ಫೇಸ್‌ಬುಕ್‌ನಲ್ಲಿ ವಾರ್ಷಿಕ 6.5 ಕೋಟಿ ವೇತನ ನೀಡುವ ಕೆಲಸ ತೊರೆದಿದ್ದಕ್ಕೆ ಕಾರಣ ತಿಳಿಸಿದ ಭಾರತದ ಟೆಕ್ಕಿ!
ಮೆಟಾ/ಫೇಸ್‌ಬುಕ್‌ನಲ್ಲಿ ಲೀಡ್ ಇಂಜಿನಿಯರ್ ಮತ್ತು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಇಂಜಿನಿಯರ್ ರಾಹುಲ್ ಪಾಂಡೆ ಅವರು ವರ್ಷಕ್ಕೆ 6.5 ಕೋಟಿ ಪ್ಯಾಕೇಜ್ ದೊರೆಯುತ್ತಿತ್ತು. ಆದರೆ, ಇಲ್ಲಿ ಕೆಲಸ ಮಾಡಿದ್ದು ಕೆಲವೇ ವರ್ಷಗಳು ಮಾತ್ರ.
ನವದೆಹಲಿ (ಅ.31): ವಾರ್ಷಿಕ 6.5 ಕೋಟಿ ರೂಪಾಯಿ ಸಂಬಳ. ಅಂದರೆ, ತಿಂಗಳಿಗೆ ಹೆಚ್ಚೂ ಕಡಿಮೆ 54 ಲಕ್ಷದ ಸಂಬಳ ಬರ್ತಾ ಇದ್ರೆ ಯಾರು ತಾನೆ ಕೆಲಸ ಬಿಡುವ ಮನಸ್ಸು ಮಾಡುತ್ತಾರೆ ಹೇಳಿ. ಆದರೆ, ಭಾರತೀಯ ಮೂಲದ ಇಂಜಿನಿಯರ್ ರಾಹುಲ್ ಪಾಂಡೆ 2022ರಲ್ಲಿ ತಮ್ಮ ರಾಜೀನಾಮೆ ನಿರ್ಧಾರದೊಂದಿಗೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಕೆಲವರಿಗೆ ಜೀವಮಾನ ಪೂರ್ತಿ ಕನಸೇ ಅಗಿರುವ ಸ್ಯಾಲರಿಯನ್ನು ಪಡೆಯುತ್ತಿದ್ದ ಫೇಸ್‌ಬುಕ್/ಮೆಟಾ ಕಂಪನಿಯ ಉದ್ಯೋಗಕ್ಕೆ ರಾಹುಲ್ ಪಾಂಡೆ 2022ರಲ್ಲಿ ಗುಡ್‌ಬೈ ಹೇಳಿದ್ದರು. ರಾಜೀನಾಮೆ ನೀಡುವ ಸಮಯದಲ್ಲಿ ರಾಹುಲ್ ಪಾಂಡೆ ಫೇಸ್‌ಬುಕ್‌ನಲ್ಲಿ ಲೀಡ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಯಲ್ಲಿದ್ದರು. ಬಿಸಿನೆಸ್ ಇನ್ಸೈಡರ್ ಜೊತೆ ಈ ಕುರಿತಾಗಿ ಮಾತನಾಡಿರುವ ರಾಹುಲ್ ಪಾಂಡೆ ಹೆಚ್ಚಿನ ಸಂಬಳದ ಕೆಲಸವನ್ನು ತೊರೆಯುವ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು. ಕ್ಯಾಲಿಫೋರ್ನಿಯಾದಲ್ಲಿ ಫೇಸ್‌ಬುಕ್‌ನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ರಾಹುಲ್ ಪಾಂಡೆ, ಕೆಲಸ ಮಾಡುವಾಗ ಪ್ರತಿ ಕ್ಷಣವೂ ನನ್ನಲ್ಲಿ ಆತಂಕವೇ ಕಾಡುತ್ತಿತ್ತು. ಅದರ ವಿರುದ್ಧವೇ ಹೋರಾಟ ನಡೆಸಿದ್ದೆ ಎಂದು ಹೇಳಿದ್ದಾರೆ.
100 ಯುಎಸ್ ಡಾಲರ್ ಬಿಲ್‌ಗಳನ್ನು ಎಣಿಸುವ ನನ್ನ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ವಾಸ್ತವವಾಗಿ, ಫೇಸ್‌ಬುಕ್‌ಗೆ ಸೇರಿದ ಮೊದಲ ಆರು ತಿಂಗಳವರೆಗೆ, ನಾನು ತುಂಬಾ ಚಿಂತಿತನಾಗಿದ್ದೆ. ಹಿರಿಯ ಇಂಜಿನಿಯರ್ ಆಗಿ, ನನಗೆ ಇಂಪೋಸ್ಟರ್ ಸಿಂಡ್ರೋಮ್ ಇದೆ ಎಂದು ನಾನು ಭಾವಿಸಿದೆ, ಕಂಪನಿಯ ಸಂಸ್ಕೃತಿ ಮತ್ತು ಅಲ್ಲಿನ ಟೂಲಿಂಗ್‌ಗೆ ಹೊಂದಿಕೊಳ್ಳಲು ನಾನು ಹೆಣಗಾಡಬೇಕಾಯಿತು ಎಂದು ಹೇಳಿದ್ದಾರೆ.
“ಕೆಲಸದಲ್ಲಿರುವ ವೇಳೆ ಯಾರಿಗಾದರೂ ಸಹಾಯ ಕೇಳಲು ಹಿಂಜರಿಕೆ ಇತ್ತು. ಹಿರಿಯ ಎಂಜಿನಿಯರ್ ಆಗುವ ಸಾಮರ್ಥ್ಯವಿಲ್ಲದ ವ್ಯಕ್ತಿಯನ್ನು ಕಂಪನಿಯು "ಹೊರಹಾಕುತ್ತದೆ" ಎಂದು ಅನಿಸುತ್ತಿತ್ತು. ಕಂಪನಿಗೆ ಸೇರಿದ ನಂತರ, ಫೇಸ್‌ಬುಕ್ ಸಹ ಕುಸಿಯಲು ಪ್ರಾರಂಭಿಸಿತು, ಅದರ ಷೇರುಗಳು ಸಹ ಕುಸಿಯಲು ಪ್ರಾರಂಭಿಸಿದವು ಎಂದು ರಾಹುಲ್ ಪಾಂಡೆ ಹೇಳಿದ್ದಾರೆ. ನಾನು ಕಂಪನಿಯಲ್ಲಿ ಕೇವಲ ಒಂದು ವರ್ಷ ಮಾತ್ರ ಇದ್ದೆ, ಆದ್ದರಿಂದ ಅಂತಹ ದೊಡ್ಡ ಹಡಗಿನಿಂದ (ಫೇಸ್‌ಬುಕ್) ಜಿಗಿಯುವುದು ಕಷ್ಟ ಎಂದು ಭಾವಿಸಿದ ನಾನು ನನ್ನ ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಲು ಪ್ರಾರಂಭ ಮಾಡಿದೆ' ಎಂದು ರಾಹುಲ್ ತಿಳಿಸಿದ್ದಾರೆ.
ಕೇವಲ ಎರಡೇ ವರ್ಷದಲ್ಲಿ ರಾಹುಲ್ ಪಾಂಡೆ ತಮ್ಮ ಪ್ರತಿಭೆಯನ್ನು ಫೇಸ್‌ಬುಕ್‌ನಲ್ಲಿ ತೋರಿಸಲು ಆರಂಭಿಸಿದರು. ಇವರು ಕ್ರಿಯೇಟ್ ಮಾಡಿದ ಟೂಲ್‌ಅನ್ನು ಫೇಸ್‌ಬುಕ್ ಕೂಡ ತನ್ನ ಇಡೀ ಕಚೇರಿಯಲ್ಲಿ ಅಳವಡಿಸಿತ್ತು. ರಾಹುಲ್ ಅಭಿವೃದ್ಧಿಪಡಿಸಿದ ಟೂಲ್ ಇಂಜಿನಿಯರ್‌ಗಳಿಗೆ ಸಾಕಷ್ಟು ಸಮಯವನ್ನು ಉಳಿಸಿತು. ಇದಾದ ನಂತರ ರಾಹುಲ್ ಪಾಂಡೆಗೆ ಬಡ್ತಿ ನೀಡಲಾಯಿತು ಮತ್ತು ಅವರ ಮೂಲ ವೇತನದ ಹೊರತಾಗಿ ಅವರು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನೂ ಪಡೆದುಕೊಂಡರು. ಹಾಗಿದ್ದರೂ, ಕೋವಿಡ್-19 ಕಾರಣದಿಂದಾಗಿ, ಪಾಂಡೆ ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದರು.
ಈ ಐಐಟಿ ಪದವೀಧರನಿಗೆ ದಿನಕ್ಕೆ 15 ಲಕ್ಷಕ್ಕೂ ಹೆಚ್ಚು ಸಂಬಳ: ಬೆಂಗಳೂರಿನ ಪ್ರಮುಖ ಐಟಿ ಕಂಪನಿ ಸಿಇಒ ಇವ್ರೇ!
ನನ್ನ ಕೊನೆಯ ವರ್ಷಗಳಲ್ಲಿ ನಾನು ಮ್ಯಾನೇಜರ್ ಪಾತ್ರಕ್ಕೆ ಪರಿವರ್ತನೆ ಹೊಂದಿದ್ದೆ ಮತ್ತು ಅದೇ ಸಂಸ್ಥೆಯಲ್ಲಿ ಮೂರು ವರ್ಷಗಳ ನಂತರ ತಂಡಗಳನ್ನು ಬದಲಾಯಿಸಿದೆ. 2021 ಮುಗಿದಂತೆ, ನಾನು ಮೆಟಾವನ್ನು ಮೀರಿದ ಜಗತ್ತನ್ನು ಅನ್ವೇಷಿಸಲು ಪ್ರಾರಂಭಿಸಿದೆ. ತಂತ್ರಜ್ಞಾನದಲ್ಲಿ ಸುಮಾರು ಒಂದು ದಶಕದ ನಂತರ, ನಾನು ಸ್ವಲ್ಪ ಮಟ್ಟಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿದೆ ಮತ್ತು ಎಂಜಿನಿಯರಿಂಗ್‌ನ ಆಚೆಗೆ ನಾನು ಇನ್ನೂ ಎಷ್ಟು ಕಲಿಯಬಹುದು ಎಂದು ಅರಿತುಕೊಂಡೆ, ”ಎಂದು ಅವರು ಹೇಳಿದ್ದಾರೆ.
32 ಲಕ್ಷದ ಜಾಬ್ ಆಫರ್ ತಿರಸ್ಕರಿಸಿದ ಉತ್ತರ ಪ್ರದೇಶ ಯವತಿಗೆ ಸಿಕ್ತು ಗೂಗಲ್‌ನಿಂದ ಬಂಪರ್ ಆಫರ್!