ಅಭಿಮಾನಿಗಳ ಜತೆ ಕುಣಿದು ಕುಪ್ಪಳಿಸಿದ ವೈಎಸ್‌ವಿ ದತ್ತ: ಡಾ.ರಾಜ್‌ ಹಾಡಿಗೆ ನೃತ್ಯ

70ನೇ ವಸಂತಕ್ಕೆ ಕಾಲಿಟ್ಟಕಡೂರು ಕ್ಷೇತ್ರದ ಮಾಜಿ ಶಾಸಕರು ಮತ್ತು ಗಣಿತದ ಮೇಷ್ಟ್ರು ವೈಎಸ್‌ವಿ ದತ್ತ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

YSV Datta Danced with the Fans at Kadur gvd

ಕಡೂರು (ಜೂ.26): 70ನೇ ವಸಂತಕ್ಕೆ ಕಾಲಿಟ್ಟ ಕಡೂರು ಕ್ಷೇತ್ರದ ಮಾಜಿ ಶಾಸಕರು ಮತ್ತು ಗಣಿತದ ಮೇಷ್ಟ್ರು ವೈಎಸ್‌ವಿ ದತ್ತ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ದತ್ತರವರ ಕುಣಿತದ ವಿಡಿಯೋ ಎಲ್ಲಡೆ ವೈರಲ್‌ ಆಗಿದ್ದು, ಕಡೂರು ಕ್ಷೇತ್ರದ ಯಗಟಿ, ಪಾತೇನಹಳ್ಳಿ ಮತ್ತು ಚೌಡ್ಲಾಪುರ ಗ್ರಾಮಗಳಲ್ಲಿ ಅವರ ಅಭಿಮಾನಿಗಳೊಂದಿಗೆ ದತ್ತ ಅವರು ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಸ್ವ ಗ್ರಾಮ ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸಿ ಶುಭ ಕೋರಿದ್ದಲ್ಲದೆ, ಕೇಕ್‌ ಕತ್ತರಿಸಿದ ದತ್ತ ಅವರನ್ನು ಆಲಂಗಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಇದಲ್ಲದೆ ಪಾತೇನಹಳ್ಳಿಯಲ್ಲಿನ ಯುವಕರು ಮತ್ತು ಗ್ರಾಮಸ್ಥರು ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಗ್ರಾಮದವರಿಗೆಲ್ಲಾ ಊರೂಟವನ್ನು ಏರ್ಪಡಿಸಿ ಊರಿಗೆಲ್ಲಾ ಸಿಹಿ ಊಟ ಉಣ ಬಡಿಸಿದ ನಂತರ ಗ್ರಾಮದಲ್ಲಿ ದತ್ತ ಅವರ ಮೆರವಣಿಗೆ ನಡೆಸಿದರು. 

ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಮಾಜಿ ಸಚಿವ ವಿ.ಸೋಮಣ್ಣ

ಮೆರವಣಿಗೆ ಸಾಗುತ್ತಿದ್ದಂತೆ ಡಿಜೆಯೊಂದಿಗೆ ಡಾ.ರಾಜ್‌ಕುಮಾರ್‌ ಅವರ ಶಬ್ಧವೇದಿ ಚಲನಚಿತ್ರದ ’ಜನರಿಂದ ನಾನು ಮೇಲೆ ಬಂದೇ ಜನರನ್ನೇ ನನ್ನ ದೇವರೆಂದೆ’ ಎಂಬ ಹಾಡಿಗೆ ನೂರಾರು ಯುವಕರೊಂದಿಗೆ ದತ್ತರವರು ನವ ಯುವಕರನ್ನು ನಾಚಿಸುವಂತೆ ಕುಣಿದು ಕುಪ್ಪಳಿಸಿದಾಗ ಗ್ರಾಮಸ್ಥರ ಹರ್ಷೋಧ್ಘಾರದಿಂದ ಮಾಡಿದರು. ಪಾತೇನಹಳ್ಳಿ ಗ್ರಾಮ ಹಬ್ಬದಂತೆ ಕಂಗೊಳಿಸುತ್ತಿತ್ತು. ಎಲ್ಲೆಡೆ ಸಂಭ್ರಮದ ವಾತಾವರಣ ಉಂಟಾಗಿತ್ತು. ಗ್ರಾಮದ ಮಹಿಳೆಯರು ತಮ್ಮ ಊರಿನ ಮಗನಂತೆ ದತ್ತ ಅವರಿಗೆ ಆರತಿ ಮಾಡಿ ಸ್ವಾಗತಿಸುವ ಮೂಲಕ ಶುಭ ಹಾರೈಸಿದರು. ಯುವಕರ ಸಂಭ್ರಮ ಮುಗಿಲು ಮುಟ್ಟಿತ್ತು.

ದಾರಿ ತಪ್ಪಿದ ವೈಎಸ್‌ವಿ ದತ್ತ ರಾಜಕೀಯ ನಡೆ?: ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ತಮ್ಮ ರಾಜಕೀಯ ನಡೆಯಲ್ಲಿ ಎಡವಿದ್ರಾ ? ಈ ರೀತಿಯ ಪ್ರಶ್ನೆಯೊಂದು ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಡೂರು ಕ್ಷೇತ್ರದಲ್ಲಿ ಹುಟ್ಟಿಕೊಂಡಿತ್ತು. ಇದಕ್ಕೆ ಕಾರಣ, ದತ್ತ ಅವರು ಚುನಾವಣೆ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನಗಳು. 2013ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ವಿ ದತ್ತ ಅವರು ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಹಣ ಅಥವಾ ಜಾತಿ ಬಲ ಇಲ್ಲದೆ ಜಯಗಳಿಸಿದ್ದರು. ಅವರ ಸರಳ ವ್ಯಕ್ತಿತ್ವ ಸಾಕಷ್ಟುಅಭಿಮಾನಿಗಳನ್ನು ಹುಟ್ಟು ಹಾಕಿತ್ತು. 

ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಅವರು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಆಗ ಅವರು ಹೇಳಿದ್ದು ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಬಂದಿದ್ದೇನೆ ಎಂದು. ತದ ನಂತರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯ ಸಂದರ್ಭದಲ್ಲಿ ಕಡೂರು ಕ್ಷೇತ್ರದ ಟಿಕೆಟ್‌ನ್ನು ಆನಂದ್‌ ಅವರಿಗೆ ನೀಡುತ್ತಿದ್ದಂತೆ ವೈಎಸ್‌ವಿ ದತ್ತ ಅವರು ಬೇಸರ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ತರಾತುರಿಯಲ್ಲಿ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಭೆಯನ್ನು ನಡೆಸಿದರು. ನಂತರದಲ್ಲಿ ಕಡೂರಿನಲ್ಲಿ ಅಭಿಮಾನಿಗಳ ಸಮಾವೇಶವನ್ನು ನಡೆಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಮರಾಠಿ ನೆಲದಲ್ಲಿ ಕನ್ನಡದಲ್ಲೇ ಸಿಎಂ ಸಿದ್ದರಾಮಯ್ಯ ಭಾಷಣ: ಸ್ತ್ರೀ ಶಿಕ್ಷಣವೇ ಅಹಿಲ್ಯಾದೇವಿಗೆ ನೀಡುವ ಗೌರವ

ಅದಕ್ಕೆ ಸಾಕಷ್ಟುಬೆಂಬಲವೂ ಕಂಡು ಬಂದಿತ್ತು. ಆ ರೀತಿ ಪ್ರಕಟಿಸಿದ ಕೆಲವೇ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬ ಕಾರಣಕ್ಕಾಗಿ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಸಂಪರ್ಕಿಸಿ ಮರಳಿ ಜೆಡಿಎಸ್‌ಗೆ ಬಂದರು. ಅವರಿಗೆ ಪಕ್ಷ ಟಿಕೆಟ್‌ ಕೊಡ ನೀಡಿತು. ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹೆಲಿಕ್ಯಾಪ್ಟರ್‌ನಲ್ಲಿ ಕಡೂರಿಗೆ ಆಗಮಿಸಿ ಅವರಿಗೆ ಸಾಥ್‌ ನೀಡಿದ್ದರು.

Latest Videos
Follow Us:
Download App:
  • android
  • ios