ಉದ್ಯಮಿ ನಿಖಿಲ್ ಕಾಮತ್ ಜೊತೆ, ಕೋರ್ ತಂಡದ ಜೊತೆ ಕೆಲಸ ಮಾಡಲು ಅವಕಾಶವಿದೆ. ಜಿರೋಧ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ ಭರ್ಜರಿ ಉದ್ಯೋಗ ಆಫರ್ ನೀಡಿದ್ದಾರೆ.
ಬೆಂಗಳೂರು (ಜು.19) ಜಿರೋಧ ಸಹ ಸಂಸ್ಥಾಪಕ, ಭಾರತದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನಿಖಿಲ್ ಕಾಮತ್ ಇದೀಗ ಭರ್ಜರಿ ಉದ್ಯೋಗ ಆಫರ್ ನೀಡಿದ್ದಾರೆ. ವಿಶೇಷ ಅಂದರೆ ನಿಖಿಲ್ ಕಾಮತ್ ಜೊತೆ, ನಿಖಿಲ್ ಕಾಮತ್ ಕೋರ್ ತಂಡದ ಜೊತೆ ಕೆಲಸ ಮಾಡಲು ಬಯಸಿದರೆ ಉತ್ತಮ ಜಾಬ್ ಆಫರ್ ನೀಡಲಾಗಿದೆ. ಹೂಡಿಕೆ ನಿರ್ಧಾರ, ಸ್ಟಾಕ್ಸ್ ಸೇರಿದಂತೆ ಕೆಲ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರು ಬೇಕಾಗಿದ್ದಾರೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಪ್ರಮುಖ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ಹಾಗೂ ಅರ್ಹರು ಕೈತುಂಬ ಸಬಂಳದ ಈ ಉದ್ಯೋಗ ಆಫರ್‌ಗೆ ಅರ್ಜಿ ಸಲ್ಲಿಸಬಹುದು.
ಎರಡು ಪ್ರಮುಖ ಹುದ್ದೆಗೆ ನೇಮಕಾತಿ
ನಿಖಿಲ್ ಕಾಮತ್ ಜೊತೆ ಅವರ ಕೋರ್ ತಂಡದಲ್ಲಿ ಕೆಲಸ ಮಾಡಲು ನೇಮಕಾತಿ ನಡೆಯಲಿದೆ. ಎರಡು ಪ್ರಮುಖ ಹುದ್ದೆಗಳಿವೆ. ಒಂದು ಸೀನಿಯರ್ ಡೇಟಾ ಸೈಂಟಿಸ್ಟ್ ಹಾಗೂ ಮತ್ತೊಂದು ಸೀನಿಯರ್ ರಿಚರ್ಚರ್. ಇಷ್ಟೇ ಅಲ್ಲ ಪ್ರಮುಖವಾಗಿ ಈ ಹುದ್ದೆಯಲ್ಲಿ ಕೆಲಸ ಮಾಡಲು ಬಯಸುವವರು ಪ್ರತಿಭಾನ್ವಿತರಾಗಿರಬೇಕು ಎಂದಿದ್ದಾರೆ. ಆಯಾ ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಅನುಭವ, ಪರಿಣಿತಿ ಹೊಂದಿರಬೇಕು, ಅನಾಲಿಟಿಕ್ಸ್ ಕುರಿತು ಡೆಪ್ತ್ ಇರಬೇಕು ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
ನಿಖಿಲ್ ಕಾಮತ್ ಘೋಷಿಸಿದ ಉದ್ಯೋಗ ಗಿಟ್ಟಿಸಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅರ್ಹತೆಗಳು, ಜವಾಬ್ದಾರಿಗಳ ಕುರಿತು ಉಲ್ಲೇಖಿಸಿದ್ದಾರೆ. ಹಂತ ಹಂತದಲ್ಲಿ ಅರ್ಹತೆ ಹಾಗೂ ಜವಾಬ್ದಾರಿಗಳ ಕುರಿತು ಸಂಪೂರ್ಣ ವಿವರಣೆ ನೀಡಲಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳ ಪೋಸ್ಟಿಂಗ್ ಎಲ್ಲಿ?
ನಿಖಿಲ್ ಕಾಮತ್ ತಂಡದಲ್ಲಿ ಕೆಲಸ ಮಾಡಲು ಬಯಸುವ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳ ಅರ್ಜಿಯನ್ನು ಅಂತಿಮಗೊಳಿಸಿ ಸಂದರ್ಶನ ನಡೆಸಲಾಗುತ್ತದೆ. ಈ ಸಂದರ್ಶನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಮುಂಬೈನಲ್ಲಿ ನಿಖಿಲ್ ಕಾಮತ್ ತಂಡದ ಜೊತೆ ಕೆಲಸ ಮಾಡಲಿದ್ದಾರೆ.
ವೇತನ ಎಷ್ಟು?
ನಿಖಿಲ್ ಕಾಮತ್ ಉದ್ಯೋಗ ನೇಮಕಾತಿ ಕುರಿತು ಘೋಷಿಸಿದ್ದಾರೆ. ವೇತನ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಪ್ರಮುಖ ಹುದ್ದೆಯಾಗಿರುವ ಕಾರಣ ಕೈತುಂಬ ಸಂಬಳ ಖಚಿತ ಅನ್ನೋದರಲ್ಲಿ ಎರಡು ಮಾತಿಲ್ಲ. ಆಸಕ್ತರು ಬೇಗನೇ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ.
ಜಿರೋಧ ಸಹ ಸಂಸ್ಥಾಪಕನಾಗಿರುವ ನಿಖಿಲ್ ಕಾಮತ್ ಭಾರತದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಯುವ ಉದ್ಯಮಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನು ಪಾಡ್‌ಕಾಸ್ಟ್ ಮೂಲಕವೂ ನಿಖಿಲ್ ಕಾಮತ್ ಭಾರಿ ಜನಪ್ರಿಯತೆ ಗಳಿಸಿದ್ದಾರೆ.
