ವರ್ಕ್ ಫ್ರಮ್ ಆಫೀಸ್ ಕಡ್ಡಾಯ ಮಾಡಿದ್ದಕ್ಕೆ ಕೆಲಸ ತೊರೆದ ವ್ಯಕ್ತಿಗೆ ನಷ್ಟವಾಗಿದ್ದು ಇಷ್ಟು ಕೋಟಿ ರೂಪಾಯಿ!
ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಕಂಪನಿ ವರ್ಕ್ ಫ್ರಮ್ ಹೋಮ್ ಕಡ್ಡಾಯ ಮಾಡಿದ್ದಕ್ಕೆ ಸಿಟ್ಟಿಗೆದ್ದು ರಾಜೀನಾಮೆ ನೀಡಿದ್ದರು. ಆದರೆ, ರಾಜೀನಾಮೆ ನೀಡಿದ ಬಳಿಕ ಆತನಿಗೆ ಆಗಿರುವ ನಷ್ಟ ಕಂಡು ಮರುಗಲು ಆರಂಭಿಸಿದ್ದಾರೆ.
ನವದೆಹಲಿ (ನ.9): ಕೋವಿಡ್ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಅಮೆರಿಕಾದ ವ್ಯಕ್ತಿಗೆ ಇತ್ತೀಚೆಗೆ ಕಚೇರಿಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿತ್ತು. ವರ್ಕ್ ಫ್ರಮ್ ಆಫೀಸ್‌ಅನ್ನು ಕಂಪನಿ ಕಡ್ಡಾಯ ಮಾಡಿದ ಬಳಿಕ ಸಿಟ್ಟಿಗೆದ್ದ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಈತನ ಈ ನಿರ್ಧಾರದಿಂದಾಗಿ 2 ಲಕ್ಷ ಯುಎಸ್ ಡಾಲರ್ ಮೌಲ್ಯದ ಕಂಪನಿಯ ಷೇರುಗಳನ್ನು ಆತ ಕಳೆದುಕೊಂಡಿದ್ದಾರೆ. ಆದರೆ, ಜಾನ್ ಸ್ಕೂನ್‌ಆಫ್ ಎನ್ನು ವ್ಯಕ್ತಿಗೆ ಇಷ್ಟು ದೊಡ್ಡ ಪ್ರಮಾಣದ ಕಂಪನಿಯ ಷೇರುಗಳನ್ನು ಕಳೆದುಕೊಂಡಿದ್ದರೂ ತಮ್ಮ ನಿರ್ಧಾರದ ಕುರಿತಾಗಿ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. 2 ಲಕ್ಷ ಯುಎಸ್ ಡಾಲರ್ ಎಂದರೆ, ಭಾರತೀಯ ರೂಪಾಯಿಯಲ್ಲಿ ಅಂದಾಜು 1.7 ಕೋಟಿ ರೂಪಾಯಿ.
ಅಷ್ಟಕ್ಕೂ ಕೆಲಸ ತೊರೆದಿದ್ದೇಕೆ: ಕಂಪನಿ ವರ್ಕ್ ಫ್ರಮ್ ಆಫೀಸ್ ಕಡ್ಡಾಯ ಮಾಡಿದ್ದರಿಂದ ನಾನು ನ್ಯೂಯಾರ್ಕ್ ಅನ್ನು ತೊರೆದು ಸಿಯಾಟ್ಟಲ್‌ಗೆ ಶಿಫ್ಟ್ ಆಗಬೇಕಾಗುತ್ತದೆ. ನ್ಯೂಯಾರ್ಕ್‌ನಲ್ಲಿ ನನ್ನ ಎಲ್ಲಾ ಪ್ರೀತಿ ಪಾತ್ರರೂ ಇದ್ದಾರೆ ಹೀಗಿರುವಾಗ ಸಿಯಾಟ್ಟಲ್‌ಗೆ ಹೋಗೋದು ಸೂಕ್ತವಲ್ಲ ಎಂದನಿಸಿದೆ ಎಂದಿದ್ದಾರೆ. ಆದರೆ, ಅಮೇಜಾನ್‌ನಲ್ಲಿ ನನ್ನ ಕೆಲಸವನ್ನು ನಾನು ಬಹಳ ಇಷ್ಟಪಟ್ಟಿದ್ದೆ ಎಂದಿದ್ದಾರೆ.
ಮೂರೂವರೆಗ ವರ್ಷಗಳ ಕಾಲ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿ ಅಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಕೆಲಸದ ಬಗ್ಗೆ ಹಾಗೂ ಅಲ್ಲಿದ್ದ ಟೀಮ್ ಬಗ್ಗೆ ನಾನು ಎಕ್ಸೈಟ್ ಆಗಿದ್ದೆ. ವರ್ಕ್ ಫ್ರಮ್ ಆಫೀಸ್ ನಿಯಮ ಜಾರಿಯಾಗದೇ ಇದ್ದಲ್ಲಿ ನಾನು ಈಗಲೂ ಅಮೇಜಾನ್‌ನಲ್ಲಿಯೇ ಕೆಲಸ ಮಾಡುತ್ತಿದ್ದೆ ಹಾಗೂ ನನ್ನ ಮುಖದಲ್ಲಿ ನಗು ಇರುತ್ತಿತ್ತು' ಎಂದು ಹೇಳಿದ್ದಾರೆ.
2020ರ ಏಪ್ರಿಲ್‌ನಿಂದ ನಾನು ಟೆಕ್ ದೈತ್ಯ ಕಂಪನಿಯೊಂದಿಗೆ ಕೆಲಸ ಮಾಡಲು ಆರಂಭಿಸಿದ್ದಾಗಿ ಸ್ಕೂನ್‌ಆಫ್ ತಿಳಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಕಂಪನಿಯು ವರ್ಕ್ ಫ್ರಮ್ ಹೋಮ್ ನೀತಿಯನ್ನು ಜಾರಿ ಮಾಡಿತ್ತು. ಈ ಅವಧಿಯಲ್ಲಿ ನಾನು ಕೆಲವೇ ಕೆಲವು ಸಮಯ ಮಾತ್ರವೇ ಕಂಪನಿಗೆ ಭೇಟಿ ನೀಡಿದ್ದೆ ಎಂದಿದ್ದಾರೆ. ನಾನು ನ್ಯೂಯಾರ್ಕ್‌ನಲ್ಲಿ ವಾಸ ಮಾಡುತ್ತಿದ್ದೇನೆ. ನನ್ನ ಪತ್ನಿ ಹಾಗೂ ನಾನು ಇತ್ತೀಚಿಗಷ್ಟೇ ನಮ್ಮ ಕನಸಿನ ಮನೆಯನ್ನು ಖರೀದಿ ಮಾಡಿದ್ದೇವೆ. ಹಾಗೇನಾದರೂ ನಾನು ಸಿಯಾಟ್ಟಲ್‌ಗೆ ಹೋದರೆ, ಇಲ್ಲಿನ ಎಲ್ಲಾ ಖುಷಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅವರು ಕಂಪನಿಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು ಮತ್ತು ವರ್ಕ್ ಫ್ರಮ್ ಹೋಮ್ ವಿಸ್ತರಣೆಗೆ ಮನವಿ ಮಾಡಿದರು. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿ, ಅವರು ತಮ್ಮ ಕುಟುಂಬವನ್ನು ಸಿಯಾಟಲ್‌ಗೆ ಶಿಫ್ಟ್ ಮಾಡಲು ಸುಮಾರು $150,000 (ಸುಮಾರು ರೂ 1.2 ಕೋಟಿ) ವೆಚ್ಚವಾಗುತ್ತದೆ ಎಂದು ಅವರು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದರು. ಸ್ಥಳಾಂತರ ಪ್ಯಾಕೇಜ್‌ನ ಲಭ್ಯತೆಯ ಬಗ್ಗೆಯೂ ಅವರು ವಿಚಾರಿಸಿದರು. ಆದರೆ, ನನ್ನ ಯಾವ ಪ್ರಶ್ನೆಗೂ ಉತ್ತರ ಸಿಕ್ಕಿರಲಿಲ್ಲ. ಸಮಯದಲ್ಲಿ ಕಂಪನಿಯಿಂದಲೂ ಒತ್ತಡ ತೀವ್ರವಾಗಿತ್ತು. ವರ್ಕ್ ಫ್ರಮ್ ಹೋಮ್ ಇದ್ದಲ್ಲಿ ಉತ್ಪಾದಕತೆ ಕಡಿಮೆ ಆಗುತ್ತದೆ ಎಂದು ಕಂಪನಿ ಭಾವಿಸಿತ್ತು. ಆದರೆ, ಇದನ್ನು ನಿಜ ಎಂದು ಹೇಳಲು ಯಾವುದೇ ಡೇಟಾಗಳು ಇದ್ದಿರಲಿಲ್ಲ.
South Korea ವ್ಯಕ್ತಿಯನ್ನು ತರಕಾರಿ ಬಾಕ್ಸ್ ಎಂದು ತಿಳಿದು ಜಜ್ಜಿ ಸಾಯಿಸಿದ ರೋಬಾಟ್!
ಕೊನೆಗೆ ವರ್ಕ್ ಫ್ರಮ್ ಆಫೀಸ್ ನಿಯಮ ಕಡ್ಡಾಯ ಮಾಡಿದ್ದೇ ಕಂಪನಿಯಿಂದ ತಮ್ಮ ನಿರ್ಗಮನಕ್ಕೆ ಕಾರಣ ಎಂದು ಹೇಳಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅದಲ್ಲದೆ, ಕಂಪನಿಯಲ್ಲಿ ಮುಂದುವರಿಯುವ ತಮ್ಮ ಇಚ್ಛೆಯನ್ನೂ ಪತ್ರದಲ್ಲಿ ವ್ಯಕ್ತಪಡಿಸಿದ್ದರು. ಪ್ರಸ್ತುತ, ಸ್ಕೋನ್‌ಹಾಫ್ ಹೊಸ ಅವಕಾಶವನ್ನು ಕಂಡುಕೊಂಡಿದ್ದಾರೆ, ಅಮೆಜಾನ್‌ನ ಮಾಜಿ ಸಹೋದ್ಯೋಗಿಯೊಂದಿಗೆ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ವರ್ಕ್ ಫ್ರಮ್ ಹೋಮ್‌ನಲ್ಲಿಯೇ ಅವರು ಕೆಲಸ ಮುಂದುವರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್ ಫೇಸ್ ಜಾರಾ ಪಟೇಲ್, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!