Hijab Row: ಹಿಜಾಬ್‌ ಕಾಂಗ್ರೆಸ್‌ ನಿಲುವುವೇನು?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

*  ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ ಹೇಳಿಕೆಗೆ ಕಿಡಿಕಾರಿದ ಸಚಿವ ಜೋಶಿ
*  ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರವನ್ನೇ ಧರಿಸಬೇಕು
*  ಹಿಜಾಬ್‌ ಗಲಾಟೆ ಆಗಬಾರದಿತ್ತು. ಆಗಿರುವುದು ಕೆಟ್ಟ ಸಂಗತಿ 

What is the stance of the Hijab Congress Says Union Minister Pralhad Joshi grg

ಹುಬ್ಬಳ್ಳಿ(ಫೆ.16): ಹಿಜಾಬ್‌(Hijab) ಬಗ್ಗೆ ಕಾಂಗ್ರೆಸ್‌(Conress) ನಿಲುವೇನಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi), ಕಾಂಗ್ರೆಸ್‌ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ(Uniform) ಕಡ್ಡಾಯ. ಈ ಬಗ್ಗೆ ಶಿಕ್ಷಣ ಕಾಯ್ದೆಯಲ್ಲೇ ಇದೆ. ಆದರೂ ಕೆಲವರು ಹಿಜಾಬ್‌ ಹಾಕಿಕೊಳ್ಳುವುದು. ಕೆಲವರು ಕೇಸರಿ ಶಾಲೂ ಧರಿಸುವುದು ಸರಿಯಲ್ಲ. ಸದ್ಯ ಪ್ರಕರಣ ಹೈಕೋರ್ಟ್‌ನಲ್ಲಿದೆ(High Court). ಅದು ಮಧ್ಯಂತರ ತೀರ್ಪು ನೀಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನೇ ಧರಿಸಬೇಕೆಂದು ಸೂಚನೆ ನೀಡಿದೆ. ಆದರೂ ಹಿಜಾಬ್‌ ಧರಿಸಿಕೊಂಡು ಬರುತ್ತೇವೆ ಎಂದರೆ ಹೇಗೆ? ಸಂವಿಧಾನಕ್ಕೆ ಚಾಲೆಂಜ್‌ ಮಾಡುವುದಾ? ಎಂದು ಪ್ರಶ್ನಿಸಿದರು.

News Hour: ಎಕ್ಸಾಂ ಬಿಡ್ತೇವೆ, ಆದರೆ ಹಿಜಾಬ್ ತೆಗೆಯಲ್ಲ... ಹೈಕೋರ್ಟ್‌ನಲ್ಲಿ ಏನೇನಾಯ್ತು?

ನಾವಂತೂ ಕೇಸರಿ(Safforn) ಶಾಲೂ ಬೇಡ, ಹಿಜಾಬ್‌ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಅದೇ ರೀತಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು(Political Parties) ಹೇಳಲಿ. ಇದಕ್ಕೆ ಕಾಂಗ್ರೆಸ್‌ ರೆಡಿ ಇದೆಯಾ? ಎಂದು ಪ್ರಶ್ನಿಸಿದ ಅವರು, ಅದು ತನ್ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಆಗ ಯಾರೂ ಈ ರೀತಿ ಹಾಕಿಕೊಂಡು ಬರುವುದಿಲ್ಲ. ವಿವಾದವೂ ಆಗುವುದಿಲ್ಲ. ಎಲ್ಲರೂ ಸೇರಿ ಶಿಕ್ಷಣಕ್ಕೆ ಮಹತ್ವ ನೀಡಬೇಕಿದೆ. ಆ ಕೆಲಸ ಎಲ್ಲ ರಾಜಕೀಯ ಪಕ್ಷಗಳು ಮಾಡಬೇಕು ಎಂದರು.

ಹಿಜಾಬ್‌ ಗಲಾಟೆ ಆಗಬಾರದಿತ್ತು. ಆಗಿರುವುದು ಕೆಟ್ಟ ಸಂಗತಿ. ಇದರ ಹಿಂದೆ ದೊಡ್ಡ ಕುಮ್ಮಕ್ಕು ಇದೆ. ಇದೇ ರೀತಿಯ ಕುಮ್ಮಕ್ಕಿನಿಂದಲೇ ದೇಶ ಇಬ್ಭಾಗವಾಗಿದೆ ಎಂಬುದನ್ನು ಯಾರೂ ಮರೆಯಬಾರದು. ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ಪಾಲಕರು, ವಿದ್ಯಾರ್ಥಿಗಳಲ್ಲಿ(Students) ಸಲಹೆ ಮಾಡುತ್ತೇನೆ. ನಿಮ್ಮನ್ನು, ನಿಮ್ಮ ಮಕ್ಕಳನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಿಮ್ಮ ಮಕ್ಕಳು, ಡಾಕ್ಟರ್‌, ಎಂಜಿನಿಯರ್‌ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಗಳಲ್ಲಿರಬೇಕೆಂಬ ಆಶಯ ನಿಮ್ಮದಾಗಲಿ ಎಂದು ಸಲಹೆ ನೀಡಿದರು.

ಯಾರೋ ಒಬ್ಬರು ಹಿಜಾಬ್‌ ಹಾಕಿಕೊಂಡು ಬರುತ್ತೇನೆ ಎಂದೆನ್ನುತ್ತಾರೆ. ಮತ್ಯಾರೋ ಧೋತರ, ಮತ್ತೊಬ್ಬರು ಟೋಪಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಅದಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರವನ್ನೇ ಧರಿಸಬೇಕು. ಪೊಲೀಸ್‌, ಮಿಲ್ಟಿ್ರ, ವೈದ್ಯರು ಎಲ್ಲರಿಗೂ ಡ್ರೆಸ್‌ ಕೋಡ್‌ ಇರುತ್ತದೆ. ಅದನ್ನು ಪಾಲನೆ ಮಾಡಲೇಬೇಕು ಎಂದರು.

ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ ಹೇಳಿಕೆಗೆ ಕಿಡಿಕಾರಿದ ಸಚಿವ ಜೋಶಿ, ಅದೊಂದು ಚಿಲ್ಲರೆ ಹಾಗೂ ಕೀಳುಮಟ್ಟದ ಹೇಳಿಕೆ. ಒಬ್ಬ ಶಾಸಕನಾಗಿ ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದರು.

ಹಿಜಾಬ್‌ ಸಂಘರ್ಷದಲ್ಲಿ ಉರ್ದು ಶಾಲೆ ಖಾಲಿ ಖಾಲಿ

ಚಿಂಚೋಳಿ(Chincholi): ಮಕ್ಕಳ ಕಲರವ, ಆಟಪಾಠಗಳಿಂದ ಕಿಲ ಕಿಲ ವಾತಾವರಣದಿಂದ ಕೂಡಿರಬೇಕಿದ್ದ ಸರಕಾರಿ ಶಾಲೆಗಳು ಹಿಜಾಬ್‌ ವಿವಾದದಿಂದಾಗಿ ಬಹುತೇಕ ಉರ್ದ ಶಾಲೆಗಳಿಗೆ(Urdu School) ಮಕ್ಕಳು ಬಾರದೇ ಇರುವುದರಿಂದ ಶಾಲೆಗಳು ಬಿಕೋ ಎನ್ನುತ್ತಿವೆ.

Hijab Row ಹಿಜಾಬ್ ಇಲ್ಲ, ಸಾಂಪ್ರದಾಯಿಕ ಡ್ರೆಸ್, ಪಾಕ್ ಸಂಸ್ಥಾಪಕ ಜಿನ್ನಾಜೊತೆ ಭಾರತ AIMSF ಚಿತ್ರ ಬಿಚ್ಚಿಟ್ಟ ರಹಸ್ಯ!

ತಾಲೂಕಿನಲ್ಲಿ ಸುಲೇಪೇಟ, ಕೋಡ್ಲಿ, ಚಿಂಚೋಳಿ ಸರಕಾರಿ ಉರ್ದು ಪ್ರೌಢ ಶಾಲೆಗಳಿದ್ದು ಬಾಲಕಿಯರು ಸೋಮವಾರ ಮೊದಲ ದಿವಸ ಹಿಜಾಬ ಹಾಕಿಕೊಂಡು ಶಾಲೆಗೆ ಆಗಮಿಸಿದ್ದರು. ಅಲ್ಲಿನ ಮುಖ್ಯಗುರುಗಳು ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಿಕೊಂಡು ಬರಬೇಕು ಮತ್ತು ಹಿಜಾಬ ಧರಿಸಕೂಡದು ಎಂದು ಮನವೊಲಿಸಿದ್ದರು. ಆದರೆ ಮಂಗಳವಾರ ದಿವಸ ಕೋಡ್ಲಿ, ಸುಲೇಪೇಟ ಸರಕಾರಿ ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ತುಂಬಾ ಕಡಿಮೆಯಾಗಿತ್ತು.

ಪಟ್ಟಣದ ಚಂದಾಪೂರ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 167 ಇದ್ದು 8ನೇ ತರಗತಿ 15, 9ನೇ ತರಗತಿ 48, 10ನೇ ತರಗತಿ 51 ವಿದ್ಯಾರ್ಥಿನಿಯರಿದ್ದಾರೆ. ಆದರೆ ಮಂಗಳವಾರ 10ನೇ ತರಗತಿಯಲ್ಲಿ 15, 9ನೇ ತರಗತಿ 11 ಮತ್ತು 8ನೇ ತರಗತಿಯಲ್ಲಿ ಕೇವಲ 5 ವಿದ್ಯಾರ್ಥಿನಿಯರು ಮಾತ್ರ ಹಾಜರಾಗಿದ್ದರು. ಇದರಲ್ಲಿ 23 ವಿದ್ಯಾರ್ಥಿನಿಯರು 11 ಹುಡುಗರು ಶಾಲೆಗೆ ಬಂದಿದ್ದರು. ಉರ್ದು ಶಾಲೆಯ ಕಾಯಂ ಶಿಕ್ಷಕಿಯೊಬ್ಬರು ಹಿಜಾಬ್‌ ಹಿನ್ನೆಲೆಯಲ್ಲಿ ರಜೆ ಹಾಕಿದ್ದರು. ಆದರೆ ಅತಿಥಿ ಶಿಕ್ಷಕಿಯರು ಮಾತ್ರ ಸೇವೆಗೆ ಹಾಜರಾಗಿದ್ದರು ಎಂದು ಮುಖ್ಯಗುರು ದೇವಿದಾಸ ರಾಠೋಡ ತಿಳಿಸಿದ್ದಾರೆ.

ತಾಲೂಕಿನ ಎಲ್ಲ ಸರಕಾರಿ ಉರ್ದು ಪ್ರೌಢಗಳಲ್ಲಿ ಸರಕಾರದ ಆದೇಶವನ್ನು ಪಾಲಿಸುವಂತೆ ಎಲ್ಲ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಬಿಇಓ ರಾಚಪ್ಪ ಭದ್ರಶೆಟ್ಟಿ ಸೂಚಿಸಿದ್ದಾರೆ.
 

Latest Videos
Follow Us:
Download App:
  • android
  • ios