ನಟ ದಳಪತಿ ವಿಜಯ್ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮೂಲಕ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ, ಮಾದಕ ವಸ್ತು ಮುಕ್ತ ನಾಡು ಮತ್ತು ಮಹಿಳಾ ಸುರಕ್ಷತೆಯಂತಹ ಪ್ರಮುಖ ಭರವಸೆಗಳನ್ನು ನೀಡುವ ಮೂಲಕ ಅವರು ಮತದಾರರ ಗಮನ ಸೆಳೆಯುತ್ತಿದ್ದಾರೆ. 'ಶಿಳ್ಳೆ' ಚಿಹ್ನೆಯೊಂದಿಗೆ ರಾಜಕೀಯ ಅಖಾಡಕ್ಕಿಳಿದಿರುವ ವಿಜಯ್, ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಲು ರಣತಂತ್ರ ರೂಪಿಸಿದ್ದಾರೆ.

ಚೆನ್ನೈ: ತಮಿಳು ಚಿತ್ರ ಜಗತ್ತಿನ ಸ್ಟಾರ್ ಐಕಾನ್​ ದಳಪತಿ ವಿಜಯ್ ಈಗ ತಮಿಳುನಾಡು ರಾಜಕಾರಣದ ಸ್ಟಾರ್​ ಐಕಾನ್ ಕೂಡ ಆಗಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಯಿಂದ ಇಡೀ ತಮಿಳು ನಾಡು ಈ ಎಲೆಕ್ಷನ್ ಈ ಭಾರಿ ರಂಗೇರಿದೆ. ತನ್ನ ಪಕ್ಷವನ್ನ ಅಧಿಕಾರಕ್ಕೆ ತಂದರೆ ಬರಪೂರ ಕೊಡುಗೆಗಳನ್ನ ಕೊಡೋದಾಗಿ ವಿಜಯ್ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಮತದಾರರಿಗೆ ವಿಜಯ್ ಕೊಟ್ಟ ಅಭಯ ಏನು? ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳಿನಾಡು ಎಲೆಕ್ಷನ್​​ನಲ್ಲಿ ದಳಪತಿ ಮೇನಿಯಾ!

ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತಮಿಳುನಾಡಿನಲ್ಲಿ 2026 ರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಇಡೀ ರಾಜ್ಯ ಸುತ್ತಿರೋ ದಳಪತಿ ಇನ್ನೇನು ದಾಳ ಉರುಳಿಸಿ ಗದ್ದುಗೆ ಏರೋದೊಂದೇ ಭಾಕಿ ಇದೆ. ತಮ್ಮ ಟಿವಿಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಕೊಟ್ಟಿರೋ ವಿಜಯ್ ತಾನು ಮಾತ್ರ ಚೆನ್ನೈನ ತಿರುಚ್ಚಿ ಪೂರ್ವ ಮತ್ತು ಪೆರಂಬೂರುನಿಂದ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲ ತನ್ನ ಮೊದಲ ಹೆಜ್ಜೆಯಲ್ಲೇ ದೊಡ್ಡ ಗೆಲುವು ಪಡೆಯಲು ವಿಜಯ್ ರಣತಂತ್ರ ರೂಪಿಸಿದ್ದಾರೆ.

ಸಾರ್ವಜನಿಕರ ಹಣ ದುರುಪಯೋಗ ಇಲ್ಲ; ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿ..!

ಯೆಸ್, ದಳಪತಿ ವಿಜಯ್ ಈ ಭಾರಿ ತನ್ನ ಮೊದಲ ಹೆಜ್ಜೆಯಲ್ಲೇ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ವೈಲೆಂಟ್ ಎಲೆಕ್ಷನ್​​ಗೆ ಸಜ್ಜಾಗಿದ್ದಾರೆ. ಅಬ್ಬರದ ಪ್ರಚಾರ ಮಾಡಿರೋ ವಿಜಯ್​ ತಮ್ಮ ಪಕ್ಷದ ಅಭ್ಯರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ತಮಿಳು ಮಕ್ಕಳಿಗೆ ಭರಪೂರ ಭರವಸೆಗಳನ್ನ ಕೊಟ್ಟಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿ ಎಂದಿದ್ದಾರೆ.

ನಾವು ಇಲ್ಲಿ ಜನರಿಗಾಗಿ ಮಾತ್ರ ಇದ್ದೇವೆ ಎಂದಿರೋ ವಿಜಯ್​, ತಮಿಳು ನಾಡಿನಾದ್ಯಂತ ಮಾಧಕ ವಸ್ತು ಮುಕ್ತ ನಾಡು ಕಟ್ಟೇ ಕಟ್ಟುತ್ತೇನೆ ಎಂದು ಅಬ್ಬರಿಸಿದ್ದಾರೆ. ಅಷ್ಟೆ ಅಲ್ಲ ಸಾರ್ವಜನಿಕ ಹಣವನ್ನ ಎಂದೂ ದುರುಪಯೋಗ ಮಾಡಲ್ಲ. ಮಹಿಳೆಯರ ರಕ್ಷಣೆ ನಮ್ಮ ಹೊಣೆ. ಈ ಬಾರಿ ನಮ್ಮನ್ನೇ ಅಧಿಕಾರಕ್ಕೆ ತನ್ನಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

ದಳಪತಿ ವಿಜಯ್ ಕಟ್ಟಿರೋ ಟಿವಿಕೆ ಪಕ್ಷಕದ ಗುರುತು ‘ಶಿಳ್ಳೆ’.. ವಿಭಿನ್ನ ಆಲೋಚನೆಯೊಂದಿಗೆ ರಾಜಕಾರಣದ ಕಹಳೆ ಊದಿರೋ ವಿಜಯ್​​ ಭವಿಷ್ಯ ಏಪ್ರಿಲ್​ 23ಕ್ಕೆ ಮತ ಪೆಟ್ಟಿಗೆಯಲ್ಲಿ ಭದ್ರವಾಲಿದೆ.