ಫೇಸ್ ಬುಕ್ ನಲ್ಲಿ ಕೆಲಸ ಮಾಡಲು ಗೂಗಲ್, ಅಮೇಜಾನ್ ಆಫರ್ಸ್ ಬಿಟ್ಟ ಯುವಕ, 1 ಕೋಟಿ ವೇತನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಾದವ್‌ಪುರದಲ್ಲಿರುವ ಜಾಧವ್‌ಪುರ ವಿಶ್ವವಿದ್ಯಾನಿಲಯದ (ಜೆಯು) ವಿದ್ಯಾರ್ಥಿಯೊಬ್ಬರು ಫೇಸ್‌ಬುಕ್‌ನಲ್ಲಿ ಬರೋಬರಿ ಮೊತ್ತದ ಸಂಬಳದ ಕೆಲಸಕ್ಕೆ ಆಯ್ಕೆಯಾಗಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಾದವ್‌ಪುರದಲ್ಲಿರುವ ಜಾಧವ್‌ಪುರ ವಿಶ್ವವಿದ್ಯಾನಿಲಯದ (ಜೆಯು) ವಿದ್ಯಾರ್ಥಿಯೊಬ್ಬರು ಫೇಸ್‌ಬುಕ್‌ನಲ್ಲಿ ಬರೋಬರಿ ಮೊತ್ತದ ಸಂಬಳದ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿ ಬಿಸಾಖ್ ಮೊಂಡಲ್ ಅವರು ವಾರ್ಷಿಕ 1.8 ಕೋಟಿ ರೂಪಾಯಿಗಳ ವೇತನದ ಪ್ಯಾಕೇಜ್ ಇರುವ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಲಂಡನ್‌ನಲ್ಲಿ ಈ ಉದ್ಯೋಗವಿರಲಿದೆ.
ಈ ವರ್ಷ ಜೆಯು ವಿದ್ಯಾರ್ಥಿಯೊಬ್ಬರು ಪಡೆದ ಅತ್ಯಧಿಕ ವೇತನದ ಪ್ಯಾಕೇಜ್ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ,ಜಾಧವ್‌ಪುರ ವಿಶ್ವವಿದ್ಯಾನಿಲಯ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಒಂಬತ್ತು ವಿದ್ಯಾರ್ಥಿಗಳು ವಾರ್ಷಿಕ 1 ಕೋಟಿ ರೂಪಾಯಿಗಿಂತ ಹೆಚ್ಚಿನ ವೇತನದ ಉದ್ಯೋಗವನ್ನು ಸಾಗರೋತ್ತರ (ವಿದೇಶದಲ್ಲಿ)ದಲ್ಲಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಸಾಖ್ ಸೆಪ್ಟೆಂಬರ್‌ನಲ್ಲಿ ಈ ಉದ್ಯೋಗಕ್ಕಾಗಿ ಲಂಡನ್‌ಗೆ ತೆರಳಲಿದ್ದಾರೆ. ಮಂಗಳವಾರ (ಜೂನ್ 21) ರಾತ್ರಿ ನನಗೆ ಕೆಲಸದ ಪ್ರಸ್ತಾಪ ಸಿಕ್ಕಿತು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಹಲವಾರು ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಮತ್ತು ನನ್ನ ಪಠ್ಯಕ್ರಮದ ಅಧ್ಯಯನದ ಹೊರತಾದ ಜ್ಞಾನವನ್ನು ಸಂಗ್ರಹಿಸಲು ನನಗೆ ಅವಕಾಶ ಸಿಕ್ಕಿತು. ಇದು ಸಂದರ್ಶನಗಳನ್ನು ಯಶಸ್ವಿಯಾಗಿ ಎದುರಿಸಲು ನನಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಅವರಿಗೆ ಗೂಗಲ್ ಮತ್ತು ಅಮೆಜಾನ್‌ನಿಂದ ಕೂಡ ಕೆಲಸ ಆಫರ್‌ಗಳನ್ನು ಗಳಿಸಿದ್ದರು. ಆದರೆ ಫೇಸ್‌ಬುಕ್ ಹೆಚ್ಚಿನ ವೇತನದ ಪ್ಯಾಕೇಜ್ ನೀಡಿದ್ದರಿಂದ ಫೇಸ್‌ಬುಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.
ಬಿಸಾಖ್ ಅವರು ಬಿರ್ಭೂಮ್ (Birbhum)ಜಿಲ್ಲೆಯ ರಾಮ್‌ಪುರಹತ್ (Rampurhat) ಗ್ರಾಮದವರಾಗಿದ್ದು, ಸಾಧಾರಣ ಹಿನ್ನೆಲೆಯಿಂದ ಬಂದವರು ಮತ್ತು ಅವರ ತಾಯಿ ಶಿಬಾನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಬಿಸಾಖ್ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾರೆ ಎಂದು ಬಿಸಾಖ್ ತಾಯಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಆತ ಉನ್ನತ ಸ್ಥಾನಕ್ಕೆ ಏರುವುದನ್ನು ನೋಡಲು ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಆತ ತಮ್ಮ ಅಧ್ಯಯನದ ಬಗ್ಗೆ ಯಾವಾಗಲೂ ಗಂಭೀರವಾಗಿರುತ್ತಿದ್ದ. ಹೈಯರ್ ಸೆಕೆಂಡರಿ ಪರೀಕ್ಷೆಗಳು ಮತ್ತು ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ನಂತರ ಅವನು ಜಾದವ್‌ಪುರ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಎಂದು ಬಿಸಾಖ್ ತಾಯಿ ಶಿಬಾನಿ (Shibani) ಹೇಳಿದರು.
ಕೋವಿಡ್ ಸಾಂಕ್ರಾಮಿಕ ರೋಗದ ನಂತರ ವಿದ್ಯಾರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯ ಅಂತಾರಾಷ್ಟ್ರೀಯ ಕೊಡುಗೆಗಳನ್ನು ಪಡೆದಿರುವುದು ಇದೇ ಮೊದಲು ಎಂದು ಜೆಯುನಲ್ಲಿ ಪ್ಲೇಸ್‌ಮೆಂಟ್ ಅಧಿಕಾರಿಯಾಗಿರುವ ಸಮಿತಾ ಭಟ್ಟಾಚಾರ್ಯ (Samita Bhattacharya)ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.