ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಲ್ಲಿ ತಾಂಡವ್… ಭಾಗ್ಯಾಗೆ ಕಾಲ್ ಮಾಡ್ತಾನ? ಪೊಲೀಸರ ಅತಿಥಿಯಾಗ್ತಾನ? ನೀವೇ ಹೇಳಿ
ದಂಪತಿಗಳೆಂದು ಸುಳ್ಳು ಹೇಳಿ, ಆತಿಥ್ಯ ಸ್ವೀಕರಿಸಿದ ತಾಂಡವ್ ಮತ್ತು ಶ್ರೇಷ್ಠಾ ಪೊಲೀಸರ ಅತಿಥಿಯಾಗ್ತಾರ? ಅಥವಾ ತಾಂಡವ್ ಭಾಗ್ಯಗೆ ಫೋನ್ ಮಾಡ್ತಾನ?
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ (Bhagyalakshmi Serial) ಒಂದು ಕಡೆ ಭಾಗ್ಯ ಗಂಡ ಮಾಡಿದ ಮೋಸವನ್ನು ನೆನೆದು ಕಣ್ಣೀರಿಡುತ್ತಿದ್ದರೆ, ಇನ್ನೊಂದೆಡೆ ಮೋಸದಿಂದ ತಾವು ಗಂಡ ಹೆಂಡತಿ ಎಂದು ಹೇಳಿಕೊಂಡು ಹೋಟೆಲ್ ಗೆ ಬಂದು ಅಲ್ಲಿ ಕಪಲ್ ಗಾಗಿ ಏರ್ಪಡಿಸಿದ್ದ ಎಲ್ಲಾ ವ್ಯವಸ್ಥೆಯನ್ನು ಅನುಭವಿಸಿದ ಶ್ರೇಷ್ಠಾ ಮತ್ತು ತಾಂಡವ್ ಗೆ ಹೋಟೆಲ್ ಮ್ಯಾನೇಜರ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ವಿಷಯ ಆಗಿದ್ದಿಷ್ಟು ಭಾಗ್ಯಾಗೆ ರೆಫ್ರಿಜರೇಟರ್ ಜೊತೆ ಸಿಕ್ಕಿದ ಕಪಲ್ ಟಿಕೆಟ್ ಅನ್ನು, ಆಕೆಯ ಕೈಯಿಂದ ಕಿತ್ತುಕೊಂಡಿದ್ದ ತಾಂಡವ್ ಅದನ್ನ ಬೇರೆ ಜೋಡಿಗಳಿಗೆ ಕೊಡೋದಾಗಿ ಹೇಳಿ ಕೊನೆಗೆ ಅದನ್ನು ತಾನೇ ಇಟ್ಟುಕೊಂಡು, ತನ್ನ ಗರ್ಲ್ ಫ್ರೆಂಡ್ ಶ್ರೇಷ್ಠಾ ಜೊತೆ ರೆಸಾರ್ಟ್ ಗೆ ತೆರಳಿದ್ದಾನೆ. ಆದರೆ ಅಲ್ಲಿ ಪೂರ್ತಿಯಾಗಿ ಅರೇಂಜ್ ಮಾಡಿರೋದು, ಭಾಗ್ಯ ಅನ್ನೋದು ಆತನಿಗೆ ಗೊತ್ತೇ ಇರೋದಿಲ್ಲ. ಕುಡಿದ ಮತ್ತಿನಲ್ಲಿ ಶ್ರೇಷ್ಠ ಮತ್ತು ತಾಂಡವ್ ಮದುವೆ ಬಗ್ಗೆ ಮಾತನಾಡುತ್ತಾ, ಶ್ರೇಷ್ಠ ತನಗೆ ತಾಳಿ ಕಟ್ಟುವಂತೆ ತಾಂಡವ್ ಗೆ ಹೇಳುತ್ತಾಳೆ. ತಾಂಡವ್ ಅಲ್ಲಿ ಬಂದ ವೈಟರ್ ಬಳಿ ತನಗೆ ಈಗಲೇ ತಾಳಿ ತೆಗೆದುಕೊಂಡು ಬರಬೇಕೆಂದು ಕೇಳಿಕೊಳ್ಳುತ್ತಾನೆ.
ಬಂದ ಜೋಡಿಗಳನ್ನು ಖುಷಿಪಡಿಸುವುದಕ್ಕಾಗಿ ಅವರು ಕೇಳಿದ ತಾಳಿಯನ್ನು ಅರಿಶಿನ ಕೊಂಬಿನಿಂದ ತಾನೆ ತಯಾರಿಸಿ, ಅದನ್ನ ದೇವರ ಮುಂದಿಟ್ಟ ಭಾಗ್ಯ, ಅದನ್ನ ತಾನೇ ಖುದ್ದಾಗಿ ಅವರಿಗೆ ಕೊಡುವುದಾಗಿ ತೆಗೆದುಕೊಂಡು ಹೋಗುವಾಗ, ಆಕೆಯ ಮುಂದೆ ತನ್ನ ಗಂಡನ ನಿಜಬಣ್ಣ ಬಯಲಾಗಿ ಹೋಗುತ್ತದೆ. ಇದನ್ನ ಆರಗಿಸಿಕೊಳ್ಳಲಾಗದೆ ಭಾಗ್ಯ ದೇವರಿಗೆ ಶಪಿಸುತ್ತಾ ತಾನು ಪಾಪಿ ಎನ್ನುವಂತೆ ತನ್ನನ್ನೇ ತಾನು ದೂಷಿಸಿಕೊಳ್ಳುತ್ತಿದ್ದಾಳೆ.
ಇನ್ನೊಂದೆಡೆ ಕಪಲ್ ಟಿಕೆಟ್ ನಲ್ಲಿ (couple ticket) ಬಂದ ಜೋಡಿಗಳು ಮದುವೆ ಆಗಿಲ್ಲ ಅನ್ನೋದು ಗೊತ್ತಾಗಿ ರೆಸಾರ್ಟ್ ನ ಮ್ಯಾನೇಜರ್ ತಾಂಡವ್ ಮತ್ತು ಶ್ರೇಷ್ಠಾಗಿ ಬುದ್ಧಿ ಹೇಳುತ್ತಾರೆ. ಇದಕ್ಕೆ ಬಗ್ಗದ ತಾಂಡವ್ ಮತ್ತು ಶ್ರೇಷ್ಠಾ ಮ್ಯಾನೇಜರ್ ಗೆ ಬಾಯಿಗೆ ಬಂದಂತೆ ಬೈಯುತ್ತಾ ತಮ್ಮ ದರ್ಪವನ್ನು ತೋರಿಸುತ್ತಾರೆ. ಕೊನೆಗೆ ಮ್ಯಾನೇಜರ್ ಪೊಲೀಸರಿಗೆ ಫೋನ್ ಮಾಡಿ ಜೈಲಿಗೆ ಹಾಕಿಸೋದಾಗಿ ಹೆದರಿಸಿ, ನೇರವಾಗಿ ಪೊಲೀಸರಿಗೆ ಫೋನ್ ಮಾಡುತ್ತಾರೆ. ಈಗ ತಾಂಡವ್ ಗೆ ಭಯ ಶುರುವಾಗುತ್ತೆ.
ಈ ಸಂದರ್ಭದಲ್ಲಿ ಮ್ಯಾನೇಜರ್ ಬಳಿ ಕ್ಷಮೆ ಕೇಳು,ವ ತಾಂಡವ್ ನಮ್ಮಿಂದ ತಪ್ಪಾಗಿದೆ . ಶ್ರೇಷ್ಠ ದುಡುಕು ಬುದ್ಧಿಯಿಂದ ಏನೋ ಹೇಳಿದ್ದಾಳೆ, ಕ್ಷಮಿಸಿ. ನಮ್ಮಿಂದಾಗಿ ಎಷ್ಟೆಲ್ಲಾ ಖರ್ಚಾಗಿದೆಯೋ ಅದನ್ನೆಲ್ಲ ನಾನು ವಾಪಸ್ ಕೊಡುತ್ತೇನೆ. ಆದರೆ ಪೊಲೀಸರಿಗೆ ಮಾತ್ರ ಫೋನ್ ಮಾಡಬೇಡಿ ಎಂದು ಬೇಡಿಕೊಳ್ಳುತ್ತಾನೆ . ಅದಕ್ಕೆ ಮ್ಯಾನೇಜರ್ ನಾನು ದುಡ್ಡಿಗಾಗಿ ಇದೆಲ್ಲ ಮಾಡ್ತಾ ಇಲ್ಲ. ನಮ್ಮ ರೆಸಾರ್ಟ್ ಎಷ್ಟು ವರ್ಷದಿಂದ ಗೌರವಯುತವಾಗಿ ನಡೆದುಕೊಂಡು ಬರುತ್ತಿದೆ. ಆದರೆ ನಿಮ್ಮಿಂದಾಗಿ ಅದು ಹಾಳಾಗ್ತಾ ಇದೆ. ಹಾಗಾಗಿ ತಾನು ಕಂಪ್ಲೇಟ್ ಮಾಡುದಾಗಿ ತಿಳಿಸುತ್ತಾರೆ. ಜೊತೆಗೆ ನಿಮ್ಮನ್ನ ಸುಮ್ನೆ ಬಿಟ್ರೆ ನಮ್ಮ ರೆಸಾರ್ಟ್ ನ ಮರ್ಯಾದೆ ಹೋದಂತೆ ಎಂದು ಹೇಳುತ್ತಾರೆ.
ಕೊನೆಗೆ ತಾಂಡವ್ ಮಾತಿಗೆ ಮಣಿದ ಮ್ಯಾನೇಜರ್ ಸರಿ ಪೊಲೀಸರಿಗೆ ಫೋನ್ ಮಾಡೋದಿಲ್ಲ. ಆದರೆ ಇನ್ನೊಂದು ಆಫರ್ ಕೊಡ್ತೀನಿ ಅದನ್ನು ಮಾಡಬೇಕು ಅಂತಾರೆ. ಅದಕ್ಕೆ ತಾಂಡವ್ ಸರಿ ಸರಿ ನೀವು ಏನ್ ಹೇಳಿದ್ರು ಮಾಡ್ತೀನಿ ಎನ್ನುತ್ತಾನೆ. ಆವಾಗ ಮ್ಯಾನೇಜರ್ ಈಗ ನಿಮ್ಮ ಫೋನ್ ತೆಗೆದು ನಿಮ್ಮ ಹೆಂಡ್ತಿಗೆ ಫೋನ್ ಮಾಡಿ. ಅವರು ನಿಮ್ಮನ್ನು ಬಿಡಬಹುದು ಅಂತ ಹೇಳಿದ್ರೆ ಪೊಲೀಸರಿಗೆ ಫೋನ್ ಮಾಡೋದಿಲ್ಲ ಎಂದು ಹೇಳುತ್ತಾರೆ. ಇದನ್ನ ಕೇಳಿ ತಾಂಡವ್ ಗೆ ಶಾಕ್ ಆಗುತ್ತೆ.
ತಾಂಡವ್ ನ ಸದ್ಯದ ಸ್ಥಿತಿ ಹೇಗಾಗಿದೆ ಅಂದ್ರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಒಂದ ಜೈಲು ಸೇರಬೇಕು, ಇಲ್ಲಾಂದ್ರೆ ಭಾಗ್ಯ ಕೈಯಿಂದ ಫೋನ್ ಮಾಡಿಸಬೇಕು. ಎರಡು ಆಗದಿರುವಂತಹ ಮಾತು. ಹಾಗಾಗಿ ಮುಂದೆ ತಾಂಡವ ಏನ್ ಮಾಡ್ತಾನೆ? ತಾಂಡವ್ ಮತ್ತು ಶ್ರೇಷ್ಠಾಗೆ ಜೈಲೇ ಗತಿಯ ಅನ್ನೋದನ್ನ ಕಾದು ನೋಡಬೇಕು.