ಬಾಲಿವುಡ್ ಸಿನಿಮಾಗಳು ಕಳೆಗುಂದಿದೆ. ಮತ್ತೆ ವೀಕ್ಷಕರ ಸೆಳೆಯಲು ಏನು ಮಾಡಬೇಕು? ಉದ್ಯಮಿ ನಿಖಿಲ್ ಕಾಮತ್ ಬಿರಿಯಾನಿ ಮೂಲಕ ಬಾಲಿವುಡ್ ಮಂದಿಗೆ ಮಹತ್ವದ ಸಲಹೆ ನೀಡಿದ್ದಾರೆ. ಇದೇ ವೇಳೆ ಕನ್ನಡ ಹಾಗೂ ಮಲೆಳೆಯಾಳಂ ಸಿನಿಮಾ ಇಂಡಸ್ಟ್ರೀಯನ್ನು ನಿಖಿಲ್ ಹೊಗಳಿದ್ದಾರೆ.
ಬೆಂಗಳೂರು (ಜು.13) ಉದ್ಯಮಿ, ಯೂಟ್ಯೂಬರ್ ನಿಖಿಲ್ ಕಾಮತ್ ಸಾಮಾನ್ಯವಾಗಿ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಹಲವು ಅಧ್ಯಯನ ವರದಿಗಳ ಆಧಾರದ ಮೇಲೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಿಖಿಲ್ ಕಾಮತ್ ಬಾಲಿವುಡ್ ಸಿನಿಮಾ ಎಡವುತ್ತಿರುವುದಕ್ಕೆ ಕೆಲ ಕಾರಣ ಕೊಟ್ಟಿದ್ದಾರೆ. ಇಷ್ಟೇ ಅಲ್ಲ ಕನ್ನಡ, ಮಲೆಯಾಳಂ ಸಿನಿಮಾ ಇಂಡಸ್ಟ್ರೀ ಉದಾಹರಣೆಗಳನ್ನು ಮುಂದಿಟ್ಟು ಕೆಲ ಸಲಹೆಗಳನ್ನು ನೀಡಿದ್ದಾರೆ. ಇದೀಗ ಬಾಲಿವುಡ್ ಸಿನಿಮಾ ಕುರುತು ನಿಖಿಲ್ ಕಾಮತ್ ಹೇಳಿದ ಹಲವು ಸಲಹಗಳಿಗೆ ಹಲವರು ಧನಿಗೂಡಿಸಿದ್ದಾರೆ.
ಲೋಕಲ್ ಬಿರಿಯಾನಿಯೇ ನನ್ನ ಮೊದಲ ಆಯ್ಕೆ
ನಾನು 100ರಲ್ಲಿ 99 ಬಾರಿ ಮಿಷಿಲಿನ್ ಫ್ಯಾನ್ಸಿ ರೆಸ್ಟೋರೆಂಟ್‌ಗಿಂತ ಲೋಕಲ್ ಬಿರಿಯಾನಿ ಸ್ಥಳ ಆಯ್ಕೆ ಮಾಡುತ್ತೇನೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿ ಸ್ಥಳೀಯ, ಭಾರತದ, ಭಾರತೀಯರ ಕನೆಕ್ಟ್ ಆಗುವ ಕತೆಗಳನ್ನು ಆರಿಸಿಕೊಳ್ಳಬೇಕು. ಭಾರತೀಯರ ಕತೆಗಳು ಬೆಸೆದಿರಬೇಕು.ಇದರ ಬದಲು ಹಾಲಿವುಡ್ ಸೇರಿದಂತೆ ಇತರ ಇಂಡಸ್ಟ್ರಿಗಳಂತೆ ಕತೆಗಳನ್ನು ನೀಡಿದರೆ ಯಶಸ್ಸು ಸಿಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾಗೆ ಸಿಕ್ಕಿದೆ ಯಶಸ್ಸು
ಫಿನ್‌ಫ್ಲೋ ಅಧ್ಯಯನ ವರದಿಯ ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ನಿಖಿಲ್ ಕಾಮತ್ ಸನಿಮಾ ಕತೆ, ಬಾಕ್ಸ್ ಆಫೀಸ್ ಕಲಕ್ಷನ್ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಬಾಲಿವುಡ್ ಸಿನಿಮಾವನ್ನು ಜನ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಬದಲು ಇತರ ಭಾಷೆಗಳ ಪ್ರಮುಖವಾಗಿ ದಕ್ಷಿಣ ಭಾರತದ ಸಿನಿಮಾ ನೋಡಲು ಇಷ್ಟು ಪಡುತ್ತಿದ್ದಾರೆ. ಕೋವಿಡ್ ಬಳಿಕ ಅಂದರೆ 2024ರ ಸಾಲಿನಲ್ಲಿ ಬಾಲಿವುಡ್ ಸಿನಿಮಾಗೆ ಥಿಯೇಟರ್‌ಗೆ ಆಗಮಿಸಿದ ಪ್ರೇಕ್ಷಕರ ಸಂಖ್ಯೆ 883 ಮಿಲಿಯನ್. ಆದರೆ ಕೋವಿಡ್‌ಗಿಂತ ಮುಂಚೆ 1 ಬಿಲಿಯನ್ ಆಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಬಾಲಿವುಡ್ ಸಿನಿಮಾ ತನ್ನ ಚಾರ್ಮ ಕಳೆದುಕೊಳ್ಳುತ್ತಿದ್ದರೆ, ದಕ್ಷಿಣ ಭಾರತದ ಸಿನಿಮಾ ಅದರಲ್ಲೂ ಕನ್ನಡ ಹಾಗೂ ಮಲೆಯಾಳಂ ಭಾರಿ ಯಶಸ್ಸು ಕಂಡಿದೆ ಎಂದು ಫಿನ್‌ಫ್ಲೋ ಅಧ್ಯಯನ ವರದಿ ಹೇಳುತ್ತಿದೆ.
ಬಾಲಿವುಡ್‌ನ ಕಡಿಮೆ ಬಜೆಟ್ ಸಿನಿಮಾ ಯಶಸ್ಸು
ಬಾಲಿವುಡ್‌ನಲ್ಲಿ 2024ರ ಸಾಲಿನಲ್ಲಿ ಕಡಿಮೆ ಅಥವಾ ಮಧ್ಯಮ ಬಜೆಟ್ ಸಿನಿಮಾಗಳು ತಕ್ಕ ಮಟ್ಟಿಗಿನ ಯಶಸ್ಸು ಕಂಡಿದೆ. 2024ರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡ 10 ಬಾಲಿವುಡ್ ಸಿನಿಮಾ ಪೈಕಿ 8 ಲೋ ಬಜೆಟ್ ಅಥವಾ ಮದ್ಯಮ ಬಜೆಟ್ ಸಿನಿಮಾ ಆಗಿದೆ ಎಂದು ಫಿನ್‌ಫ್ಲೋ ಹೇಳಿದೆ. ಜನರು ಲೋಕಲ್ ಫ್ಲೇವರ್ ಬಯಸುತ್ತಾರೆ. ಇಲ್ಲಿನ ಕತೆ, ಇಲ್ಲಿನ ಜನರ ಜೀವನದಲ್ಲಿ ಹಾಸು ಹೊಕ್ಕ ಕತೆಗಳು, ಪೌರಾಣಿಕತೆಯ ಎಳೆಗಳನ್ನು ಜನ ಬಯಸುತ್ತಿದ್ದಾರೆ.
ಭಾರತದ ಚಿತ್ರರಂಗವನ್ನೇ ಬಾಲಿವುಡ್ ಹಿಡಿದಿಟ್ಟ ಕಾಲವಿತ್ತು. ಬಾಲಿವುಡ್ ಸಿನಿಮಾ ಬಳಿಕವೇ ಉಳಿದೆಲ್ಲಾ ಸಿನಿಮಾ ಅನ್ನೋ ರೀತಿ ಬೆಳೆದಿತ್ತು. ಆದರೆ ಬಾಲಿವುಡ್ ಕತೆಗಳು ಇಲ್ಲಿನ ಜನರ ಭಾವನೆಯನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ. ಜನರನ್ನು ಆಕರ್ಷಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಹಾಗೂ ಮಲೆಯಾಳಂ ಸಿನಿಮಾ ಯಶಸ್ಸಿಯಾಗುತ್ತಿದೆ ಎಂದು ಅಧ್ಯಯನ ವರದಿ ಉಲ್ಲೇಖಿಸಿ ನಿಖಿಲ್ ಕಾಮತ್ ಹೇಳಿದ್ದಾರೆ.
ಕಾಂತಾರಾ, ಆರ್‌ಆರ್‌ಆರ್, ಹಾಗೂ ಮಲೆಯಾಳಂನ ಹಲವು ಸಿನಿಮಾಗಳು ಸ್ಥಳೀಯ ಕತೆ, ಸ್ಥಳೀಯ ಲೋಕೇಶನ್, ಇಲ್ಲಿನ ಸಂಸ್ಕೃತಿ, ಜನರ ಆಚಾರ ವಿಚಾರಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಸಿನಿಮಾಗಳು ವಿದೇಶಿ ಶೈಲಿಯ ಸ್ಟೋರಿ ಟೆಲ್ಲಿಂಗ್, ವಿದೇಶಿಕರಣದಿಂದ ದೂರ ಉಳಿದ ಸಿನಿಮಾ. ಇದು ಭಾರತೀಯರನ್ನು ಎಷ್ಟರ ಮಟ್ಟಿಗೆ ಹಿಡಿದಿಟ್ಟುಕೊಂಡ ಸಿನಿಮಾ ಅನ್ನೋದು ಸಾಬೀತಾಗಿದೆ. ಪ್ರೇಕ್ಷಕರು ಬಾಲಿವುಡ್‌ಗೆ ಕನೆಕ್ಟ್ ಆಗುತ್ತಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ. ಇದೇ ವಿಚಾರ ಮುಂದಿಟ್ಟ ನಿಖಿಲ್ ಕಾಮತ್ ಟ್ವೀಟ್ ಮಾಡಿದ್ದಾರೆ.
