸ್ಪೇನ್‌ನ ನವರ್ರಾ ವಿಶ್ವವಿದ್ಯಾಲಯ ಸಂಶೋಧನೆ ನಡೆಸುತ್ತಿದೆ. ವಾರಕ್ಕೆ ಮೂರು ಬಾರಿ ಮದ್ಯ ಸೇವಿಸುವ 50 -75 ವರ್ಷದೊಳಗಿನ 10 ಸಾವಿರ ಸ್ವಯಂಸೇವಕರ ಅಗತ್ಯವಿದೆ. ಆಯ್ಕೆಯಾದವರು ನಿಯಮಿತವಾಗಿ ಆರೋಗ್ಯ ಮಾಹಿತಿ ನೀಡಬೇಕು. ಈ ಸಂಶೋಧನೆಗೆ PREDIMED ಅಧ್ಯಯನ ಸ್ಫೂರ್ತಿ.

ಕೆಲ್ಸ ಆರಾಮವಾಗಿರ್ಬೇಕು, ಕೈ ತುಂಬ ಸಂಬಳ ಬೇಕು, ಕೆಲ್ಸದ ಮಧ್ಯೆ ಮದ್ಯ ಸಿಕ್ರೆ ಕೆಲ್ಸ ಮಾಡೋ ಉತ್ಸಾಹ ಡಬಲ್ ಆಗುತ್ತೆ ಎನ್ನುವವರಿದ್ದಾರೆ. ಮದ್ಯಪಾನ (alcohol) ಇಲ್ದೆ ರಾತ್ರಿ ನಿದ್ರೆ ಬರಲ್ಲ, ದಿನಾ ಕುಡಿತೀನಿ ನಾನು ಎನ್ನುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ದಿನ ಕುಡಿದು ಅದ್ರ ಬಗ್ಗೆ ಮಾಹಿತಿ ನೀಡುವ 10 ಸಾವಿರ ಸ್ವಯಂ ಸೇವಕ (Volunteer)ರ ಅಗತ್ಯ ಇದೆ. ಅದೆಲ್ಲಿ? ಏನು ಅರ್ಹತೆ ಇರ್ಬೇಕು ಎಂಬುದರ ಫುಲ್ ಡಿಟೇಲ್ ಇಲ್ಲಿದೆ.

ಏನು ಸಂಶೋಧನೆ (Research)? : ಕಡಿಮೆ ಪ್ರಮಾಣದಲ್ಲಿ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅನಾರೋಗ್ಯಕ್ಕೆ ಕಾರಣವಾಗುತ್ತಾ ಎನ್ನುವ ಅನುಮಾನ ಇದೆ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸ್ಪೇನ್ನ ನವರ್ರಾ ವಿಶ್ವವಿದ್ಯಾಲಯವು ಬಹಳ ವಿಶಿಷ್ಟ ಮತ್ತು ದೊಡ್ಡ ಸಂಶೋಧನೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ, ಮುಂದಿನ ನಾಲ್ಕು ವರ್ಷಗಳ ಕಾಲ ನಿಯಮಿತವಾಗಿ ವೈನ್ ಕುಡಿಯುವ 10,000 ಸ್ವಯಂಸೇವಕರನ್ನು ಸಂಶೋಧಕರು ಹುಡುಕುತ್ತಿದ್ದಾರೆ. ಯೂನಿವರ್ಸಿಟಿ ಆಫ್ ನವರ್ರಾ ಅಲುಮ್ನಿ ಟ್ರಯಲಿಸ್ಟ್ ಇನಿಶಿಯೇಟಿವ್ (UNATI) ಎಂದು ಸಂಶೋಧನೆಗೆ ಹೆಸರಿಡಲಾಗಿದೆ. ಇದಕ್ಕೆ ಯುರೋಪಿಯನ್ ರಿಸರ್ಚ್ ಕೌನ್ಸಿಲ್ ಹಣಕಾಸು ನೆರವು ನೀಡುತ್ತಿದೆ. ಈ ಅಧ್ಯಯನವನ್ನು ವಿಶ್ವವಿದ್ಯಾಲಯದ ಪ್ರಿವೆಂಟಿವ್ ಮೆಡಿಸಿನ್ ವಿಭಾಗ ನಡೆಸುತ್ತಿದೆ.

ಯಾರು ಪಾಲ್ಗೊಳ್ಳಬಹುದು? : ವಾರಕ್ಕೆ ಕನಿಷ್ಠ ಮೂರು ಬಾರಿ ಮದ್ಯ ಸೇವಿಸುವ 50 ರಿಂದ 70 ವರ್ಷ ವಯಸ್ಸಿನ ಪುರುಷರು ಮತ್ತು 55 ರಿಂದ 75 ವರ್ಷ ವಯಸ್ಸಿನ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗ್ತಿದೆ. ಇಲ್ಲಿಯವರೆಗೆ ಸುಮಾರು 4,000 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಂಶೋಧಕರು ಜೂನ್ 2025 ರ ವೇಳೆಗೆ 10,000 ಸ್ವಯಂ ಸೇವಕರನ್ನು ಸೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆಸಕ್ತರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ ಫಾರ್ಮ್ ಭರ್ತಿ ಮಾಡ್ಬೇಕು. ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ಬೇಕು. 

ಸ್ವಯಂ ಸೇವಕರ ಕೆಲಸ ಏನು? : ನೀವು ಸ್ವಯಂ ಸೇವಕರಾಗಿ ಹೆಸರು ನೋಂದಾಯಿಸಿಕೊಂಡ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತರಬೇತುದಾರರೊಂದಿಗೆ ವೀಡಿಯೊ ಕರೆ ಮಾಡಿ ಮಾತನಾಡಬೇಕಾಗುತ್ತದೆ. ಇಮೇಲ್ ಮೂಲಕ ದಿನನಿತ್ಯದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. 

ಸಂಶೋಧನೆ ಐಡಿಯಾ ಬಂದಿದ್ದು ಹೇಗೆ? : ಈ ಸಂಶೋಧನೆಗೆ ಸ್ಫೂರ್ತಿ ಪ್ರೊಫೆಸರ್ ಮಾರ್ಟಿನೆಜ್-ಗೊನ್ಜಾಲೆಜ್ ಅವರ ಹಿಂದಿನ ಅಧ್ಯಯನವಾದ PREDIMED ಎನ್ನಲಾಗಿದೆ. ಇದರಲ್ಲಿ ಮೆಡಿಟರೇನಿಯನ್ ಆಹಾರದ ಪ್ರಯೋಜನಗಳನ್ನು ಗಮನಿಸಲಾಗಿದೆ. ಆಹಾರ ಪದ್ಧತಿ ಅಥವಾ ಜೀವನಶೈಲಿಗೆ ಸಂಬಂಧಿಸಿದ ಅಧ್ಯಯನಗಳಿಗೆ ಸಮಯ ಮತ್ತು ಹೆಚ್ಚಿನ ಸಂಖ್ಯೆಯ ಜನರು ಬೇಕಾಗುತ್ತಾರೆ ಎಂದು ಅವರು ಹೇಳಿದ್ದರು.

ಪ್ರತಿ ದಿನ ವೈನ್ ಸೇವನೆ ಮಾಡೋದ್ರಿಂದ ಆರೋಗ್ಯ ಹದಗೆಡುತ್ತದೆ ಎಂಬುದು ಕೆಲವರ ವಾದವಾದ್ರೆ ಮತ್ತೆ ಕೆಲವರು ಇದು ಆರೋಗ್ಯ ಸುಧಾರಿಸುತ್ತೆ ಎನ್ನುವ ವಾದ ಮಂಡಿಸಿದ್ದಾರೆ. ಸದ್ಯ ಇದ್ರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ದೊಡ್ಡ ಸಂಶೋಧನೆ ಮೂಲಕ ಇದಕ್ಕೊಂದು ಅಂತಿಮ ರೂಪ ನೀಡಲು ಸಂಶೋಧಕರು ಮುಂದಾಗಿದ್ದಾರೆ. ಸ್ವಯಂ ಸೇವಕರಿಗೆ ಹಣ ಸಿಗುತ್ತಾ? ಎಷ್ಟು ಸಂಭಾವನೆ ಎನ್ನುವ ಬಗ್ಗೆ ಇಲ್ಲಿ ಯಾವುದೇ ಮಾಹಿತಿ ಇಲ್ಲ. ಎಕ್ಸ್ ಖಾತೆಯಲ್ಲಿ ಇದ್ರ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈಜಿಪ್ಟ್ ಮತ್ತು ಸ್ಪೇನ್ ಜನರು ಪ್ರತಿ ದಿನ ವೈನ್ ಸೇವನೆ ಮಾಡ್ತಾರೆ. ಮತ್ತ್ಯಾಕೆ ಸಂಶೋಧನೆ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. 

Scroll to load tweet…