ಈಗ ಇರುವಂತಹ ಕೆಲಸವು ಬೋರ್ ಹೊಡೆಸಿದ್ದು, 50ರ ನಂತರ ನೀವು ಬೇರೆ ಕೆಲಸ ಮಾಡಬೇಕು ಎಂದು ಬಯಸಿದರೆ, ಇಲ್ಲಿದೆ ನಿಮಗಾಗಿ ಒಂದಷ್ಟು ಸಲಹೆಗಳು. ಈ ಸಮಯದಲ್ಲಿ ನೀವು ಹಣವನ್ನಲ್ಲದೇ ನಿಮ್ಮ ಪ್ಯಾಶನ್ ಬೆನ್ನಟ್ಟಿ ಹೊರಟಿದ್ದರೆ, ಈ ಅವಕಾಶಗಳಿಗೆ ನೀವು ಖಂಡಿತವಾಗಿ ಕರಿಯರ್ ನಲ್ಲಿ ಬದಲಾವಣೆ ತರಬಹುದು.
50ರ ನಂತರ ಹೊಸ ಕರಿಯರ್
ಹಿಂದೆ, ಜನರು 40 ಅಥವಾ 50 ವರ್ಷ ವಯಸ್ಸಾಗುತ್ತಿದ್ದಂತೆ ಜೀವನದಲ್ಲಿ ಸೆಟಲ್ ಆಗಲು ಯೋಚನೆ ಮಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ. ಹಿಂದೆ ಈ ವಯಸ್ಸಿನಲ್ಲಿ ಜನರು ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗುತ್ತಿದ್ದರು, ಆದರೆ ಈಗ ಅವರು ಹೊಸ ಕರಿಯರ್ ಆಯ್ಕೆಗಳನ್ನು ಹುಡುಕುತ್ತಿರುತ್ತಾರೆ. ನೀವು ಕೂಡ 50ರ ನಂತರ ಹೊಸ ಕರಿಯರ್ ಶುರು ಮಾಡಲು ಬಯಸಿದರೆ ನೀವು ಯಾವ ಕೆಲಸ ಆಯ್ಕೆ ಮಾಡಬಹುದು ನೋಡೋಣ
ಹಣವನ್ನಲ್ಲ, ಪ್ಯಾಶನ್ ಬೆನ್ನಟ್ಟಿರಿ
ಜನರು ಹದಿಹರೆಯದಲ್ಲಿದ್ದಾಗ, ಪ್ರತಿಯೊಂದು ಕರಿಯರ್ ಆಕರ್ಷಕವಾಗಿರುತ್ತದೆ, ಆದರೆ 50ರ ಹೊತ್ತಿಗೆ, ನಿಮ್ಮ ಸಾಮರ್ಥ್ಯ ಮತ್ತು ವೀಕ್ ನೆಸ್ ಎರಡೂ ನೀವು ಚೆನ್ನಾಗಿ ತಿಳಿದಿರುತ್ತೀರಿ. ನೀವು ಯಾವುದರಲ್ಲಿ ಉತ್ತಮರು ಎಂದು ನಿಮಗೆ ತಿಳಿದಿದೆ. ಇದಲ್ಲದೆ, ಹಣಕಾಸಿನ ಸಮಸ್ಯೆ ಅಥವಾ ಸೆಟಲ್ ಆಗುವ ಭಯವಿರುವುದಿಲ್ಲ. 50 ನೇ ವಯಸ್ಸಿನಲ್ಲಿ, ನೀವು ನಿಮ್ಮ ಎಲ್ಲಾ ಪ್ರಮುಖ ಜವಾಬ್ದಾರಿಗಳನ್ನು ಪೂರೈಸಿರುತ್ತೀರಿ, ಹಾಗಾಗಿ ನಿಮ್ಮ ಪ್ಯಾಶನ್ ಫಾಲೋ ಮಾಡಿ.
ಈ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆಯೇ?
ಈ ವಯಸ್ಸಿನಲ್ಲಿ ಯಾರೂ ಮತ್ತೆ ಶಿಕ್ಷಣ ಪಡೆಯಲು ಅಥವಾ ಹೊಸ ಸ್ಕಿಲ್ ಕಲಿಯಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ತಪ್ಪು. ಇಂದಿನ ಡಿಜಿಟಲ್ ಯುಗದಲ್ಲಿ, ಹೊಸ ಕೌಶಲ್ಯಗಳನ್ನು ಕಲಿಯುವುದು ತುಂಬಾ ಸುಲಭ. ಪದವಿ ಅಗತ್ಯವಿ ಕೂಡ ಇರುವುದಿಲ್ಲ. ನೀವು ಯಾವೆಲ್ಲಾ ಉದ್ಯೋಗವನ್ನು ಮಾಡಬಹುದು ನೋಡೋಣ.
AI ಮತ್ತು ಡಿಜಿಟಲ್ ಸ್ಕಿಲ್
AI ಟೂಲ್ಸ್, ಪ್ರಾಮ್ಟ್ ರೈಟಿಂಗ್, ಡೇಟಾ ಅನಾಲಿಸೀಸ್ ಮತ್ತು ಅಟೋಮೇಶನ್ ನಂತಹ ಕೌಶಲ್ಯಗಳಿಗೆ ಇದೀಗ ಹೆಚ್ಚು ಬೇಡಿಕೆ ಇದೆ. ನಿಮಗೆ ಟೆಕ್ನಾಲಜಿ ಬಗ್ಗೆ ಗೊತ್ತಿರದೇ ಇದ್ದರೂ ಕೆಲವು ಆರಂಭಿಕ ಕೋರ್ಸ್ ಲಭ್ಯವಿದೆ.
ಸೈಬರ್ ಸೆಕ್ಯೂರಿಟಿ
ಡಿಜಿಟಲ್ ಜಗತ್ತು ವಿಸ್ತಾರವಾಗುತ್ತಿದ್ದಂತೆ, ಸೈಬರ್ ಸೆಕ್ಯೂರಿಟಿ ಪ್ರೊಫೆಶನ್ ಅಗತ್ಯವು ನಿರಂತರವಾಗಿ ಹೆಚ್ಚುತ್ತಿದೆ. ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಕಂಪ್ಲಾಯನ್ಸ್ ಹುದ್ದೆಗಳಿಗೆ ಅನುಭವಿ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ.
ಪ್ರಾಜೆಕ್ಟ್ ಮತ್ತು ಪ್ರಾಡಕ್ಟ್ ಮ್ಯಾನೇಜ್ ಮೆಂಟ್
ನೀವು ತಂಡಗಳು ಮತ್ತು ಪ್ರಾಜೆಕ್ಟ್ ನಿರ್ವಹಿಸುವಲ್ಲಿ ಅನುಭವ ಹೊಂದಿದ್ದರೆ, ಈ ಕ್ಷೇತ್ರವು ನಿಮಗೆ ಉತ್ತಮ ಆಯ್ಕೆಯಾಗಬಹುದು.
ಫಿನಾನ್ಶಿಯಲ್ ಪ್ಲಾನಿಂಗ್
ನೀವು ಹಣಕಾಸು ಯೋಜನೆಯಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಫಿನಾನ್ಸಿಯಲ್ ಅಡ್ವೈಸರ್ ಅಥವಾ ವೆಲ್ತ್ ಮ್ಯಾನೇಜರ್ ಆಗಿ ಕೆಲಸ ಮಾಡಬಹುದು.
ಡಿಜಿಟಲ್ ಮಾರ್ಕೆಟಿಂಗ್ ಮತ್ತು ವಿಷಯ
ಕಂಟೆಂಟ್ ರೈಟಿಂಗ್, ಸೋಶಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಮತ್ತು ಇ-ಕಾಮರ್ಸ್‌ನಂತಹ ಕ್ಷೇತ್ರಗಳಲ್ಲಿ ಸ್ವತಂತ್ರ ಮತ್ತು ಪೂರ್ಣ ಸಮಯದ ಅವಕಾಶಗಳಿವೆ. ಇವುಗಳಲ್ಲಿ ಯಾವುದನ್ನೂ ಬೇಕಾದರೂ ನೀವು ಟ್ರೈ ಮಾಡಬಹುದು.


