Pancharatna rathayatre: ಶಾರದಾ ಗೆದ್ದರೆ ಸಚಿವ ಸ್ಥಾನ ನಿಶ್ಚಿತ: ಎಚ್‌ಡಿ ಕುಮಾರಸ್ವಾಮಿ ಭರವಸೆ

ಜೆಡಿ​ಎಸ್‌ ಅಧಿಕಾರಿಕ್ಕೆ ಬಂದರೆ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

If Sharada wins the ministerial position is certain HD Kumaraswamy promises shivamogga rav

ಹೊಳೆಹೊನ್ನೂರು (ಫೆ.23) : ಜೆಡಿ​ಎಸ್‌ ಅಧಿಕಾರಿಕ್ಕೆ ಬಂದರೆ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಶಿವಮೊಗ್ಗ(Shivamogga) ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌(JDS)ನಿಂದ ಬುಧವಾರ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ(Pancharatna rathayatre shivamogga)ಯಲ್ಲಿ ಮಾತನಾಡಿ, ಶಿವಮೊಗ್ಗ ಗ್ರಾಮಾಂತರದ ಜನಪರ ಕಾಳಜಿಯುಳ್ಳ ನನ್ನ ತಂಗಿ ಶಾರದಾ ಪೂರಾರ‍ಯ ನಾಯ್ಕ್(Sharadha naik) ಅವರನ್ನು ಅತಿ ಹೆಚ್ಚು ಮತಗಳಿಂದ ಆರಿಸಿ ತರಬೇಕಿದೆ. ಇದರಿಂದ ಈ ಕ್ಷೇತ್ರದ ಜನತೆಗೆ ಒಳ್ಳೆಯ ಅವಕಾಶಗಳು ದೊರೆಯಲಿವೆ ಎಂದರು.\

ಶಿವಮೊಗ್ಗ: ಏರ್‌ಪೋರ್ಟ್ ಕಾರ್ಯಕ್ರಮ ಸರ್ಕಾರದ್ದೋ, ಬಿಜೆಪಿಯದ್ದೋ?: ಎನ್‌.ರಮೇಶ್‌ ಕಿಡಿ

ಕುಟುಂಬದಲ್ಲಿ ₹30- .40 ಲಕ್ಷ ಖರ್ಚಾಗುವಂತಹ ಕಾಯಿಲೆಗಳು ಇವತ್ತು ಸರ್ವೇಸಾಮಾನ್ಯ. ಮಲವಗೊಪ್ಪದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಬಂದ ಎರಡು ಕುಟುಂಬಗಳು ಒಂದು ಕುಟುಂಬಕ್ಕೆ .50 ಲಕ್ಷ ಹಾಗೂ ಇನ್ನೊಂದು ಕುಟುಂಬಕ್ಕೆ .35 ಲಕ್ಷದ ಅಗತ್ಯವಿದೆ. ಈ ತರ ಬಂದಂತವರಿಗೆ ನಾನು ವೈಯಕ್ತಿಕವಾಗಿ ಎಲ್ಲಿಂದ ಹಣ ತಂದು ಕೊಡಲು ಸಾಧ್ಯ? ನಾನೇನು ದೊಡ್ಡ ಶ್ರೀಮಂತನಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಬೇರೆ ರಾಜಕಾರಣಿಗಳ ತರ ಹಣ ಲೂಟಿ ಮಾಡಿ, ಆಸ್ತಿ ಸಂಪಾದನೆ ಮಾಡಿಲ್ಲ. ನಾನೂ ಒಬ್ಬ ರೈತನಾಗಿ ಬದುಕುತ್ತಿದ್ದೇನೆ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ತೆರೆದು, ದಿನದ 24 ಗಂಟೆ ಉಚಿತ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಭಗವಂತ ಅಧಿ​ಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. .25 ಸಾವಿರ ಕೋಟಿ ಸಾಲ ಮನ್ನಾಮಾಡಿ 26 ಲಕ್ಷ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಮಳೆಗಾಲ ಪ್ರಾರಂಭದಲ್ಲಿ ಬಿತ್ತನೆಬೀಜ ಹಾಗೂ ಗೊಬ್ಬರ ಖರೀದಿ ಮಾಡುವುಕ್ಕೆ 1 ಎಕರೆಗೆ .10 ಸಾವಿರದಂತೆ 10 ಎಕರೆ .1 ಲಕ್ಷದವರೆಗೆ ರೈತಬಂಧು ಯೋಜನೆಯಡಿ ಸರ್ಕಾರದ ವತಿಯಿಂದ ಧನಸಹಾಯ, ಸಣ್ಣಪುಟ್ಟವ್ಯಾಪಾರದಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ತರಬೇತಿ ಜೊತೆಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದರು.

ಯುವಕರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು. ನಿವೇಶನರಹಿತರಿಗೆ ನಿವೇಶನ ನೀಡಿ, ಮನೆಯನ್ನು ನಿರ್ಮಾಣ ಸರ್ಕಾರ ಜವಾಬ್ದಾರಿಯಾಗಿದೆ. ಇದೆಲ್ಲದಕ್ಕೂ .2.50 ಲಕ್ಷ ಸಾವಿರ ಕೋಟಿ ಬಂಡವಾಳದ ಅವಶ್ಯಕತೆ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಜೊತೆಗೆ ಸೇರಿ ಈ ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಜಾತಿ, ಹಣದ ಆಮಿಷಗಳನ್ನು ಬಿಟ್ಟು ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ಮಾತ್ರ ಈ ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸಲಾವುದು ಎಂದರು.

ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದ ಪೂರಾರ‍ಯನಾಯ್ಕ, ಈ ಬಾರಿ ಕ್ಷೇತ್ರದ ಬದಲಾವಣೆಯ ನಿರೀಕ್ಷೆ ಇದೆ. ಹಿಂದೆಂದಿಗಿಂತಲೂ ಅಭೂತ ಪೂರ್ವ ಜನ ತಮ್ಮ ಪಕ್ಷದ ಬಗ್ಗೆ ಒಲವನ್ನು ತೋರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದರು.

Kuvempu Airport: ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಕಾರ್ಯಕ್ರಮದ ಆರಂಭದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಬೊಂಬೆ ಕುಣಿತ ಸೇರಿದಂತೆ ಅನೇಕ ಮೇಳಗಳು ಗಮನ ಸೆಳೆದವು. ರಥಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌, ಹೊಳೆಹೊನ್ನೂರು ಬ್ಲಾಕ್‌ ಅಧ್ಯಕ್ಷೆ ಗೀತಾ ಸತೀಶ್‌, ಎಪಿಎಂಸಿ ಸದಸ್ಯ ಸತೀಶ್‌, ಡಿ.ಎಚ್‌.ಪಾಲಾಕ್ಷಪ್ಪ, ಕೆ.ಆರ್‌.ಸತೀಶ್‌, ಶಕುಂತಲಾ ಹಾಲೇಶಪ್ಪ, ಜಿ.ಪಿ. ಶಿವಕುಮಾರ್‌, ಜಿ.ಎನ್‌. ಪರಶುರಾಮ…, ದೀಪಕ್‌ ಪೂರಾರ‍ಯ ನಾಯ್ಕ…, ವೆಂಕಟೇಶ್‌ ಸೇರಿ ಇತರರು ಇದ್ದರು.

Latest Videos
Follow Us:
Download App:
  • android
  • ios