ಉದ್ಯೋಗ ಆಫರ್ ನೀಡಿದ ಬೆಂಗಳೂರಿನ 23 ವರ್ಷದ ಯೂಟ್ಯೂಬರ್, ಸ್ಯಾಲರಿ ಭರ್ಜರಿ
ಬೆಂಗಳೂರಿನ ಯೂಟ್ಯೂಬರ್ ಹಾಗೂ ಯುವ ಉದ್ಯಮಿ ಇದೀಗ ಹೊಸ ಉದ್ಯೋಗ ಆಫರ್ ನೀಡಿದ್ದಾರೆ. ಈ ಯೂಟ್ಯೂಬರ್ ತಂಡದಲ್ಲಿ ಚೀಫ್ ಆಫ್ ಸ್ಟಾಫ್ ಹುದ್ದೆಗೆ ನೇಮಕಾತಿ ಮಾಡುವುದಾಗಿ ಈತ ಹೇಳಿದ್ದಾನೆ. ಭರ್ಜರಿ ವೇತನ ನೀಡುವುದಾಗಿ ಘೋಷಿಸಿದ್ದಾರೆ. ಉದ್ಯೋಗಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಅನ್ನೋದನ್ನು ಈತ ಹೇಳಿದ್ದಾನೆ.
ಬೆಂಗಳೂರು(ಜ.07) ಮಲ್ಲಿ ನ್ಯಾಷನಲ್ ಕಂಪನಿ, ದೊಡ್ಡ ದೊಡ್ಡ ಟೆಕ್ ಕಂಪನಿಗಳು ನೇಮಕಾತಿ ವೇಳೆ ಉತ್ತಮ ವೇತನ, ಇತರ ಸೌಲಭ್ಯಗಳನ್ನು ನೀಡುತ್ತದೆ. ಹೀಗಾಗಿ ಎಲ್ಲರೂ ಒಳ್ಳೆ ಕಂಪನಿಯಲ್ಲಿ ಕೆಲಸ ಸಿಗಲಿ ಎಂದು ಆಶಿಸುತ್ತಾರೆ. ಇದೀಗ ಬೆಂಗಳೂರಿನ 23 ವರ್ಷದ ಯೂಟ್ಯೂಬರ್ ಹಾಗೂ ಉದ್ಯಮಿ ಭರ್ಜರಿ ಆಫರ್ ಕೊಟ್ಟಿದ್ದಾರೆ. ಈತನ ಯೂಟ್ಯೂಬ್ ತಂಡದಲ್ಲಿ ಉದ್ಯೋಗ ಅವಕಾಶವಿದೆ. ಹುದ್ದೆ ಚೀಫ್ ಆಫ್ ಸ್ಟಾಫ್. ಇನ್ನು ಸ್ಯಾಲರಿ ದೊಡ್ಡ ಟೆಕ್ ಕಂಪನಿಗಳ ರೀತಿಯಲ್ಲೇ ಭರ್ಜರಿ. ಮಾರುಕಟ್ಟೆಯಲ್ಲಿರುವ ವೇತನಕ್ಕಿಂತ ಹೆಚ್ಚು ನೀಡುವುದಾಗಿ ಈತ ಹೇಳಿದ್ದಾನೆ. ಆಸಕ್ತರು ಹೇಗೆ ಅರ್ಜಿ ಸಲ್ಲಿಸಬೇಕು, ಯಾವೆಲ್ಲಾ ಅರ್ಹತೆ ಇರಬೇಕು ಅನ್ನೋದನ್ನು ಈ ಯುವ ಉದ್ಯಮಿ ಹೇಳಿದ್ದಾನೆ.
ಯೂಟ್ಯೂಬರ್ ಹಾಗೂ ಯುವ ಉದ್ಯಮಿ ಇಶಾನ್ ಶರ್ಮಾ ವಯಸ್ಸು ಕೇವಲ 23. ಆದರೆ ಆದಾಯ, ಹೆಸರು ಹಾಗೂ ಉದ್ಯಮದಲ್ಲಿ ದಿಗ್ಗಜರ ಸಾಲಿನಲ್ಲೇ ಗುರುತಿಸಿಕೊಂಡಿದ್ದಾರೆ. ಈ ಕುರಿತು ಮಹತ್ವದ ಸಂದೇಶ ನೀಡಿರುವ ಇಶಾನ್ ಶರ್ಮಾ, ನಾನು ಬೆಂಗಳೂರಿನ ಕಚೇರಿಯಲ್ಲಿರುವ ಚೀಫ್ ಆಫ್ ಸ್ಟಾಪ್ ಹುದ್ದೆಗೆ ನೇಮಕಾತಿ ಮಾಡುತ್ತಿದ್ದೇನೆ. ನನ್ನ ತಂಡದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಎಕ್ಸ್ ಮೂಲಕ ಹೇಳಿಕೊಂಡಿದ್ದಾನೆ.
ಯೂಟ್ಯೂಬರ್ 40 ಗಂಟೆ ಡಿಜಿಟಲ್ ಅರೆಸ್ಟ್, ನಾಳೆ ನೀವಾಗಬಹುದು ಎಚ್ಚರ!
ನನ್ನ ತಂಡದಲ್ಲಿರುವ ಪ್ರಮುಖ ಹುದ್ದೆ ಇದಾಗಿದೆ. ಕೆಂಟೆಂಟ್ ಮಾರ್ಕೆಟಿಂಗ್‌ನಲ್ಲಿ ಪರಿಣಿತಿ ಇರುವವರು, ಆಸಕ್ತಿ ಇರುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಯೂಟ್ಯೂಬ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಕಂಟಂಟ್ ಮಾಡಲು, ವಿಷಯವನ್ನು ಆಯ್ಕೆ ಮಾಡಲು, ಬರೆಯಲು ಗೊತ್ತಿರಬೇಕು, ಎಡಿಟಿಂಗ್, ಡಿಸೈನ್ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಂತಿರಬೇಕು. ಪ್ರಮುಖವಾಗಿ ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾಗ್ರಾಂ, ಲಿಂಕ್ಡ್ಇನ್ ಪ್ಲಾಟ್‌ಫಾರ್ಮ್‌ಗೆ ಕಂಟೆಂಟ್ ಸೂಕ್ತವಾಗಿರಬೇಕು. ಯೂಟ್ಯೂಬ್ ಸ್ಟುಡಿಯೋ ಗೊತ್ತಿರಬೇಕು, ವಿಡಿಯೋ ಡೇಟಾ, ಟ್ರೆಡಿಂಗ್ ಸೇರಿದಂತೆ ಕೆಲ ಬೇಸಿಕ್ ವಿಚಾರಗಳು ಗೊತ್ತಿರಬೇಕು. ಆಯ್ಕೆ ಮಾಡುವ ಕೆಂಟೆಂಟ್‌ಗೆ ಉತ್ತಮ ಸ್ಪಂದನೆ ಸಿಗಬೇಕು ಎಂದು ಅರ್ಹತೆಗಳ ಕುರಿತು ಇಶಾನ್ ಶರ್ಮಾ ಹೇಳಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವ ಆಸಕ್ತರು, ನಿಮ್ಮ ಕುರಿತು ವಿಡಿಯೋ ಒಂದು ಮಾಡಿ ಕಳುಹಿಸಬೇಕು. ನೀವು ಯಾಕೆ ಹಾಗೂ ಹೇಗೆ ಈ ಹುದ್ದೆಗೆ ಸೂಕ್ತ ಅನ್ನೋದು ವಿಡಿಯೋ ಮೂಲಕ ಹೇಳಬೇಕು. ಇದರ ಜೊತೆಗೆ ನೀವು ಕೆಂಟೆಂಟ್ ಮಾರ್ಕೆಟಿಂಗ್ ಕುರಿತು ಈಗಾಗಲೇ ಕೆಲಸ ಮಾಡಿದ ಅನುಭವಗಳಿದ್ದರೆ ಪಿಡಿಎಫ್ ಫೈಲ್‌ನಲ್ಲಿ ಉಲ್ಲೇಖಿಸಿ ಕಳುಹಿಸಬೇಕು ಎಂದಿದ್ದಾರೆ.
ವೇತನ ಕುರಿತು ಇಶಾನ್ ಶರ್ಮಾ ಉಲ್ಲೇಖಿಸಿದ್ದಾರೆ. ಟಾಪ್ ಮಾರುಕಟ್ಟೆಯಲ್ಲಿ ಸಿಗುವ ವೇತನಕ್ಕಿಂತ ಪ್ಲಸ್ ನೀಡುತ್ತೇನೆ. ಉತ್ತಮ ವೇತನ ಇದಾಗಲಿದೆ ಎಂದು ಇಶಾನ್ ಶರ್ಮಾ ಹೇಳಿದ್ದಾರೆ. ಆದರೆ ಎಷ್ಟು ವೇತನ ಅನ್ನೋದು ಬಹಿರಂಗಪಡಿಸಿಲ್ಲ. ನೀವು ಅಥವಾ ಯಾರಾದರೂ ನಿಮ್ಮ ಗೆಳೆಯರು ಈ ಹುದ್ದೆಗೆ ಸೂಕ್ತವಾಗಿದ್ದರೆ ಅವರಿಗೂ ತಿಳಿಸಿ ಎಂದು ಇಶಾನ್ ಶರ್ಮಾ ಹೇಳಿದ್ದಾರೆ.
ಇಶಾನ್ ಶರ್ಮಾ ವಯಸ್ಸು 23, ಗೋವಾದಲ್ಲಿ BITS ವ್ಯಾಸಾಂಗವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದ ಇಶಾನ್, ಫುಲ್ ಟೈಮ್ ಕಂಟೆಟ್ ಕ್ರಿಯೇಶನ್‌ಗೆ ಇಳಿದಿದ್ದಾರೆ. ಯೂಟ್ಯೂಬ್‌ನಲ್ಲಿ ಬರೋಬ್ಬರಿ 1.63 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ 919K ಫಾಲೋವರ್ಸ್ ಹೊಂದಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲಿ ಕ್ರಶ್ ಇಟ್ ಆನ್ ಲಿಂಕ್ಡ್‌ಇನ್ ಪುಸ್ತಕ ಪ್ರಕಟಸಿದ ಸಾಧನೆ ಮಾಡಿದ್ದಾರೆ. ಕಾಲೇಜು ಸೇರಿಂತೆ ಹಲವು ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ
ಅಪ್ಪ ಸತ್ತೋದ, ಚಿಕ್ಕಪ್ಪ ನನ್ನ ಮಾರಿದ... ವೇ* ಮನೆಯಲ್ಲಿ ಯೂಟ್ಯೂಬರ್: ವಿಡಿಯೋಗೆ ಶ್ಲಾಘನೆಗಳ ಮಹಾಪೂರ