ಅಮ್ಮಾ ಈ ರೀತಿ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರೆ ಹೇಗೆ? ಸುದ್ದಿ ಎಲ್ಲೆಡೆ ಹರಡಿದರೆ ಸಮಸ್ಯೆ ಆಗಲಿದೆ. ಇದು ಉದ್ಯಮಿ ನಿಖಿಲ್ ಕಾಮತ್, ತಾಯಿ ರೇವತಿ ಕಾಮತ್ ಫೇಸ್‌ಬುಕ್ ಪೋಸ್ಟ್‌ಗೆ ಹೇಳಿದ ಉತ್ತರ. ಅಷ್ಟಕ್ಕೂ ತಾಯಿ ಸೋಶಿಯಲ್ ಮೀಡಿಯಾದ ಪೋಸ್ಟ್ ನಿಖಿಲ್ ಕಾಮತ್ ಪ್ರಶ್ನಿಸಿದ್ದು ಯಾಕೆ?

ಬೆಂಗಳೂರು (ಜು.04) ಜಿರೋಧ ಸಹ ಸಂಸ್ಥಾಪಕ, ಯುವ ಉದ್ಯಮಿ ನಿಖಿಲ್ ಕಾಮತ್ ಇತ್ತೀಚೆಗೆ ಪಾಡ್‌ಕಾಸ್ಟ್ ಮೂಲಕವೂ ಭಾರಿ ಸದ್ದು ಮಾಡುತ್ತಿದ್ದಾರೆ. ಇದೇ ವೇಳೆ ನಿಖಿಲ್ ಕಾಮತ್ ತಾಯಿ ರೇವತಿ ಕಾಮತ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಫೇಸ್‌ಬುಕ್ ಮೂಲಕ ರೇವತಿ ಕಾಮತ್ ಹಲವು ಮಾಹಿತಿಗಳನ್ನು, ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈ ರೀತಿ ಹಂಚಿಕೊಂಡ ಒಂದು ಫೋಟೋವನ್ನು ಪುತ್ರ ನಿಖಿಲ್ ಕಾಮತ್ ಪ್ರಶ್ನಿಸಿದ್ದಾರೆ. ಅಮ್ಮಾ ಈ ರೀತಿ ನಾವೇ ನ್ಯೂಸ್ ಹರಡಿದರೆ ಹಲವರಿಗೆ ಸಮಸ್ಯೆಯಾಗಲಿದೆ ಎಂದು ಸಲಹೆ ನೀಡಿದ್ದಾರೆ. ಇದೀಗ ನಿಖಿಲ್ ಕಾಮತ್ ಹೇಳಿದ ಮಾತುಗಳು, ಘಟನೆಯನ್ನು ರೇವತಿ ಕಾಮತ್ ಬಹಿರಂಗಪಡಿಸಿದ್ದಾರೆ.

ಬೆಂಜ್ ಕಾರಿನ ಫೋಟೋ

ರ್ಯಾಪಿಡ್ ರಶ್ಮಿ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ರೇವತಿ ಕಾಮತ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಿಖಿಲ್ ಕಾಮತ್ ನೀಡಿದ ಸಲಹೆ ಕುರಿತು ಹೇಳಿದ್ದಾರೆ. ತಾಯಿ ಹುಟ್ಟು ಹಬ್ಬದ ಸಂದರ್ಭದಲ್ಲಿ ನಿಖಿಲ್ ಕಾಮತ್, ರೇವತಿ ಕಾಮತ್‌ಗೆ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಕಾರು ಉಡುಗೊರೆಯಾಗಿ ನೀಡಿದ್ದರು. ಮಗ ಪ್ರೀತಿಯಿಂದ ಕೊಡಿಸಿದ ಕಾರಿನ ಮೇಲೆ ತಾಯಿಗೆ ಅತೀವ ಪ್ರೀತಿ. ಹೀಗಾಗಿ ರೇವತಿ ಕಾಮತ್ ಕಾರು ಡೆಲಿವರಿ ಪಡೆದುಕೊಂಡ ಫೋಟೋವನ್ನು ಎಂದಿನಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೇವತಿ ಕಾಮತ್ ಆಪ್ತರು, ಅವರನ್ನು ಫಾಲೋ ಮಾಡುತ್ತಿರುವ ಹಲವರು ಅಭಿನಂದನೆ ಸಲ್ಲಿಸಿಲಿದ್ದಾರೆ.

ಭಾವನೆಗೆ ಧಕ್ಕೆಯಾಗಲಿದೆ ಎಂದ ನಿಖಿಲ್

ಫೇಸ್‌ಬುಕ್‌ನಲ್ಲಿ ಮರ್ಸಿಡೀಸ್ ಬೆಂಜ್ ಕಾರಿನ ಪಡೆದುಕೊಳ್ಳುತ್ತಿರುವ ಫೋಟೋ ಭಾರಿ ವೈರಲ್ ಆಗಿತ್ತು. ನಿತಿನ್ ಕಾಮತ್ ಈ ಪೋಸ್ಟ್ ಕುರಿತು ಏನು ಹೇಳಲಿಲ್ಲ. ಆದರೆ ಕಿರಿಯ ಮಗ ನಿಖಿಲ್ ಕಾಮತ್ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಅಮ್ಮಾ ಈ ರೀತಿ ನ್ಯೂಸ್ ಹರಡಿದರೆ ಹೇಗೆ? ಹಲವರು ಆರ್ಥಿಕ ಸಮಸ್ಯೆಯಲ್ಲಿ, ಒಂದು ಹೊತ್ತಿನ ಊಟಕ್ಕಾಗಿ ಅತೀವ ಕಷ್ಟಪಡುತ್ತಿರುತ್ತಾರೆ. ನಾವು ಅವರ ಮೇಲೆ ಈ ರೀತಿ ಐಷಾರಾಮಿತನದ ಫೋಟೋ ಹಾಕುವುದು ಶೋ ಆಫ್ ಮಾಡಿದೆ. ಹಲವರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ನಿಖಿಲ್ ಕಾಮತ್ ಫೋಟೋ ಕುರಿತು ಹೇಳಿದ್ದ ಎಂದು ರೇವಿತಿ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ರೇವತಿ ಕಾಮತ್ ಹೆಚ್ಚು ಯೋಜನೆ ಮಾಡಿದೆ ಕಾರಿನ ಫೋಟೋ ಹಾಕಿದ್ದರು. ಇದು ಸಂಪತ್ತು ತೋರಿಸುವ ಶೋ ಆಫ್ ಉದ್ದೇಶ ಇರಲಿಲ್ಲ. ಆದರೆ ಫೋಟೋ ಆ ರೀತಿ ಅರ್ಥಕೊಡುತ್ತೆ ಅನ್ನೋದು ನಿಖಿಲ್ ಹೇಳಿದ ಬಳಿಕ ಅರ್ಥವಾಗಿತ್ತು ಎಂದು ರೇವತಿ ಕಾಮತ್ ಹೇಳಿದ್ದಾರೆ. ಎಂದಿನಂತೆ ಫೇಸ್‌ಬುಕ್ ಫೋಟೋವನ್ನು ಪೋಸ್ಟ್ ಮಾಡಿದ್ದೆ ಎಂದು ರೇವತಿ ಕಾಮತ್ ಹೇಳಿದ್ದಾರೆ.

ತಾಯಿಗೆ ಬೆನ್ನೆಲುಬಾಗಿ ನಿಂತಿರುವ ಮಕ್ಕಳು

ಪ್ರತಿ ಹೆಜ್ಜೆ ಹೆಜ್ಜೆಗೂ ಮಕ್ಕಳು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ರೇವತಿ ಕಾಮತ್ ಹೇಳಿದ್ದಾರೆ. ಇತ್ತೀಚೆಗೆ ನಿತಿನ್ ಹಾಗೂ ನಿಖಿಲ್ ಕಾಮತ್ ಇಬ್ಬರನ್ನು ಬೆಳೆಸಿದ ರೀತಿ ಕುರಿತು ರೇವತಿ ಕಾಮತ್ ಹೇಳಿದ್ದರು. ಇಬ್ಬರಿಗೆ ಬಾಲ್ಯದಲ್ಲಿ ಹೊರಗಿನ ಆಹಾರ ನೀಡುತ್ತಿರಲಿಲ್ಲ ಎಂದಿದ್ದರು. ಶಾಲೆ, ಕಾಲೇಜು ದಿನಗಳಲ್ಲಿ ಇಬ್ಬರಿಗೂ ಹೊರಗಿನ ಆಹಾರ ನೀಡುತ್ತಿರಲಿಲ್ಲ. ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೇ ಆಹಾರ ತಯಾರಿಸುತ್ತಿದ್ದೆ ಎಂದಿದ್ದರು. ಪ್ರತಿ ದಿನ ಬೇರೆ ಬೇರೆ ಖಾದ್ಯಗಳನ್ನು ತಯಾರಿಸಿ ನೀಡುತ್ತಿದ್ದೆ. ಸ್ವತಃ ನಾನೇ ಅಡುಗೆ ಮಾಡುತ್ತಿದೆ. ಒಂದು ದಿನವೂ ಹೊರಗಿನಿಂದ ಆಹಾರ ನೀಡಲಿಲ್ಲ ಎಂದಿದ್ದರು. ಇದು ಉತ್ತಮ ಆರೋಗ್ಯಕ್ಕೆ ಸಹಾಕಾರಿ ಎಂದು ರೇವತಿ ಕಾಮತ್ ಹೇಳಿದ್ದರು.