ಲೋಕಸಭಾ ಚುನಾವಣೆ 2024: ಗ್ಯಾರಂಟಿ ಸುತ್ತಲೇ ಗಿರಕಿ, ಯಾರಿಗೆ ಒಲಿಯಲಿದೆ ಸ್ತ್ರೀ 'ಶಕ್ತಿ'?

ಚಂದ್ರಪ್ಪ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಹ ಮರು ದಿನದಿಂದಲೇ ಕ್ಷೇತ್ರದ ಒಡನಾಟ ಇಟ್ಟುಕೊಂಡಿದ್ದರೆ, ಕಾರಜೋಳ ಚುನಾವಣೆ ಘೋಷಣೆ ಆದ ಮೇಲೆಯೇ ಪ್ರವೇಶ ಪಡೆದವರು. ಮಾತಂಗಿ ವಂಶವಾಹಿನಿಗಳ ನಡುವೆ ಮುಸುಕಿನ ಗುದ್ದಾಟ ವಂತು ಆರಂಭವಾಗಿದ್ದು ಮಾದಿಗರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದೇ ಕುತೂಹಲ.

Tough Competition Between BJP and Congress Chitradurga in Lok Sabha Elections 2024  grg

ಚಿಕ್ಕಪ್ಪನಹಳ್ಳಿ ಷಣ್ಮುಖ  

ಚಿತ್ರದುರ್ಗ(ಏ.19):  ಮಧ್ಯ ಕರ್ನಾಟಕದ ಬಯಲು ಸೀಮೆ ಕ್ಷೇತ್ರದಲ್ಲಿ ಸದಾ ಬರದ್ದೇ ಕಾರುಬಾರು. ಪ್ರತಿ ಹತ್ತು ವರ್ಷದ ಅವಧಿಯ ಅನ್ನದ ತಟ್ಟೆಯಲ್ಲಿ ಕನಿಷ್ಠ ನಾಲ್ಕಾರು ವರ್ಷ ಬರದ ತುತ್ತುಗಳಿರುತ್ತವೆ. ಬರವನ್ನೇ ಹಾಸಿ ಹೊದ್ದು ಮಲಗುವುದು ಈ ಪ್ರಾಂತ್ಯದ ಜಾಯಮಾನ. ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಂತು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರಿನ ಎರಡು ವಿಧಾಸಭೆ ಕ್ಷೇತ್ರ ಒಳಗೊಂಡಿರುವ ಚಿತ್ರದುರ್ಗ ಲೋಕಸಭೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆ. ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಎಸ್ಸಿ, ಎರಡು ಎಸ್ಪಿ ವಿಧಾನಸಭೆ ಕ್ಷೇತ್ರಗಳಿವೆ. ಪರಿಶಿಷ್ಟರೇ ಇಲ್ಲಿ ಸದಾ ನಿರ್ಣಾಯಕ, ಹಾಗೊಮ್ಮೆ ಹೀಗೊಮ್ಮೆ ಜನತಾ ಪರಿವಾರ ಹಾಗೂ ಎರಡು ಬಾರಿ ಬಿಜೆಪಿ ಗೆದ್ದಿದೆ. 1996ರಲ್ಲಿ ಜನತಾದಳದಿಂದ ಪಿ.ಕೋದಂಡರಾಮಯ್ಯ ಆಯ್ಕೆಯಗುವ ಮೂಲಕ ಹೊರಗಿನವರ ಪ್ರವೇಶ ಶುರುವಾ . 2004 4 ಕಾಂಗ್ರೆಸ್‌ನಿಂದ ಗೆದ್ದು ಸ್ಥಳೀಯರು ಕೂಗಿಗೆ ದನಿಯಾಗಿದ್ದರಾದರೂ ನಂತರದಲ್ಲಿ ಹೊರಗಿನ ವರ ಆಡಳಿತ ಮುಂದುವರಿ ದಿದ್ದು ಈವರೆಗೂ ನಿಂತಿಲ್ಲ.

ಕಾರಜೋಳ ಮಾದಿಗ ಸಮುದಾಯದವರು, ಆದ್ರೆ ಚುನಾವಣೆಯಲ್ಲಿ ತಪ್ಪು ಹೆಜ್ಜೆ ಇಟ್ರು: ಕೆ.ಎಚ್.ಮುನಿಯಪ್ಪ

ಎಂಟು ವಿಧಾನಸಭೆ ಕ್ಷೇತ್ರಗಳ ವೈಕಿ ಸದ್ಯ ಹೊಳಲ್ಕೆರೆ ಹೊರ ತುಪಡಿಸಿ ಉಳಿದ ಏಳು ಕಡೆ ಶಾಸಕರಿದ್ದಾರೆ. ಹಾಗಾಗಿ ಗೆಲುವಿಗೆ ನಮ್ಮವರ ಜೊತೆಗ್ಯಾರಂಟಿಗಳಿವೆ ಎಂಬಹಮ್ಮು ಕಾಂಗ್ರೆಸ್ ಗಿದೆ. ಕ್ಷೇತ್ರದಲ್ಲಿ ಮುಸ್ಲಿಮರು ಗಣನೀಯವಾಗಿ ದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಜಾಸ್ತಿ ಇರುವುದರಿಂದ ಸಹಜವಾಗಿಯೇ ಸ್ತ್ರೀ 'ಶಕ್ತಿ' ಕೈ ಹಿಡಿಯಲಿದೆ ಎಂಬ ಅಚಲ ವಿಶ್ವಾಸ ಕಾಂಗ್ರೆಸ್ಸಿಗರದು

ಚಿತ್ರಮರ್ಗ ಕ್ಷೇತ್ರದಲ್ಲಿ ಹಾಲಿ 20 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹಣಾಹಣಿ, ಕಾಂಗ್ರೆಸ್‌ನಿಂದ ಮಾಜಿ ಸಂಸದ ಬಿ.ಎನ್.ಚಂದ್ರಪ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಗೋವಿಂದ ಕಾರಜೋಳ ಕಣದಲ್ಲಿದ್ದಾರೆ. ಇಬ್ಬರೂ ಹೊರಗಿ ನವರೆ ಆದ್ದರಿಂದ ಸ್ಥಳೀಯರಿಗೆ ಮಣೆ ಎನ್ನುವ ಕೂಗು ಸಹಜವಾಗಿ ನೇಪತ್ಯಕ್ಕೆ ಸಂದಿದೆ. ದೂರದ ಆನೇಕಲ್‌ನಿಂದ ಬಂದು ಮೋದಿ ಅಲೆ, ಶಾಸಕರ ಬಲದ ಕಾರಣದಿಂದ ಕಳೆದ ಸ್ವಾಮಿ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಲಾಗಿಲ್ಲ, ಪಕ್ಷ ಗೋವಿಂದ ಕಾರಜೋಳರನ್ನು ಕಣಕ್ಕಿಳಿಸಿದೆ. ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಶಾಸಕರಿರುವು ದರಿಂದ ಬಿಜೆಪಿ ಮೋದಿ ಮತ್ತೊಮ್ಮೆ ಎಂಬ ಘೋಷಣೆ ನಚ್ಚಿಕೊಳ್ಳಬೇಕಿದೆ.

ಬಾರಿ ಸುಲಭವಾಗಿ ಗೆದ್ದಿದ್ದ ಎ.ನಾರಾಯಣ

ಚಂದ್ರಪ್ಪ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಹ ಮರು ದಿನದಿಂದಲೇ ಕ್ಷೇತ್ರದ ಒಡನಾಟ ಇಟ್ಟುಕೊಂಡಿದ್ದರೆ, ಕಾರಜೋಳ ಚುನಾವಣೆ ಘೋಷಣೆ ಆದ ಮೇಲೆಯೇ ಪ್ರವೇಶ ಪಡೆದವರು. ಮಾತಂಗಿ ವಂಶವಾಹಿನಿಗಳ ನಡುವೆ ಮುಸುಕಿನ ಗುದ್ದಾಟ ವಂತು ಆರಂಭವಾಗಿದ್ದು ಮಾದಿಗರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದೇ ಕುತೂಹಲ.

ಗೋವಿಂದ ಕಾರಜೋಳ, ಬಿಜೆಪಿ

ವಿಜಯಪುರ ಜಿಲ್ಲೆಯವರಾದ ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಲೋಕೋಪಯೋಗಿ, ಸಮಾಜ ಕಲ್ಯಾಣ, ಜನಸಂಪನ್ಮೂಲ ಸಚಿವರಾಗಿ ಅನುಭವವಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾ ಗಿಯೂ ಕಾರ್ಯನಿರ್ವಹಿಸಿದ್ದರು. ಮಾದಿಗೆ ಸಮು ದಾಯದ ಪ್ರಭಾವಿ ಮುಖಂಡರು ಕೂಡಾ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನನುಭವಿಸಿದ್ದಾರೆ. ಕಾರಜೋಳ ಸ್ಪರ್ಧೆಗೆ ಸ್ಥಳೀಯರಿಂದ ವಿರೋಧವಿತ್ತು. ಪಕ್ಷದ ನಾಯಕರು ಬಂಡಾಯ ಶಮನ ಮಾಡಿದ್ದಾರೆ.

ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್

ಬಿ.ಎನ್.ಚಂದ್ರಪ್ಪ ಚಿಕ್ಕಮಗಳೂರು ಜಿಲ್ಲೆಯವರು. ಈ ಹಿಂದೆ ಲಿಡ್ಕರ್ ಅಧ್ಯಕ್ಷರಾಗಿದ್ದರು. ಮೂಡಿಗೆರೆ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದರು. 201400 ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಚಂದ್ರಪ್ಪ ಅವರು, ಬಿಜೆಪಿಯ ಜನಾರ್ದನಸ್ವಾಮಿ ಅವರನ್ನು 101291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ನಾರಾಯಣಸ್ವಾಮಿ ಅವರ ಕೈಯಲ್ಲಿ ಪರಾಭವಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಚಂದ್ರಪ್ಪ ಕಾರ್ಯನಿರ್ವಹಿಸಿದ್ದರು.

Lok Sabha Election: ಬಿಜೆಪಿಯಲ್ಲಿನ ಅಸಮಾಧಾನ ಶಮನಕ್ಕೆ ಸರ್ಕಸ್: ಇಂದು ಹೊಳಲ್ಕೆರೆಗೆ ವಿಜಯೇಂದ್ರ ಭೇಟಿ

ಜಾತಿ-ಮತ ಲೆಕ್ಕಾಚಾರ

ಲೋಕಸಭೆ ವ್ಯಾಪ್ತಿಯಲ್ಲಿ ಮಾದಿಗ ಮತದಾರರ ಸಂಖ್ಯೆ 4 ಲಕ್ಷ, ನಾಯಕರು 3 ಲಕ್ಷ, ಕುಂಚಿಟಿಗರು 2 ಲಕ್ಷ ಲಿಂಗಾಯತರು 2.50 ಲಕ್ಷ, ಗೊಲ್ಲರು 2 ಲಕ್ಷ ಹಾಗೂ ಮುಸ್ಲಿಮರು 2 ಲಕ್ಷ ಇದ್ದಾರೆ. ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇದೇ ಸಮುದಾಯಕ್ಕೆ ಟಿಕೆಟ್ ನೀಡಿವೆ. ಹಿರಿಯೂರು, ಶಿರಾ, ಪಾವಗಡ ಮತ್ತು ಚಳ್ಳಕೆರೆ ಭಾಗದಲ್ಲಿ ಕುಂಚಿಟಿಗರ ಪ್ರಾಬಲ್ಯವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ, ಹಿರಿಯೂರು, ಶಿರಾ, ಪಾವಗಡದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗಣನೀಯ ಮತ ಪಡೆದಿದ್ದರು. ಈ ಮತಗಳು ಮೈತ್ರಿಕೂಟಕ್ಕೆ ಬರಬಹುದು. 

2019ರ ಫಲಿತಾಂಶ: 

ಎ.ನಾರಾಯಣಸ್ವಾಮಿ(ಬಿಜೆಪಿ) 6,26,195, ಬಿ.ಎನ್‌.ಚಂದ್ರಪ್ಪ(ಕಾಂಗ್ರೆಸ್‌) 5,46, 017

Latest Videos
Follow Us:
Download App:
  • android
  • ios