ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ಕಾರ್ಯಕರ್ತರಿಂದ ನೀತಿ ಸಂಹಿತೆ ಉಲ್ಲಂಘನೆ ?
ಚುನಾವಣೆ ಕಚೇರಿಯ 100 ಮೀಟರ್ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾರ್ಯಕರ್ತರ ಪ್ರವೇಶ, ಮೆರವಣಿಗೆ, ಗುಂಪು ಸೇರುವುದು, ಘೋಷಣೆ ಕೂಗುವುದಕ್ಕೆ ನಿಷೇಧವಿದೆ. ಆದರೆ, ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿದ್ದಲ್ಲದೆ, ಪಕ್ಷ ಹಾಗೂ ಮುಖಂಡರ ಪರ ಘೋಷಣೆ ಕೂಗಿದರು.
ಚಿಕ್ಕೋಡಿ(ಏ.19): ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣೆ ಕಚೇರಿ ಆವರಣದಲ್ಲಿ ಕಾರ್ಯಕರ್ತರು ಜಮಾವಣೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದ್ದಲ್ಲದೆ, ಅನೇಕರು ಕಚೇರಿಯೊಳಗೆ ಪ್ರವೇಶಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ನಡೆಯಿತು.
ಚುನಾವಣೆ ಕಚೇರಿಯ 100 ಮೀಟರ್ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾರ್ಯಕರ್ತರ ಪ್ರವೇಶ, ಮೆರವಣಿಗೆ, ಗುಂಪು ಸೇರುವುದು, ಘೋಷಣೆ ಕೂಗುವುದಕ್ಕೆ ನಿಷೇಧವಿದೆ. ಆದರೆ, ಗುರುವಾರ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿದ್ದಲ್ಲದೆ, ಪಕ್ಷ ಹಾಗೂ ಮುಖಂಡರ ಪರ ಘೋಷಣೆ ಕೂಗಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕರೆಂಟು ಹೋಗುತ್ತೆ, ಬಸ್ ನಿಲ್ಲುತ್ತೆ, 2000 ಬಂದ್ ಅಗುತ್ತೆ: ರಮೇಶ್ ಜಾರಕಿಹೊಳಿ
ಪೊಲೀಸರಿಗೆ ಆವಾಜ್ ಹಾಕಿದ ಪ್ರಕಾಶ ಹುಕ್ಕೇರಿ?:
ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಒಳಗೆ ಪ್ರವೇಶಿಸುತ್ತಿದ್ದ ಬೆಂಬಲಿಗರನ್ನು ತಡೆದಾಗ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ನೀನು ಇಲ್ಲಿ ನೌಕರಿ ಮಾಡಬೇಕೋ ಅಥವಾ ಬೇಡವೋ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಥಂಡಾ ಹೊಡೆದ ಪೊಲೀಸರು ಪ್ರಕಾಶ ಹುಕ್ಕೇರಿ ಬೆಂಬಲಿಗರನ್ನು ಒಳಗಡೆ ಬಿಟ್ಟಿದ್ದು, ಚರ್ಚೆಗೆ ಗ್ರಾಸವಾಗಿದೆ.