Asianet Suvarna News Asianet Suvarna News

Vocal For Local ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳಕ್ಕೆ ಮುಂದಾದ ರಾಜ್ಯ ಸರಕಾರ

ಬೆಂಗಳೂರಿನಿಂದ ಹೊರಗಿರುವ ಸ್ಥಳೀಯರಿಗೆ ಉದ್ಯೋಗ ಒದಗಿಸಲು,  ಕೆಎಸ್‌ಡಿಸಿ  ಪ್ರತಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ನಡೆಸಲು ತೀರ್ಮಾನಿಸಿದೆ.

Karnataka government holds job fairs in districts gow
Author
Bengaluru, First Published May 10, 2022, 10:45 AM IST

ಬೆಂಗಳೂರು (ಮೇ.10): ಬೆಂಗಳೂರಿನಿಂದ ಹೊರಗಿರುವ ಸ್ಥಳೀಯರಿಗೆ ಉದ್ಯೋಗ  ಒದಗಿಸಲು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ( Karnataka Skill Development Corporation - ಕೆಎಸ್‌ಡಿಸಿ) ಪ್ರತಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು (job fairs ) ನಡೆಸಲು ಮುಂದಾಗಿದೆ.

ಈ ಹಿಂದೆ ನಡೆಸಲಾಗಿದ್ದ ಉದ್ಯೋಗ ಮೇಳಗಳಲ್ಲಿ ಐಟಿ ಸಂಸ್ಥೆಗಳು ಸೇರಿದಂತೆ ಹಲವು ದೊಡ್ಡ ಕಂಪನಿಗಳು ಮೈಸೂರು (Mysuru) ಮತ್ತು ಮಂಗಳೂರಿನಲ್ಲಿರುವ ತಮ್ಮ ಕೇಂದ್ರಗಳಿಗೆ ನೇಮಕಾತಿ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ನಿಗಮವು ಬೆಳಗಾವಿ, ಕಲಬುರಗಿ, ಮಂಗಳೂರು (Mangaluru), ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ನಡೆಸಿದೆ, ಈ ಉದ್ಯೋಗ ಮೇಳದಲ್ಲಿ 402 ಕಂಪನಿಗಳು ಭಾಗವಹಿಸಿದ್ದು, ಕೆಎಸ್‌ಡಿಸಿ ಅಂಕಿಅಂಶಗಳ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 30,000 ಜನರು ಈ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿದ್ದರು ಮತ್ತು 10,085 ಜನರಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ನೀಡಲಾಗಿದೆ.

BMRCL RECRUITMENT 2022: ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ

ಮೇ 10 ರಂದು ರಾಮನಗರದಲ್ಲಿ (Ramanagara) ಆರನೇ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, 5,000 ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಗಳಿವೆ.

ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬಹುದು. ಉದ್ಯೋಗದ ಹುಡುಕಾಟದಲ್ಲಿ ಹೆಚ್ಚಿನ ಸಂಖ್ಯೆಯ ಜನರು ನಗರಕ್ಕೆ ಬಂದು ಬೆಂಗಳೂರಿಗೆ ಎದುರಾಗುತ್ತಿರುವ ಹೊರೆಯನ್ನು ಇದು ಕಡಿಮೆಯಾಗಲಿದೆ ಎಂದು ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

"ಹಲವು ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಬಯಸುತ್ತವೆಯಾದರೂ, ಅವಕಾಶವನ್ನು ರಾಜ್ಯಾದ್ಯಂತ ಏಕರೂಪವಾಗಿ ಹರಡುವುದು ಸವಾಲಾಗಿ ಪರಿಣಮಿಸಿದೆ. ಈ ಮೇಳಗಳಲ್ಲಿ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳ ಅನೇಕ ಅಭ್ಯರ್ಥಿಗಳು ತಮ್ಮ ಸ್ಥಳಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.

ONGC Recruitment 2022: ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ 

ಎಲ್ಲಾ ಜಿಲ್ಲೆಗಳಲ್ಲಿ ಕಿರು ಉದ್ಯೋಗ ಮೇಳಗಳು:  ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಈ ಉದ್ಯೋಗ ಮೇಳಗಳನ್ನು ಆಯೋಜಿಸಲು ಉತ್ಸುಕರಾಗಿದ್ದಾರೆ.  ಮೇಳಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ಕಂಪನಿಗಳೆಂದರೆ IBM, TCS, Reliance Retail, ಅಭಿಮೋ ಟೆಕ್ನಾಲಜೀಸ್ (Abhimo Technologies-ಮಂಗಳೂರು), ಬ್ರೈಟ್ ಸೊಲ್ಯೂಚನ್ (Bright Solution), ಕಾರಂಜಿ ಇನ್ಫೋಟೆಕ್ (Karanji Infotech-ಮಂಗಳೂರು), ರಾಂಡ್‌ಸ್ಟಾಡ್ (Randstad), ಸಾಲ್ಟ್ಸ್ನಾಪ್ ಮೀಡಿಯಾ (Saltsnap Media), ವಿನ್‌ಮ್ಯಾನ್ ಸಾಫ್ಟ್‌ವೇರ್ (Winman Software), ಕೊಡ್ನೆಸ್ಟ್ ಟೆಕ್ನಾಲಜೀಸ್ (Kodnest Technologies), iLenSys ಟೆಕ್ನಾಲಜೀಸ್  ಇತ್ಯಾದಿ.

ಇಲಾಖೆಯು ಮಿನಿ-ಉದ್ಯೋಗ ಮೇಳಗಳನ್ನು ಸಹ ನಡೆಸಿತು,  ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಸ್ವಯಂ ಉದ್ಯೋಗದತ್ತ ಗಮನ ಹರಿಸಿದರು. ಹೀಗಾಗಿ ಕೋವಿಡ್ ಹೋಪ್ಸ್ ಮಿನಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ ಎಂದು  KSDC ಯ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ  ಹೇಳಿಕೆ ನೀಡಿದ್ದಾರೆ.

Nimhans Recruitment 2022: ಹಿರಿಯ ಸಂಶೋಧನಾ ​ ಫೆಲೋ ಸೇರಿ 4 ಹುದ್ದೆಗಳಿಗೆ ನೇಮಕಾತಿ

ರಾಜ್ಯ ಸರಕಾರವು ಕೋವಿಡ್ ಬಳಿಕ  ಉದ್ಯೋಗ ಮೇಳ ಕಾರ್ಯಕ್ರಮ ಹಮ್ಮಿಕೊಂಡಿತು.  ಜುಲೈ 10 ರಂದು ಮೊದಲ ರೀತಿಯ ವರ್ಚುವಲ್ ಉದ್ಯೋಗ ಮೇಳವನ್ನು  ನಡೆಸಿತು.  ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(ಕೆಎಸ್‌ಡಿಸಿ) ದಿಂದ ಸಂಯೋಜಿಸಲ್ಪಟ್ಟ ಈ ಉದ್ಯೋಗ ಮೇಳದಲ್ಲಿ ಸುಮಾರು 6,000 ಉದ್ಯೋಗಾವಕಾಶಗಳಿಗಾಗಿ 40 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. 

Follow Us:
Download App:
  • android
  • ios