Asianet Suvarna News Asianet Suvarna News

ಎಚ್‌ಡಿಕೆ ಸಿಎಂ ಆದ್ರೆ ರಾಜ್ಯದ ರೈತರ ಸಮಸ್ಯೆ ಇತ್ಯರ್ಥ: ಶಾಸಕ ಅನ್ನದಾನಿ

ರಾಜ್ಯದಲ್ಲಿ ಮುಂದಿನ ಬಾರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಬಹುಮತದೊಂದಿಗೆ ಮುಖ್ಯಮಂತ್ರಿಯಾದರೆ ರೈತ ಸಂಕ್ರಾಂತಿ ಆನ್‌ಲೈನ್‌ ಸಂವಾದದಲ್ಲಿ ರೈತರು ತಿಳಿಸಿದ ಸಮಸ್ಯೆ ಬಗೆಹರಿಸಿ ರೈತರ ಬಾಳನ್ನು ಹಸನು ಮಾಡಲಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

The problems of the farmers will be solved if HDK is CM of karnataka rav
Author
First Published Jan 17, 2023, 1:08 PM IST

ಮಳವಳ್ಳಿ (ಜ.17) ರಾಜ್ಯದಲ್ಲಿ ಮುಂದಿನ ಬಾರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಬಹುಮತದೊಂದಿಗೆ ಮುಖ್ಯಮಂತ್ರಿಯಾದರೆ ರೈತ ಸಂಕ್ರಾಂತಿ ಆನ್‌ಲೈನ್‌ ಸಂವಾದದಲ್ಲಿ ರೈತರು ತಿಳಿಸಿದ ಸಮಸ್ಯೆ ಬಗೆಹರಿಸಿ ರೈತರ ಬಾಳನ್ನು ಹಸನು ಮಾಡಲಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಕ್ರಾಂತಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತ ಸಂಕ್ರಾಂತಿ ಎಂಬ ವಿನೂತನ ಸಂವಾದದ ಮೂಲಕ ಆನ್‌ಲೈನ್‌ ಮೂಲಕ ರೈತರ ಸಮಸ್ಯೆ ತಿಳಿದು ಸಮರ್ಪಕ ಉತ್ತರದ ಜೊತೆಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಿದ್ದಾರೆ ಎಂದರು.

ಕುಮಾರಸ್ವಾಮಿಗೆ ರಾಮನಗರ ಬಿಟ್ರೆ ಬೇರೇನೂ ಗೊತ್ತಿಲ್ಲ, ಮಂಡ್ಯವೇ ಅವರ ಕೂಪ ಮಂಡೂಕ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ರೈತರು ಬೆಳೆದ ಬೆಲೆ ವೈಜ್ಞಾನಿಕ ಬೆಲೆ, ಮಧ್ಯವರ್ತಿಗಳ ಹಾವಳಿ, ನೀರಾವರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಸಂವಾದದಲ್ಲಿ ಚರ್ಚೆ ನಡೆಸಿ ಪ್ರಶ್ನೆ ಹಾಗೂ ಉತ್ತರ ವಿನಿಮಯ ಮಾಡಿಕೊಂಡು ರೈತರಿಗೆ ವಿಶೇಷ ಕಾರ್ಯಕ್ರಮ ಜಾರಿ ಮಾಡಲು ಕುಮಾರಸ್ವಾಮಿ ನಡೆಸುತ್ತಿರುವ ಸಂವಾದ ಅತ್ಯುತ್ತಮವಾಗಿದೆ ಎಂದರು.

ಪ್ರತಿಯೊಬ್ಬರಿಗೂ ಅನ್ನ ನೀಡುವ ಇಂದು ರೈತ ಸಂಕಷ್ಟದ ಜೀವನ ಸಾಗಿಸುತ್ತಿದ್ದಾನೆ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕುಮಾರಸ್ವಾಮಿ ಅವರ ನಾಯಕತ್ವವೇ ಸರಿ ಎನ್ನುವುದು ರೈತರ ಅಭಿಪ್ರಾಯ ಎಂದರು.

ಮಳವಳ್ಳಿ ತಾಲೂಕು ಕೆಆರ್‌ಎಸ್‌ನ ಕೊನೆಯ ಭಾಗವಾಗಿರುವುರಿಂದ ನೀರಿನ ಸಮಸ್ಯೆ ಬಗೆಹರಿಸಬೇಕು. ವಿಳ್ಯೆದೆಳೆ ರೈತರ ಸಮಸ್ಯೆಗಳನ್ನು ಸರ್ಕಾರ ಗಮನಹರಿಸಬೇಕು, ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಳವಳ್ಳಿ ತಾಲೂಕಿನ ರೈತರು ಸಂವಾದದಲ್ಲಿ ಮನವಿ ಮಾಡಿಕೊಂಡರು.

Karnataka Politics: ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ ನೀಡಿ : ಎಚ್ಡಿಕೆ

ಇದಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೇ ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು. ರೈತ ಸಂಕ್ರಾಂತಿ ಆನ್‌ಲೈನ್‌ ಸಂವಾದದಲ್ಲಿ ಪುರಸಭೆ ಅಧ್ಯಕ್ಷೆ ರಾಧನಾಗರಾಜು, ಜೆಡಿಎಸ್‌ ತಾಲೂಕು ಅಧ್ಯಕ್ಷ ವಿಶ್ವನಾಥ್‌, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.

Follow Us:
Download App:
  • android
  • ios