ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕರೆಂಟು ಹೋಗುತ್ತೆ, ಬಸ್ ನಿಲ್ಲುತ್ತೆ, 2000 ಬಂದ್ ಅಗುತ್ತೆ: ರಮೇಶ್ ಜಾರಕಿಹೊಳಿ
ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಕಾಂಗ್ರೆಸ್ ಸೋಲು ಖಚಿತ. ಜಗದೀಶ್ ಶೆಟ್ಟರ್ ಗೆಲ್ತಾರೆ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಶಾಸಕ ರಮೇಶ್ ಜಾರಕಿಹೊಳಿ ನುಡಿದರು.
ಬೆಳಗಾವಿ (ಏ.13): ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಕಾಂಗ್ರೆಸ್ ಸೋಲು ಖಚಿತ. ಜಗದೀಶ್ ಶೆಟ್ಟರ್ ಗೆಲ್ತಾರೆ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಶಾಸಕ ರಮೇಶ್ ಜಾರಕಿಹೊಳಿ ನುಡಿದರು.
ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಧನಂಜಯ ಜಾಧವ್, ಸಂಜಯ್ ಪಾಟೀಲ್ ಮೂಲಕ ಹೇಳಿಸುತ್ತಿದ್ದೇನೆ. ನನ್ನ ತಮ್ಮನಿಗೆ ಮಾತು ಕೊಟ್ಟಿದ್ದೇನೆ ಅದಕ್ಕೆ ಮಾತಾಡ್ತಿಲ್ಲ. ಯಾರಿಗೋ ಹೆದರಿ ಮಾತಾಡೋದನ್ನ ಬಿಟ್ಟಿಲ್ಲ ಚುನಾವಣೆ ಫಲಿತಾಂಶದ ಬಳಿಕ ಎಲ್ಲವನ್ನೂ ಮಾತಾಡುತ್ತೇನೆ ಎಂದರು.
ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಇರೋದ್ರಿಂದ ಬೆಳಗಾವಿ ಪಶ್ಚಿಮ ಭಾಗದಲ್ಲಿ ನೀರಾವರಿ ಯೋಜನೆ ಮಾಡೋದಿದೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ25000 ಸಾವಿರ ಲೀಡ್ ಆಗುತ್ತೆ. ಶೆಟ್ಟರ್ ಅವರು ಎರಡರಿಂದ ಎರಡೂವರೆ ಲಕ್ಷ ಮತಗಳಿಂದ ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಜಗದೀಶ್ ಶೆಟ್ಟರ್ ಬಾಡಿಗೆ ಮನೆ!
ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರಿವಳಿ ನಗರ ಮಾಡುತ್ತೇವೆ. ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇವೆ. ಬೆಂಗಳೂರು ಚೆನೈ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ಇಂಡಸ್ಟ್ರಿ ಕಾರಿಡಾರ್ ಮಾಡುತ್ತೇವೆ. ಹಿಂದಿನ ಚುನಾವಣೆಯಲ್ಲಿ ಗ್ಯಾರಂಟಿ ನಂಬಿ ಕೆಟ್ಟ ಸರ್ಕಾರವನ್ನು ತಂದಿದ್ದೀರಿ ಈ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗೆ ಬಲಿಯಾಗಬೇಡಿ. ಚುನಾವಣೆ ನಂತರ ಕರೆಂಟು ಹೋಗುತ್ತೆ, ಬಸ್ ನಿಲ್ಲುತ್ತೆ, ಎರಡು ಸಾವಿರ ಬಂದ್ ಆಗುತ್ತೆ ಎಂದರು.
ರಾಜ್ಯದಲ್ಲಿ ಆದಷ್ಟು ಶೀಘ್ರವೇ ಡಬಲ್ ಇಂಜಿನ್ ಸರ್ಕಾರ ಬರುತ್ತೆ ಎನ್ನುವ ಮೂಲಕ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಪತನದ ಸುಳಿವು ನೀಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂದು ಹೇಳಿದ್ದಾರೆ.