Asianet Suvarna News Asianet Suvarna News

North Bengaluru ಮುಂದಿನ ಉದ್ಯಮ ಕೇಂದ್ರ, 3.5ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ ಸಾಧ್ಯತೆ


ಉತ್ತರ ಬೆಂಗಳೂರು ಹೊಸ ಉದ್ಯಮ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ.   ಕನಿಷ್ಠ 3,50,000ಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ.

North Bengaluru is fast emerging as the new business hub says study gow
Author
Bengaluru, First Published May 10, 2022, 5:54 PM IST

ಬೆಂಗಳೂರು (ಮೇ.10): ಅನೇಕ ಉದ್ಯಮಗಳ ಕಾರ್ಯನಿರ್ವಹಣೆಯೊಂದಿಗೆ ಉತ್ತರ ಬೆಂಗಳೂರು ಹೊಸ ಉದ್ಯಮ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಇಲ್ಲಿ ಸುಮಾರು 5 ಲಕ್ಷ ಜನರು ಉದ್ಯೋಗದಲ್ಲಿದ್ದಾರೆ ಮತ್ತೆ ಕನಿಷ್ಠ 3,50,000ಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ. ಮಾರುಕಟ್ಟೆ ಸಂಶೋಧನಾ ಅಧ್ಯಯನವೊಂದರ ಪ್ರಕಾರ 2025 ರೊಳಗೆ ಎಲ್ಲಾ ಆಫೀಸ್ ಗಳಲ್ಲಿ  ಶೇ.35 ರಷ್ಟು ಉದ್ಯೋಗಿಗಳು ಇರಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನೆ ಪ್ರಾಧಿಕಾರ ವಲಯದಲ್ಲಿ ಪ್ರಸ್ತುತ 35,000 ಉದ್ಯೋಗಳಿದ್ದು,  ಉಪಗ್ರಹ ಕಚೇರಿಗಳು ಮತ್ತು ವಸತಿ ಘಟಕಗಳಿಗೆ ಹೆಚ್ಚಿನ ಬೇಡಿಕೆಯೊಂದಿಗೆ ಭಾರತದ ಮೊದಲ ಏರೋಟ್ರೋಪೊಲಿಸ್ ಅಭಿವೃದ್ದಿಯೊಂದಿಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಬ್ರಿಗೇಡ್ ಗ್ರೂಪ್ ಮತ್ತು ಮೆರಾಕಿ ಸಂಶೋಧನೆ ನಡೆಸಿರುವ ಸಂಶೋಧನೆಯಲ್ಲಿ ಸಲಹೆ ನೀಡಲಾಗಿದೆ.

Vocal For Local ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳಕ್ಕೆ ಮುಂದಾದ ರಾಜ್ಯ ಸರಕಾರ

2030ರೊಳಗೆ ಸಂಪೂರ್ಣ ಅಭಿವೃದ್ಧಿಯೊಂದಿಗೆ ಈ ಪ್ರದೇಶವೊಂದರಲ್ಲಿಯೇ ಸುಮಾರು 2,50,000 ಜನರಿಗೆ ಉದ್ಯೋಗ ದೊರೆಯಲಿದೆ. ಹೆಚ್ಚುವರಿಯಾಗಿ  ಮೆಟ್ರೋ ರೈಲು 2ಬಿ ಹಂತ, ಫೆರಿಪೆರಲ್ ರಿಂಗ್ ರಸ್ತೆ, ಸ್ಯಾಟಲೈಟ್ ರಿಂಗ್ ರಸ್ತೆಗಳು ಒಳಗೊಂಡಂತೆ ಬೆಂಗಳೂರು ಉತ್ತರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುವ ವಿಶ್ವಾಸವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಉತ್ತರ ಬೆಂಗಳೂರಿನಲ್ಲಿ ವರ್ಕ್ ಪ್ರೊಫೈಲ್ ಐಟಿ/ಬಿಪಿಎಂನಿಂದ ಹೈ ವ್ಯಾಲ್ಯೂ ಕನ್ಸಲ್ಟಿಂಗ್, ಅನಾಲಿಟಿಕ್ಸ್ ಮತ್ತು ರಕ್ಷಣಾ ಮತ್ತು ಅಭಿವೃದ್ಧಿ ಕೇಂದ್ರಿತ ಉದ್ಯೋಗಗಳತ್ತ ಹೊರಳಲಿದೆ. ಈ ಪ್ರದೇಶದಲ್ಲಿ  ವಸತಿಗಿಂತಲೂ ವಾಣಿಜ್ಯ ಅಭಿವೃದ್ದಿ ಹೆಚ್ಚಾಗಲಿದೆ.  2025 ರೊಳಗೆ ಉದ್ಯಮಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಉತ್ತರ ಬೆಂಗಳೂರು ಎರಡು ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಕೇಂದ್ರಬಿಂದುವಾಗಿದೆ. ಬೆಂಗಳೂರು- ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಮತ್ತು ಚೆನ್ನೈ -ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಗಳಿಂದ ವಾಣಿಜ್ಯೋದ್ಯಮ ಮತ್ತಷ್ಟು ಹೆಚ್ಚಾಗಲಿದೆ. ಕೋವಿಡ್ ನಂತರ ಕಚೇರಿ ಮಾರುಕಟ್ಟೆಯು ಪ್ರಗತಿಪರವಾಗಿದೆ ಮತ್ತು ಮುಖ್ಯವಾಗಿ ಉಪಗ್ರಹ ಕಚೇರಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೇಡಿಕೆ ಮುಂದುವರಿಯುವ ನಿರೀಕ್ಷೆಯಿದೆ.

ಉತ್ತರ ಬೆಂಗಳೂರು ಮುಂದಿನ ಉದ್ಯಮ ಕೇಂದ್ರವಾಗಲಿದೆ. ಏಕೆಂದರೆ ಮುಂದಿನ ಕೆಲವು ವರ್ಷಗಳಲ್ಲಿ ವಾಣಿಜ್ಯ ಸಂಸ್ಥೆಗಳು ಸ್ಥಿರವಾದ ಬೆಳವಣಿಗೆಗೆ ಸಾಕ್ಷಿಯಾಗುತ್ತವೆ ಮತ್ತು ಹೆಚ್ಚುವರಿ ವಸತಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ ಎಂದು ಬ್ರಿಗೇಡ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಿರುಪಾ ಶಂಕರ್ ಹೇಳಿದ್ದಾರೆ.

BSF RECRUITMENT 2022: ಖಾಲಿ ಇರುವ 90 ಹುದ್ದೆಗಳಿಗೆ ನೇಮಕಾತಿ

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳ!: ಭಾರತದ ನಿರುದ್ಯೋಗ (unemployment ) ಸಮಸ್ಯೆ ಕಳೆದ ಮಾರ್ಚ್‌ನಲ್ಲಿ ಶೇಕಡಾ 7.60 ರಿಂದ ಏಪ್ರಿಲ್‌ನಲ್ಲಿ ಶೇಕಡಾ 7.83 ಕ್ಕೆ ಏರಿದೆ, ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ (Centre for Monitoring Indian Economy- CMIE) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ನಗರಗಳಲ್ಲಿ ಯೋಗ್ಯ ಉದ್ಯೋಗಗಳ ಕೊರತೆಯಿಂದಾಗಿ, ನಗರ ಪ್ರದೇಶಗಳಲ್ಲಿ ನಿರುದ್ಯೋಗವು ತೀವ್ರವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್‌ನಲ್ಲಿ ಶೇಕಡಾ 7.29 ರಿಂದ ಏಪ್ರಿಲ್‌ನಲ್ಲಿ ಶೇಕಡಾ 7.18 ಕ್ಕೆ ನಿರುದ್ಯೋಗದಲ್ಲಿ ಇಳಿಕೆ ಕಂಡಿದೆ, ನಗರ ನಿರುದ್ಯೋಗವು ಒಂದು ತಿಂಗಳ ಹಿಂದೆ ಶೇಕಡಾ 8.28 ರಿಂದ ಏಪ್ರಿಲ್‌ನಲ್ಲಿ ಶೇಕಡಾ 9.22ಕ್ಕೆ ತೀವ್ರ ಏರಿಕೆ ಕಂಡಿದೆ.

ಯೋಗ್ಯ ಉದ್ಯೋಗಗಳ ಕೊರತೆ, ಲಭ್ಯವಿರುವ ಕೆಲಸದಲ್ಲಿನ ಕೌಶಲ್ಯಗಳ ಅಸಾಮರಸ್ಯ (skills mismatch) ಮತ್ತು ಪ್ರಸ್ತುತ ವಾತಾವರಣದಲ್ಲಿನ ಹೆಚ್ಚುವರಿ ಸಿಬ್ಬಂದಿಗಳು ನಗರ ಮಾರುಕಟ್ಟೆಯಲ್ಲಿ ಕಡಿಮೆ ಉದ್ಯೋಗ ದರಕ್ಕೆ ಕೆಲವು ಕಾರಣಗಳಾಗಿವೆ ಎಂದು ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ (ಚಿಲ್ಲರೆ, ಇ-ಕಾಮರ್ಸ್, ಲಾಜಿಸ್ಟಿಕ್ಸ್) ಅಜೋಯ್ ಥಾಮಸ್ (Ajoy Thomas) ಹೇಳಿದ್ದಾರೆ.


 

Follow Us:
Download App:
  • android
  • ios