ಕುಮಾರಸ್ವಾಮಿಗೆ ರಾಮನಗರ ಬಿಟ್ರೆ ಬೇರೇನೂ ಗೊತ್ತಿಲ್ಲ, ಮಂಡ್ಯವೇ ಅವರ ಕೂಪ ಮಂಡೂಕ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ
ಕುಮಾರಸ್ವಾಮಿ ಅವರಿಗೆ ರಾಮನಗರ ಬಿಟ್ರೆ ಬೇರೆನೂ ಗೊತ್ತಿಲ್ಲ, ಮಂಡ್ಯವೇ ಅವರ ಕೂಪ ಮಂಡೂಕ. ಮಂಡ್ಯ, ಹಾಸನದಲ್ಲಿಯೇ ಎಚ್ಡಿಕೆಯನ್ನು ಅವರ ಬೆಂಬಲಿಗರು ಇಟ್ಟಿದ್ದಾರೆ. ಅವರಿಗೆ ಹೊರಗಡೆ ಬಂದು ಅಭ್ಯಾಸವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ವರದಿ:ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಜ.13): ಕುಮಾರಸ್ವಾಮಿ ಅವರಿಗೆ ರಾಮನಗರ ಬಿಟ್ರೆ ಬೇರೆನೂ ಗೊತ್ತಿಲ್ಲ, ಮಂಡ್ಯವೇ ಅವರ ಕೂಪ ಮಂಡೂಕ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು , ಹೇಳಿಕೊಳ್ಳಲು ವಿಷಯಗಳಿಲ್ಲದೆ, ಬಿಜೆಪಿಗರು ಮೋದಿ ಕರೆಯಿಸುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ ಅವರು, ಹುಬ್ಬಳ್ಳಿ ರಾಷ್ಟ್ರೀಯ ಯುವಜನೋತ್ಸವ ಸಣ್ಣ ಕಾರ್ಯಕ್ರಮ. ಇಡೀ ದೇಶದ ಯುವಕರೇ ಅಲ್ಲಿ ಬಂದಿದ್ದರು. ಕುಮಾರಸ್ವಾಮಿ ಅವರಿಗೆ ರಾಮನಗರ ಬಿಟ್ರೆ ಬೇರೆನೂ ಗೊತ್ತಿಲ್ಲ ಎಂದರು.
ಮಂಡ್ಯವೇ ಅವರ ಕೂಪ ಮಂಡೂಕ. ಮಂಡ್ಯ, ಹಾಸನದಲ್ಲಿಯೇ ಎಚ್ಡಿಕೆಯನ್ನು ಅವರ ಬೆಂಬಲಿಗರು ಇಟ್ಟಿದ್ದಾರೆ. ಅವರಿಗೆ ಹೊರಗಡೆ ಬಂದು ಅಭ್ಯಾಸವಿಲ್ಲ. ನಾನು ದೇವೇಗೌಡರ ಬಗ್ಗೆ ಮಾತನಾಡೋಕೆ ಹೋಗಲ್ಲ. ಯಾಕೆಂದ್ರೆ ದೇವೇಗೌಡ್ರು ದೇಶಾದ್ಯಂತ ಓಡಾಡಿದವರು. ಕುಮಾರಸ್ವಾಮಿ ಮಾಜಿ ಸಿಎಂ ಆಗಿ ಕೇವಲ ಮಂಡ್ಯ ಹಾಸನ ಅಂದ್ರೆ ಹೇಗೆ ಎಂದು ಪ್ರಶ್ನಿಸುತ್ತ ಅವರೊಬ್ಬ ಕೂಪ ಮಂಡೂಕ ಎಂದರು.
ಮೋದಿ ವಿಶ್ವ ನಾಯಕ. ಇಡೀ ದೇಶಕ್ಕೆ ಸ್ಪೂರ್ತಿ. ಕೂಪ ಮಂಡೂಕ ಭಾವನೆಯಿಂದ ಹೊರಗಡೆ ಬಂದು ನೋಡಬೇಕು.ಕುಮಾರಸ್ವಾಮಿ ಮೋದಿಯಂತವರನ್ನು ಟೀಕೆ ಮಾಡಿ, ದೊಡ್ಡ ಮನುಷ್ಯ ಅನಿಸಿಕೊಳ್ಳಬಹುದು. ಕುಮಾರಸ್ವಾಮಿ ಸಿಎಂ ಆದವರು ಅವರನ್ನು ಟೀಕೆ ಮಾಡೋಕೆ ಹೋಗಲ್ಲ ಎಂದರು. ವಿಶ್ವವೇ ಒಪ್ಪಿದ ಮೋದಿಯವರನ್ನು ಒಪ್ಪೋದಕ್ಕೆ, ಬಿಡೋಕೆ ಕುಮಾರಸ್ವಾಮಿ ಯಾರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳ ವ್ಯಾಜ್ಯ ಬಂದಾಗ ಮಧ್ಯಸ್ಥಿಕೆಗೆ ಮೋದಿಯವರನ್ನು ಕರೆಯುತ್ತಾರೆ. ವಿಶ್ವನಾಯಕ ಮೋದಿ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಎಲ್ಲಿಯಾದ್ರೂ ಸ್ಫರ್ಧಿಸಲಿ, ಆದ್ರೆ ಜನತೆ ವಿಶ್ವಾಸ ಉಳಿಯಲ್ಲ:
ಮಾಜಿ ಸಿಎಂ ಸಿದ್ದರಾಮಯ್ಯ ಕೊಲಾರ ಸ್ಪರ್ಧೆ ಬಗೆಗೆ ಮಾತನಾಡಿದ ಈಶ್ವರಪ್ಪ, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು, ಏನು ತಪ್ಪಿದೆ. ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಿದರು,ಅಲ್ಲಿ ಆಕಸ್ಮಿಕವಾಗಿ ಸೋತರು. ಬಾದಾಮಿಗೆ ಬಂದು ಅಲ್ಲಿ ಗೆದ್ದರು ,ಅಲ್ಲಿಂದ ಬೇರೆ ಕಡೆ ಯಾಕ್ ಹೋಗ್ತಿದ್ದಾರೆ ಗೊತ್ತಿಲ್ಲ ಎಂದರು.
ಬಾದಾಮಿಯಲ್ಲಿ ಅಭಿವೃದ್ಧಿ ಬಹಳ ಮಾಡಿದ್ದಾರೆ ಅಂದರೆ ಅಲ್ಲೆ ಉಳಿಬೇಕಿತ್ತು. ಬಾದಾಮಿ ಜನ ಗೆಲ್ಲಿಸಿದ್ದರು, ಅಲ್ಲಿಯೇ ಸ್ಪರ್ಧಿಸಬೇಕಿತ್ತು, ಇಂದು ನಿಲ್ತಾರೆ ನಾಳೆ ಹೋಗ್ತಾರೆ ಅಂದರೆ ,ಇದೇ ಭಾವನೆ ಕೊಲಾರದ ಜನತೆಗೆ ಬಂದರೆ ಕೊಲಾರದಲ್ಲಿ ಜನ ಸೋಲಿಸುತ್ತಾರೆ ಎಂದರು.
ರಾಜಕಾರಣಿಗಳ ಮೇಲಿನ ವಿಶ್ವಾಸ ಜನರಿಗೆ ಹೊರಟು ಹೋಗುತ್ತದೆ. ಎಲ್ಲಿ ಚುನಾವಣೆಗೆ ನಿಂತು ಗೆದ್ದಿರುತ್ತಾರೋ ಆ ಕ್ಷೇತ್ರದ ಜನರ ಋಣ ತಿರಿಸಬೇಕಾಗುತ್ತೆ. ಕ್ಷೇತ್ರದಲ್ಲಿ ಇಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿದ್ದಿನಿ ಮತ್ತೆ ನನಗೆ ಅವಕಾಶ ನೀಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಳ್ಳಬೇಕು. ರಾಜಕಾರಣಿಗಳು ನಮ್ಮ ಜೊತೆಗಿದ್ದಾರೆ, ಅವರನ್ನು ಗೆಲ್ಲಿಸೋಣ ಎಂಬ ಭಾವನೆ ಬರುತ್ತದೆ ಎಂದರು. ಇವತ್ತು ಇಲ್ಲಿ ಬಂದಿದ್ದಾರೆ ಚುನಾವಣೆ ನಂತರ, ನಾಳೆ ಮತ್ತೊಂದು ಊರಿಗೆ ಹೋಗ್ತಾರೆ ಅನ್ನೋ ಭಾವನೆ ಜನರಿಗೆ ಬರಬಾರದು ಎಂದರು.
ಮೀಸಲಾತಿ ಹೋರಾಟ ಫ್ಯಾನ್ಸಿ ಆಗಿದೆ: ಮೀಸಲಾತಿ ಬಗ್ಗೆ ಹೋರಾಟ ಮಾಡೋದು ಫ್ಯಾನ್ಸಿ ಆದಂತಾಗಿದೆ ಎಂದ ಕೆ.ಎಸ್.ಈಶ್ವರಪ್ಪ, ಮೀಸಲಾತಿ ಅನ್ನೋದು ತೀರ ಹಿಂದುಳಿದವರಿಗೆ ಬೇಕು ಎನ್ನುವುದು ಅಂಬೇಡ್ಕರ್ ಅವರ ಇಚ್ಛೆ ಆಗಿತ್ತು. ಅದೊಂದು ಹತ್ತು ವರ್ಷ ಇದ್ದರೆ ಸಾಕು ಅನ್ನೋದು ಅವರ ಅಭಿಪ್ರಾಯವಾಗಿತ್ತು. ಈಗ ಎಲ್ಲ ಜಾತಿಯವರೂ ನನಗೂ ಮೀಸಲಾತಿ ಅಂತಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ 35 ಕ್ಷೇತ್ರ ಗೆಲ್ಲುವ ಸಂಕಲ್ಪ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ
ನನ್ನ ಜಾತಿಯವರ ಪರ ನಾನು ನಿಂತಿದ್ದೇನೆ. ನಾನು ದೊಡ್ಡ ಹೋರಾಟ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ನಾನು ಕೂಡ ಎಸ್.ಟಿ.ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಗಿನೆಲೆ ಶ್ರೀಗಳು ಕರೆದ್ರು ಅವರಿಗೆ ಗೌರವ ಕೊಡಬೇಕೆಂದು ಹೋಗಿದ್ದೆ. ನಾನೇನು ಇಲ್ಲ ಅನ್ನೋಲ್ಲ. ಕಡು ಬಡವರಿಗೆ ಮೀಸಲಾತಿ ಸಿಕ್ಕಾಗ ಒಳ್ಳೆಯ ಅನುಕೂಲ ಆಗುತ್ತೆ ಎಂದರು.
ಅಧಿಕಾರಕ್ಕೆ ಬಂದ 24 ತಾಸಲ್ಲಿ ಬಂದರವಾಡ ಏತ ನೀರಾವರಿಗೆ ಚಾಲನೆ: ಕುಮಾರಸ್ವಾಮಿ
ಮಲ್ಲಿಕಾರ್ಜುನ ಖರ್ಗೆ, ಈಶ್ವರಪ್ಪ, ಸಿದ್ದರಾಮಯ್ಯಗೆ ಯಾಕೆ ಮೀಸಲಾತಿ ಬೇಕು ಎಂದು ಪ್ರಶ್ನಿಸಿದ ಅವರು ಶ್ರೀಮಂತ ಸ್ಥಾನದಲ್ಲಿ ಇರುವವರಿಗೆ ಮೀಸಲಾತಿ ಬೇಕು ಅನ್ನೋದನ್ನ ನಾನು ಒಪ್ಪಲ್ಲ. ಇಡೀ ಸಮಾಜ ಒಂದೇ ತರ ಇರುತ್ತಾ. ಇದಕ್ಕಾಗಿಯೇ ಕುಲಶಾಸ್ತ್ರ ಅಧ್ಯಯನ ಮಾಡಿ, ಸರ್ಕಾರದ ಅಗತ್ಯತೆ ನೋಡಿ ಮೀಸಲಾತಿ ಮಾಡುತ್ತೆ ಎಂದರು.