ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್ ಫೇಸ್ ಜಾರಾ ಪಟೇಲ್, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!
Know About Zara Patel: ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಕಂಟೆಂಟ್‌ಗಳಿಂದಲೇ ಫಾಲೋವರ್ಸ್‌ಗಳನ್ನು ಸಂಪಾದಿಸುವ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಜಾರಾ ಪಟೇಲ್, ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋನ ರಿಯಲ್ ಫೇಸ್ ಆಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋದಲ್ಲಿದ್ದ ನಿಜವಾದ ಹುಡುಗಿ ಜಾರಾ ಪಟೇಲ್ ತಮ್ಮ ವಿಡಿಯೋವನ್ನು ಇದಕ್ಕೆ ಬಳಕೆ ಮಾಡಿರುವ ಬಗ್ಗೆ ತೀವ್ರ ವಿಚಲಿತಳಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಿವಾದ ಉದ್ಭವವಾದ ಬಳಿಕ ಈ ವಿಡಿಯೋದ ನೈಜ ಹುಡುಗಿ ಜಾರಾ ಪಟೇಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾಗಿ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
ಈ ರೀತಿಯಲ್ಲಿ ಗೊಂದಲವನ್ನು ಯಾರೂ ಸೃಷ್ಟಿಸಬಾರದು. ಇದು ನನಗೆ ಬಹಳ ಬೇಸರ ತಂದಿದೆ ಎಂದು ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ಜಾರಾ ಪಟೇಲ್ ಬರೆದಿದ್ದಾರೆ.
ಅದಲ್ಲದೆ, ರಶ್ಮಿಕಾ ಮಂದಣ್ಣ ಅವರ ಮುಖವನ್ನು ಇಟ್ಟು ಡೀಪ್‌ಫೇಕ್ ವಿಡಿಯೋ ತಯಾರಿಸಿರುವುದರಲ್ಲಿ ನಾನು ಭಾಗಿಯಾಗಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಜಾರಾ ಪಟೇಲ್ ಹೇಳಿದ್ದಾರೆ.
ನನ್ನ ದೇಹ ಮತ್ತು ಬಾಲಿವುಡ್‌ನ ಜನಪ್ರಿಯ ನಟಿಯ ಮುಖವನ್ನು ಬಳಸಿಕೊಂಡು ಯಾರೋ ಒಬ್ಬರು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ವೀಡಿಯೊದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಹಾಗೆಯೇ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ ಎಂದು ಜಾರಾ ಬರೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಬಗ್ಗೆ ಮಹಿಳೆಯರು ಈಗ ಇನ್ನಷ್ಟು ಭಯಪಡಬೇಕಾದ ಪರಿಸ್ಥಿತಿ ಇದೆ. ಹುಡುಗಿಯರ ಭವಿಷ್ಯದ ಬಗ್ಗೆ ನಾನು ಚಿಂತೆ ಮಾಡುತ್ತೇನೆ ಎಂದು ಜಾರಾ ಪಟೇಲ್ ಬರೆದಿದ್ದಾರೆ.
ದಯವಿಟ್ಟು ಇಂಟರ್ ನೆಟ್‌ನಲ್ಲಿ ನೀವು ನೋಡುವ ಸಂಗತಿಗಳನ್ನು ಪರಿಶೀಲಿಸಿ. ಅದರಲ್ಲಿನ ಎಲ್ಲವೂ ನಿಜವಾಗಿರೋದಿಲ್ಲ ಎಂದು ಜಾರಾ ಪಟೇಲ್ ಟ್ವೀಟ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಾರಾ ಪಟೇಲ್ ತಮ್ಮ ಬೋಲ್ಡ್ ಕಂಟೆಂಟ್‌ಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಇದರಿಂದಲೇ ಅವರು ಇನ್ಸ್‌ಟಾಗ್ರಾಮ್‌ನಲ್ಲಿ 4.5 ಲಕ್ಷ ಫಾಲೋವರ್ಸ್‌ಗಳನ್ನು ಸಂಪಾದನೆ ಮಾಡಿದ್ದಾರೆ.
ಇನ್ಸ್‌ಗ್ರಾಮ್‌ನಲ್ಲಿ ಅವರೇ ಹಾಕಿರುವ ಮಾಹಿತಿಯ ಪ್ರಕಾರ ಡೇಟಾ ಇಂಜಿನಿಯರ್ ಆಗಿರುವ ಜಾರಾ ಪಟೇಲ್, ಮಾನಸಿಕ ಆರೋಗ್ಯದ ಕಾರ್ಯಕರ್ತೆಯೂ ಆಗಿದ್ದಾರೆ.
ಇದರ ಹೊರತಾಗಿ, ತನ್ನ ಫಾಲೋವರ್ಸ್‌ಗಳಿಗೆ ಅಡಲ್ಟ್ ಕಂಟೆಂಟ್‌ಗಳನ್ನೂ ಈಕೆ ನೀಡುತ್ತಾರೆ. ಅದರಲ್ಲಿ ಇವರು ಸಕ್ರಿಯರೂ ಆಗಿದ್ದಾರೆ.
ತಮ್ಮ ಇನ್ಸ್‌ಟಾಗ್ರಾಮ್ ಅಕೌಂಟ್‌ನಲ್ಲಿ ಫಾಲೋವರ್ಸ್‌ಗಳಿಗಾಗಿ ಸೀಕ್ರೆಟ್ ಲಿಂಕ್ ಅವರೂ ಹಂಚಿಕೊಂಡಿದ್ದಾರೆ. ಇದು ಆಕೆಯೊಂದಿಗೆ ಚಾಟ್ ಮಾಡಲು ಹಾಗೂ ಆಕೆಯ ಅಡಲ್ಟ್ ಕಂಟೆಂಟ್ ನೋಡಲು ಅನುವು ಮಾಡಿಕೊಡುತ್ತದೆ.
ಅಕ್ಟೋಬರ್ 9 ರಂದು, ಜಾರಾ ಪಟೇಲ್ ಅವರು ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕೆ ಪೋಸ್ಟ್ ಅನ್ನು ಶೇರ್ ಮಾಡಿದ್ದು, 'ನೀವು ನನ್ನ ಮೇಲೆ ಮತ್ತೆ ಲಿಫ್ಟ್ ಬಾಗಿಲನ್ನು ಬಹುತೇಕ ಮುಚ್ಚಿದ್ದೀರಿ....'' ಎನ್ನುವ ಸಾಲಿನೊಂದಿಗೆ ಹಂಚಿಕೊಂಡಿದ್ದರು.
ಇದೇ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಕೂರಿಸಿ ಡೀಪ್‌ಫೇಕ್ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ರಶ್ಮಿಕಾ ಮಂದಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.
ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್ ಒದ್ದೆ ಸೀರೆಯ ಹಾಟ್ ಫೋಟೋಸ್!
ರಶ್ಮಿಕಾ ಮಂದಣ್ಣ ಅವರು ಟ್ವಿಟ್ ಮಾಡಿ ಅಸಮಾಧಾನ ಹೊರಹಾಕಿದ ಬಳಿಕ, ದಿಗ್ಗಜ ನಟ ಅಮಿತಾಬ್ ಬಚ್ಛನ್ ಕೂಡ ಇದನ್ನು ಬೆಂಬಲಿಸಿದ್ದರು.
'ವೇಶ್ಯಾವಾಟಿಕೆ ಕೂಲ್ ಪ್ರೊಫೆಶನ್..' ಎಂದ ವಿದೂಷಿ ಸ್ವರೂಪ್, ಸೋಶಿಯಲ್ ಮೀಡಿಯಾದಲ್ಲಿ ಶುರು ಜಟಾಪಟಿ!