Asianet Suvarna News Asianet Suvarna News

ಸಾಲ​ಮನ್ನಾ ಮಾಡಿದ ಕೈ-ಕಮಲ ಸಿಎಂ ತೋರಿಸಿ: ಎಚ್‌ಡಿ ದೇವೇಗೌಡ ಸವಾಲು!

ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್‌ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು.

Tell me if there is a Congress-BJP CM who waived farmers' loans HDD Challange at ramanagara rav
Author
First Published May 9, 2023, 3:27 AM IST

ರಾಮ​ನ​ಗ​ರ (ಮೇ.9) : ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್‌ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು.

ನಗ​ರ​ದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ(JDS Candidate) ಪರ​ವಾಗಿ ರೋಡ್‌ ಶೋ(Roadshow) ನಡೆಸಿ ಮತ​ಯಾ​ಚನೆ ಮಾಡಿದ ಅವರು, ರೈತರ ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಸ್ತ್ರೀಶಕ್ತಿ ಸಂಘಗಳು, ಮಹಿಳಾ ಗುಂಪುಗಳು ಮಾಡಿರುವ ಸಾಲವನ್ನು ಮನ್ನಾ ಮಾಡಲು ತಿಳಿಸಿದ್ದೇನೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ಬದಲಿಗೆ ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಕುಟುಂಬ​ದ​ವರು ಸ್ಪರ್ಧೆ ಮಾಡು​ತ್ತಿ​ದ್ದಾರೆ. ರಾಜಕೀಯವಾಗಿ ಹಾಸನದಲ್ಲಿ ತೊಂದರೆಯಾದಾಗ ಈ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿ ಶಾಸ​ಕ​ರಾಗಿ, ಮುಖ್ಯ​ಮಂತ್ರಿ ಹಾಗೂ ಪ್ರಧಾನಿಯ ಮಟ್ಟಕ್ಕೆ ಬೆಳೆಸಿದಿರಿ. ಈಗ ನನ್ನ ಮೊಮ್ಮಗ ನಿಖಿಲ್‌ನನ್ನು ಮೇಲೆತ್ತುವ ಕೆಲಸಕ್ಕೆ ಜಾತಿ ಧರ್ಮ ಮರೆತು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಜೆಡಿಎಸ್‌ ಅಧಿಕಾರಕ್ಕೆ ತರುವುದು ನನ್ನ ಕನಸು: ಎಚ್‌.ಡಿ.ದೇವೇಗೌಡ

ನಾನು ಪ್ರಧಾ​ನಿ​ಯಾ​ಗಿ​ದ್ದಾಗ ಅಲ್ಪಸಂಖ್ಯಾತ ಸಮುದಾಯದವರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಕಾಶ್ಮೀರಕ್ಕೆ 4 ಬಾರಿ ಹೋಗಿ ಬಂದಿ​ದ್ದೇನೆ. ಫಾರೂಕ್‌ ಅಬ್ದುಲ್ಲಾ ಅವರನ್ನು ಸಿಎಂ ಮಾಡಿದ್ದು, ಟಿಪ್ಪು ಹೆಸರಿನಲ್ಲಿ ವಸತಿ ಶಾಲೆ ಕೊಟ್ಟಿದ್ದೆ. ಅದನ್ನು ಕಾಂಗ್ರೆ​ಸ್ಸಿ​ಗರು ನಾಶ ಮಾಡಿದರು ಎಂದು ಕಿಡಿಕಾರಿದ ದೇವೇಗೌಡರು, ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುತ್ತಾರೆ. ಅವರ ಮೇಲೆ ದ್ವೇಷ, ಅಸೂಯೆಯಿಂದ ಸೋಲಿಸಲು ವಿರೋಧಿಗಳ ತಂತ್ರ ನಡೆಯುತ್ತಿದೆ. ಆದರೆ ಅಲ್ಲಿಯೂ ಸಹ ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಜೆಡಿಎಸ್‌ ತಾಲೂ​ಕು ಅಧ್ಯಕ್ಷ ರಾಜಶೇಖರ್‌, ರಾಜ್ಯ ವಕ್ತಾರರಾದ ಬಿ.ಉಮೇಶ್‌, ನರಸಿಂಹಮೂರ್ತಿ, ಮುಖಂಡರಾದ ಕಂಟ್ರಾ​ಕ್ಟರ್‌ ಪ್ರಕಾಶ್‌, ಹನುಮಂತ, ಮಳವಳ್ಳಿರಾಜು, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಬಿಳಗುಂಬ ಮೋಹನ್‌, ಗೂಳಿಗೌಡ, ರೈಡ್‌ ನಾಗರಾಜು, ಆರೀಫ್‌ ಖುರೇಷಿ, ವಿಜಯ್‌ಕುಮಾರ್‌, ದೊರೆಸ್ವಾಮಿ, ಗೌಡಯ್ಯನದೊಡ್ಡಿ ಕೃಷ್ಣ, ಶಿವಸ್ವಾಮಿ ಮತ್ತಿತರರು ಹಾಜ​ರಿ​ದ್ದ​ರು.

ನಿಖಿಲ್‌ನನ್ನು ಕ್ಷೇತ್ರದ ಜನರ ಮಡಿಲಿಗೆ ಹಾಕಿರುವೆ

ನಾನು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ಹೇಳಿ​ದ​ರು. ಕ್ಷೇತ್ರದ ಬಡವರಿಗೆ ಮನೆ ಕೊಡುವ ವಿಷಯದಲ್ಲಿ ನನಗೆ ನೋವಿದೆ. ಈ ವಿಷಯದಲ್ಲೂ ದೊಡ್ಡ ರಾಜಕಾರಣ ಮಾಡಿದರು. ಮುಂದಿನ ಯುಗಾದಿ ಒಳಗೆ ಬಡವರಿಗೆ ಮನೆ ಕಟ್ಟಿಕೊಡದಿದ್ದರೆ ಮತ ಕೇಳಲು ಬರುವುದಿಲ್ಲ ಎಂದರು.

ಕ್ಷೇತ್ರದ ಜನರ ಮಡಿ​ಲಿಗೆ ನಿಖಿಲ್‌ನನ್ನು ಹಾಕಿ​ದ್ದೇನೆ. ನನಗೆ ತೋರಿ​ಸಿ​ದಷ್ಟೇ ಪ್ರೀತಿ​ಯನ್ನು ನನ್ನ ಮಗ​ನಿಗೂ ಕೊಡು​ತ್ತೀರಿ ಎಂಬ ನಂಬಿಕೆ ಇದೆ. ನನ್ನ ಮೇಲೆ ಬೇಸರ ಮಾಡಿ​ಕೊ​ಳ್ಳ​ಬೇಡಿ. ನಾವು ಹೊರ​ಗಿ​ನ​ವ​ರಲ್ಲ, ಇದೇ ಜಿಲ್ಲೆಗೆ ಸೇರಿ​ದ​ವರು. ನನ್ನ ಜೀವ​ನದ ಕೊನೆ ಉಸಿರು ಇರು​ವ​ವ​ರೆಗೂ ನಿಮ್ಮ ಕೈ ಬಿಡು​ವು​ದಿಲ್ಲ ಎಂದು ಹೇಳಿ​ದ​ರು.

ಮನೆ ಕೊಡ​ದಿ​ದ್ದರೆ ಸ್ಪರ್ಧೆ ಮಾಡ​ಲ್ಲ

ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ(JDS Candidate Nikhil kumaraswamy) ಮಾತ​ನಾಡಿ, ದೇವೇಗೌಡರು (HD Devegowda)ರಾಮನಗರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು. ಅವರು ರಾಜ​ಕಾ​ರ​ಣ​ದಲ್ಲಿ ಹುಲಿ ರೀತಿ ಘರ್ಜನೆ ಮಾಡಿದ್ದಾರೆ. ದೇವೇಗೌಡ ಮತ್ತು ಕುಮಾ​ರ​ಸ್ವಾಮಿ(HD Kumaraswamy) ಅವ​ರನ್ನು ಆಶೀ​ರ್ವಾದ ಮಾಡಿ​ದ್ದೀರಿ. ತಮಗೂ ಆಶೀ​ರ್ವಾದ ಮಾಡು​ವಂತೆ ಕೋರಿ​ದರು.

ಜೆಡಿಎಸ್‌ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು

ಕುಮಾ​ರ​ಸ್ವಾ​ಮಿ​ ರಾಮ​ನ​ಗ​ರ​ವನ್ನು ಜಿಲ್ಲೆ​ಯ​ನ್ನಾಗಿ ಘೋಷಣೆ ಮಾಡಿ​ದರು. ಅಂದಿ​ನಿಂದ ಇಲ್ಲಿ​ವ​ರೆಗೂ ಜಿಲ್ಲೆ​ಯನ್ನು ಅಭಿ​ವೃದ್ಧಿ ಮಾಡು​ತ್ತಿ​ದ್ದಾರೆ. ಈಗ ಶಾಶ್ವ​ತ​ವಾದ ಕುಡಿ​ಯುವ ನೀರಿನ ಯೋಜನೆ ಪ್ರಾರಂಭ​ವಾ​ಗಿದೆ. ಕುಮಾ​ರ​ಸ್ವಾ​ಮಿ​ರವರ ಬಗ್ಗೆ ಏನೇನೊ ಮಾತ​ನಾ​ಡು​ತ್ತಾರೆ. ಅದ​ಕ್ಕೆಲ್ಲ ಉತ್ತರ ಕೊಡ​ಬೇ​ಕಿದೆ. ನಗ​ರ ಪ್ರದೇ​ಶ​ದಲ್ಲಿ 5100 ರುಪಾಯಿ ನೀಡಿ​ದ​ವ​ರಿಗೆ ಮನೆ ಕಟ್ಟಿಸಿ ಕೊಡು​ತ್ತೇನೆ. ಇಲ್ಲ​ದಿ​ದ್ದರೆ ನಾನು 2023ರ ಚುನಾ​ವ​ಣೆಯಲ್ಲಿ ಸ್ಪರ್ಧೆ ಮಾಡು​ವು​ದಿಲ್ಲ. ಇದು ನನ್ನ ಶಪಥ ಎಂದು ನಿಖಿಲ್‌ ಹೇಳಿ​ದರು.

Follow Us:
Download App:
  • android
  • ios