ಮಹಿಳಾ ಕಾಂಗ್ರೆಸ್‍ನ ವಿನೂತನ ಕಾರ್ಯ ಮೆಚ್ಚುವಂತಹದು. ಮಹಿಳಾ ಮೀಸಲಾತಿ ಜಾರಿಯಾದರೇ ರಾಜ್ಯದಲ್ಲಿ 75 ಮಹಿಳಾ ಶಾಸಕಿಯರು ಸದನದಲ್ಲಿರುತ್ತಿರಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳ (ಡಿ.21): ಮಹಿಳಾ ಮೀಸಲಾತಿ ಜಾರಿಯಾದರೇ ರಾಜ್ಯದಲ್ಲಿ 75 ಮಹಿಳಾ ಶಾಸಕಿಯರು ಸದನದಲ್ಲಿರುತ್ತಿರಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ವೀಕ್ಷಣೆ ಮಾಡಲು ಆಗಮಿಸಿದಾಗ ವೀಕ್ಷಣೆ ಮಾಡಿದ ಬಳಿಕ ಸಚಿವರು ಮಾತನಾಡಿದರು.
ಅಧಿವೇಶನ ವೀಕ್ಷಣೆಗೆ ಅವಕಾಶ ಮಾಡಿಸಿಕೊಟ್ಟು, ಮುಂದೆ ಮಹಿಳೆಯರಿಗೆ ಇಲ್ಲೇ ಕುಳಿತು ಮಾತನಾಡುವ ಅವಕಾಶ ಸಿಗುತ್ತದೆ. ಶೇ. 33% ಮೀಸಲು ಬಂದರೆ 75 ಮಹಿಳಾ ಶಾಸಕರು ಸದನದಲ್ಲಿ ಇರುತ್ತೀರಿ. ಮಹಿಳಾ ಕಾಂಗ್ರೆಸ್‍ನ ವಿನೂತನ ಕಾರ್ಯ ಮೆಚ್ಚುವಂತಹದು. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಜನರಿಗೆ ಮುಟ್ಟಿಸುವ ಕೆಲಸ ಜೊತೆಗೆ ಸರ್ಕಾರದ ಸಾಧನೆ ವಿವರಿಸುವ ಕೆಲಸ ಮಾಡಿ ಎಂದರು.
ಚುನಾವಣೆಗಳು ನಮ್ಮ ಗುರಿ
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, ನಾವೆಲ್ಲ ಸಂಘಟಿತರಾಗಿ ಮುಂದೆ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಾಸಕರು ಇರಬೇಕು. ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಮ್ಮ ಗುರಿಯಾಗಿದ್ದು, ಹೆಚ್ಚಿನ ಸ್ಥಾನದಲ್ಲಿ ಗೆಲ್ಲುವಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಸಣ್ಣಪುಟ್ಟ ಮನಸ್ಥಾಪಗಳು ಏನೇ ಇದ್ದರೂ ಅದನ್ನು ಬಿಟ್ಟು ಮುಂದೆ ಸಾಗಬೇಕು. ಆಗ ಮಾತ್ರ ರಾಜಕೀಯ ಪಕ್ಷ ಕಟ್ಟಲು ಸಾಧ್ಯವಾಗುತ್ತದೆ. ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಸ್ಥಳೀಯ ನಾಮ ನಿರ್ದೇಶನಗಳಲ್ಲಿ ಅವಕಾಶ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ರಾಜ್ಯಮಟ್ಟದ ಅವಕಾಶಗಳೂ ಸಿಗುತ್ತದೆ ಎಂದರು.
ಈ ವೇಳೆ ವೀಕ್ಷಣೆಗೆ ತೆರಳಲು ಅವಕಾಶ ಮಾಡಿಕೊಟ್ಟ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೇಟಿಯಾಗಿ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ನೀಡಿದರು. ಸದಸ್ಯರಾದ ಸುಮಂಗಲಾ ನಾಯಕ, ದೀಪಾ ರಾಠೋಡ, ಆರೋಗ್ಯ ಇಲಾಖೆ ಡಿಐಎಂಸಿ ಸದಸ್ಯೆ ರೇಷ್ಮಾ ಖಾಜಾವಲಿ, ಕಾರಟಗಿ ಬ್ಲಾಕ್ ಅಧ್ಯಕ್ಷೆ ಸೌಮ್ಯ ಕಂದಗಲ್, ಕುಷ್ಟಗಿ ಬ್ಲಾಕ್ ಅಧ್ಯಕ್ಷೆ ಶಕುಂತಲಾ ಹಿರೇಮಠ, ಗ್ಯಾರಂಟಿ ಯೋಜನೆ ಸದಸ್ಯರಾದ ಪದ್ಮಾ ಬಸ್ತಿ, ರೇಣುಕಮ್ಮ ಕಾರಟಗಿ, ಬೇಬಿ ರೇಖಾ, ಸವಿತಾ ಗೋರಂಟ್ಲಿ, ಕಾವೇರಿ ರ್ಯಾಗಿ, ಶಿಲ್ಪಾ, ಸೌಭಾಗ್ಯ ಗೊರವರ, ರೇಣುಕಾ ಪುರದ, ಯಶೋಧಾ ಮರಡಿ, ಗಂಗಮ್ಮ ನಾಯಕ, ಚನ್ನಮ್ಮ, ಪ್ರಮೀಳಾ, ಅನಿತಾ ಇತರರು ಇದ್ದರು.

