ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ. ರವಿ

ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು. ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದವರಿಗೆ ಜನ ಶಿಕ್ಷೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಲೀಕರು ಜನರೇ, ಅವರೇ ನ್ಯಾಯ ಕೊಡುವವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

Those who seek justice must have moral values says ct rav at chikkamagaluru rav

ಚಿಕ್ಕಮಗಳೂರು (ಜ.20) : ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು. ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದವರಿಗೆ ಜನ ಶಿಕ್ಷೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಲೀಕರು ಜನರೇ, ಅವರೇ ನ್ಯಾಯ ಕೊಡುವವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಕರ್ನಾಟಕ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ(Siddaramaiah) ಅವರು ಸರಣಿ ಟ್ವೀಟ್‌ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ(CT Ravi), ಅವರ ಕಾಲದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಮೇಲಿನ ಕೇಸ್‌ ವಾಪಸ್‌ ಪಡೆದು ಸರಣಿ ಕೊಲೆಗೆ ಕಾರಣರಾದರು. ಜನರು ಅವರಿಗೆ ಶಿಕ್ಷೆ ಕೊಟ್ಟರು. ಅವರನ್ನು ಅಧಿಕಾರದಿಂದ ಇಳಿಸಲು ಹಲವು ಕಾರಣಗಳಲ್ಲಿ ಅದೂ ಒಂದು ಕಾರಣ. ರೀಡೂ ಮೂಲಕ ಸಾವಿರಾರು ಕೋಟಿ ಹಗರಣ ನಡೆಸಿದ ಕಾರಣಕ್ಕೆ ಶಿಕ್ಷೆ ನೀಡಬೇಕೆಂದೆ ಜನ ನ್ಯಾಯ ಕೊಟ್ಟಿದ್ದು ಎಂದು ಟೀಕಿಸಿದರು.

ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ

ಮೋದಿ ಅವರು ಯಾವಾಗಲೂ ದೇಶಕ್ಕೆ, ಬಡವರಿಗೆ ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸಲು ಮುಂದಿದ್ದಾರೆ. ನೀವು ಯಾವ ರೀತಿ ನ್ಯಾಯ ಬಯಸುತ್ತಿದ್ದೀರಿ ಗೊತ್ತಿಲ್ಲ. ಅಧಿಕಾರ ಇದ್ದರೆ ಮಾತ್ರ ಇಲ್ಲಿರುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ಪಕ್ಷಕ್ಕೆ ಹೋಗುತ್ತೇನೆ ಎನ್ನುವ ಜಾಯಮಾನದವರು. ಮೋದಿ ಅವರಲ್ಲ, ತಮ್ಮದೇ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದವರು ಮೋದಿ ಅವರಲ್ಲ. ನಿಜವಾಗಲೂ ಪರಮೇಶ್ವರ್‌ ಅವರು ನನ್ನನ್ನು ಸೋಲಿಸಿದವರನ್ನು ಸೋಲಿಸಿ ನನಗೆ ನ್ಯಾಯ ಕೊಡಿ ಎಂದು ಕೇಳಬೇಕು. ಖರ್ಗೆ ನ್ಯಾಯ ಕೇಳಬೇಕು ಸಿದ್ದರಾಮಯ್ಯ ಅವರಲ್ಲ ಎಂದು ವ್ಯಂಗ್ಯವಾಡಿದರು.

Assembly election: ವೇಶ್ಯೆ ಮಾದರಿಯಲ್ಲಿ ಶಾಸಕ ಆನಂದ್‌ ಸಿಂಗ್‌ ಸ್ಥಾನ ಮಾರಾಟ: ಬಿಕೆ. ಹರಿಪ್ರಸಾದ್‌ ವಾಗ್ದಾಳಿ

ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌(BK Hariprasad) ಅವರ ಜವಾಬ್ದಾರಿಗೆ ತಕ್ಕಂತೆ ಮಾತನಾಡುತ್ತಿಲ್ಲ ಎನ್ನುವುದು ಸರ್ವವಿಧಿತ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ ಕಾರಣಕ್ಕೆ ನಾನೂ ಕೂಡ ಅವರಿಗೆ ಈಗಾಗಲೇ ಕಾನೂನುಬದ್ಧ ನೋಟೀಸು ನೀಡಿದ್ದೇನೆ. ಅವರು ಕ್ಷಮೆ ಕೇಳದಿದ್ದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು.

Latest Videos
Follow Us:
Download App:
  • android
  • ios