ಯೂಟ್ಯೂಬರ್ 40 ಗಂಟೆ ಡಿಜಿಟಲ್ ಅರೆಸ್ಟ್, ನಾಳೆ ನೀವಾಗಬಹುದು ಎಚ್ಚರ!
ಖ್ಯಾತ ಯೂಟ್ಯೂಬರ್‌ನ್ನು ಬರೋಬ್ಬರಿ 40 ಗಂಟೆ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಖಾತೆಯಲ್ಲಿದ್ದ ಹಣ ಹೋಯ್ತು, ಮಾನಸಿಕವಾಗಿ ಕುಗ್ಗಿ ಹೋದ, ಅತ್ತು ಕರೆದರೂ, ಬಿಟ್ಟುಬಿಡುವಂತೆ ಭಿಕ್ಷೆ ಬೇಡಿದರೂ ಕರಗಲಿಲ್ಲ ವಂಚಕರ ಮನಸ್ಸು.ಇದರ ನಡುವಿನಿಂದ ಪಾರಾಗಿದ್ದು ಹೇಗೆ?
ನವದೆಹಲಿ(ಜ.01) ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಂಕುಶ್ ಬಹುಗುಣ ಬರೋಬ್ಬರಿ 40 ಗಂಟೆ ಡಿಜಿಜಲ್ ಅರೆಸ್ಟ್‌ನಲ್ಲಿ ಸಿಲುಕಿ ಒದ್ದಾಡಿದ್ದಾರೆ. ಸೈಬರ್ ವಂಚಕರ ಜಾಲದಲ್ಲಿ ಅರಿಯದೆ ಬಿದ್ದು ಅಂಕುಶ್ ಹೊರಬರಲು ಸಾಧ್ಯವಾಗದೇ, ತನ್ನಲ್ಲಿದ್ದ ಎಲ್ಲಾ ಹಣವನ್ನೂ ಕಳೆದುಕೊಂಡಿದ್ದಾನೆ. ಇಷ್ಟೇ ಅಲ್ಲ ಅತ್ತೂ ಕರೆದರೂ ಸೈಬರ್ ವಂಚಕರು ಅಂಕುಶ್ ಬಹುಗುಣರನ್ನು ಬಿಡುವ ಪ್ರಶ್ನಯೇ ಇರಲಿಲ್ಲ. ಆದರೆ ಅಂಕುಶ್‌ನಲ್ಲಿನ ಬದಲಾವಣೆ ಗಮನಿಸಿದ ಗೆಳೆಯರು, ನೆರವಿಗೆ ಧಾವಿಸಿದ್ದಾರೆ. ಇದರ ಪರಿಣಾಮ ಅತೀ ದೊಡ್ಡ ಸೈಬರ್ ವಂಚನೆಯಿಂದ ಅಂಕುಶ್ ಪಾರಾಗಿದ್ದಾರೆ.
ಡಿಜಿಟಲ್ ಅರೆಸ್ಟ್ ಬಗ್ಗೆ ನೀವು ಕೇಳಿರುತ್ತೀರಿ. ಇತ್ತೀಚೆಗೆ ಫೋನ್ ಕರೆ ಮಾಡುವಾಗ ಎಚ್ಚರಿಕೆ ಸಂದೇಶವೊಂದು ಪ್ರತಿ ಕರೆಯಲ್ಲಿ ಕೇಳಿಸುತ್ತದೆ. ಇಷ್ಟಾದರೂ ಜನರು ಮೋಸು ಹೋಗುತ್ತಿದ್ದಾರೆ. ಅರಿವು, ಜಾಗೃತಿ ಮೂಡಿಸಿದರೂ ಹೊಸ ಹೊಸ ವಿಧಾನದಲ್ಲಿ ಜನರು ಮೋಸ ಹೋಗುತ್ತಿದ್ದಾರೆ. ಈ ಸಾಲಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿರುವ ಅಂಕುಶ್ ಬಹುಗಣ ಸೇರಿಕೊಂಡಿದ್ದಾರೆ.
ಗೊತ್ತಿಲ್ಲದೆ ಸೈಬರ್ ಪೊಲೀಸ್‌ಗೆ ಕರೆ ಮಾಡಿದ ನಕಲಿ ಪೊಲೀಸ್, ವಂಚಿಸಲು ಹೋದವ ಏನಾದ?
ಅಂಕುಶ್ ಟ್ರಾಪ್ ಆಗಿದ್ದು ಹೇಗೆ?
ಅಂಕುಶ್ ಫೋನ್‌ಗೆ ಅಂತಾರಾಷ್ಟ್ರೀಯ ನಂಬರ್ ರೀತಿಯ ಸಂಖ್ಯೆಯಿಂದ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿದ ಬೆನ್ನಲ್ಲೇ ನೀವು ಕಳುಹಿಸಿದ ಪಾರ್ಸೆಲ್ ಡೆಲಿವರಿ ಮಾಡಲಾಗಿದೆ ಎಂದು ಉತ್ತರ ಬಂದಿದೆ. ಪಾರ್ಸೆಲ್ ಮಾಹಿತಿಗಾಗಿ ನಂಬರ್ ಪ್ರೆಸ್ ಮಾಡಲು ಸೂಚಿಸಲಾಗಿದೆ. ಯಾವ ಪಾರ್ಸೆಲ್ ಅನ್ನೋ ಕುತೂಹಲಕ್ಕೆ ಅಂಕುಶ್ ಶೂನ್ಯ ಪ್ರೆಸ್ ಮಾಡಿದ್ದಾರೆ. ಈ ವೇಳೆ ಕಸ್ಟಮರ್ ಸ್ಟಾಪ್ ಮಾತನಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಚೀನಾಗೆ ಪಾರ್ಸೆಲ್ ಕಳುಹಿಸಲಾಗಿದೆ. ಈ ಪಾರ್ಸೆಲ್‌ನಲ್ಲಿ ಡ್ರಗ್ಸ್ ಸೇರಿದಂತೆ ಹಲವು ಮಾದಕ ವಸ್ತುಗಳಿತ್ತು. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ಈ ಪಾರ್ಸೆಲ್ ಹಿಡಿದಿದ್ದಾರೆ. ಈಗಾಗಲೆ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಆತಂಕದಿಂದಲೇ ಉತ್ತರಿಸಿದ ಅಂಕುಶ್ ಟ್ರಾಪ್‌ಗೆ ಬಿದ್ದಾಗಿತ್ತು. ನೀವು ಪೊಲೀಸರ್ ಜೊತೆ ಮಾತನಾಡಿ ಎಂದು ಉತ್ತರಿಸಿದ್ದಾರೆ. ಬಳಿಕ ಈ ಸಿಬ್ಬಂದಿ ಪೊಲೀಸ್ ಕನೆಕ್ಟ್ ಮಾಡಿದ್ದಾರೆ. ನಕಲಿ ಪೊಲೀಸ್ ಪ್ರತ್ಯಕ್ಷವಾಗಿದ್ದಾನೆ. ಅಲ್ಲಿಂದ ಅಂಕುಶ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಮನಿ ಲಾಂಡರಿಂಗ್, ರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಹೀಗೆ ಒಂದಲ್ಲಾ ಎರಡಲ್ಲ ಸಾಲು ಸಾಲು ಆರೋಪಗಳು, ಇದಕ್ಕೆ ಸಾಕ್ಷಿ ಇದೆ ಎಂದು ಇನ್ನಿಲ್ಲದ ಕಿರುಕುಳ ನೀಡಿದ್ದಾರೆ.
ಈ ವಿಚಾರ ಯಾರೊಂದಿಗೆ ಹಂಚಿಕೊಳ್ಳುವಂತಿಲ್ಲ, ಮನೆಯಿಂದ ಹೋಗದಂತೆ ಮಾಡಿದ್ದಾರೆ. ಯಾರ ಫೋನ್ ರಿಸೀವ್ ಮಾಡುವಂತಿಲ್ಲ, ಮೆಸೆಜ್ ಮಾಡುವಂತಿಲ್ಲ. ನೀನು ನಮ್ಮ ಕಸ್ಟಡಿಯಲ್ಲಿದ್ದಿಯಾ, ಅತ್ತ ಇತ್ತ ಅಲುಗಾಡಿದರೂ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದರಿಂದ ಹೊರಬರಲು ತನ್ನಲ್ಲಿದ್ದ ಹಣವನ್ನು ವಂಚರಿಕೆಗೆ ವರ್ಗಾಯಿಸಲಾಗಿದೆ. ಇದ್ದ ಹಣ ಮುಗಿದ ಬಳಿಕವೂ ಸೈಬರ್ ವಂಚಕರ ಎಚ್ಚರಿಕೆ ಮುಂದುವರಿದಿತ್ತು. ಮೂರು ದಿನಗಳಿಂದ ಅಂಕುಶ್ ಸೋಶಿಯಲ್ ಮೀಡಿಯಾದಿಂದ ನಾಪತ್ತೆಯಾದ ಬೆನ್ನಲ್ಲೇ ಗೆಳೆಯರು ಗಮನಿಸಿದ್ದಾರೆ. ಕರೆ ಮಾಡಿದ್ದಾರೆ, ಮೆಸೇಜ್ ಮಾಡಿದ್ದಾರ. ಆದರೆ ನಾನು ಉತ್ತರ ಕೊಡುವಂತಿರಲಿಲ್ಲ. ಹೀಗಾಗಿ ಗೆಳೆಯರು ಮನೆಗೆ ಬಂದಿದ್ದಾರೆ. ಇದರಿಂದ ಅತೀದೊಡ್ಡ ಸೈಬರ್ ವಂಚನೆಯಿಂದ ಪಾರಾಗಿದ್ದೇನೆ. ಕಟುಂಬಸ್ಥರು, ಸಹೋದರಿ ಸೇರಿದಂತೆ ಎಲ್ಲರ ನೆರವಿನಿಂದ ಈ ವಂಚಕರ ಜಾಲದಿಂದ ಹೊರಬಂದಿದ್ದೇನೆ ಎಂದಿದ್ದಾರೆ.
40 ಗಂಟೆ, ಕಳೆದ ಮೂರು ದಿನಗಳಿಂದ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನಾನು ಈ ಮೋಸದ ಜಾಲದಲ್ಲಿ ಸಿಲುಕ್ಕೇನೆ ಎಂದು ಊಹಿಸಿರಲಿಲ್ಲ ಎಂದು ಅಂಕುಶ್ ಬಹುಗುಣ ಹೇಳಿದ್ದಾರೆ.
ಡಿಜಿಟಲ್ ಅರೆಸ್ಟ್‌ನಿಂದ 3 ತಿಂಗಳಲ್ಲಿ ಭಾರತಕ್ಕೆ 120 ಕೋಟಿ ರೂ ನಷ್ಟ, ಪಾರಾಗಲು 3 ಸೂತ್ರ!