ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಕನಸು: ಎಚ್.ಡಿ.ದೇವೇಗೌಡ
ನನಗೆ ಈಗ 90 ವರ್ಷ ವಯಸ್ಸಾಗಿದೆ. ಈ ಇಳಿ ವಯಸ್ಸಿನಲ್ಲೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಕನಸು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನುಡಿದರು.
ಶಿಡ್ಲಘಟ್ಟ (ಮೇ.07): ನನಗೆ ಈಗ 90 ವರ್ಷ ವಯಸ್ಸಾಗಿದೆ. ಈ ಇಳಿ ವಯಸ್ಸಿನಲ್ಲೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಕನಸು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನುಡಿದರು. ನಗರದ ದಿಬ್ಬೂರಹಳ್ಳಿ ಮಾರ್ಗದ ಕೋರ್ಚ್ ಪಕ್ಕದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಕನಸು ಮನಸಲ್ಲೂ ಸಹ ಈ ರವಿಕುಮಾರ್ ಸೋಲ್ತಾನೆ ಅಂತ ಅಂದುಕೊಂಡಿರಲಿಲ್ಲ ಎಂದರು.
ನಮ್ಮವರೇ ಬೆನ್ನಿಗೆ ಚೂರಿ ಹಾಕಿದ: ನಮ್ಮಲ್ಲಿದ್ದವರು ಬೆನ್ನಿಗೆ ಚೂರಿ ಹಾಕುವ ಮೂಲಕ ಸೋಲಿಸಿದರು. ಅದರಿಂದ ನನಗೆ ತುಂಬಾ ನೋವಾಗಿದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಎಂ.ರಾಜಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಸಮಾಜ ಸೇವೆಯನ್ನ ಮಾಡುತ್ತಾ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ, ದೇವಸ್ಥಾನಗಳಿಗೆ ಹಣ ಸಹಾಯ , ಉಚಿತ ಸಾಮೂಹಿಕ ಮದುವೆಗಳು ,ಮುಸ್ಲಿಂ ಸಮುದಾಯಕ್ಕೆ ಜಮೀನು ಉಡುಗೊರೆಯಾಗಿ ನೀಡಿರುವ ರವಿಕುಮಾರ್ ಅವರನ್ನು ಇಲ್ಲಿ ಬಂದಿರುವ ನನ್ನ ಜೆಡಿಎಸ್ ಕಾರ್ಯಕರ್ತರು ತಾಯಂದಿರು, ಯುವಕರು, ಎಲ್ಲ ಮತದಾರರು ಸೇರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಶಾಸಕನನ್ನಾಗಿ ವಿಧಾನಸೌಧಕ್ಕೆ ಕಳಿಸಬೇಕೆಂದು ಮನವಿ ಮಾಡಿದರು.
ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ: ಅಖಿಲೇಶ್ ಯಾದವ್
ಜೆಡಿಎಸ್ ಗೆದ್ದರೆ ಶಿಡ್ಲಘಟ್ಟಕ್ಕೆ ಶುಕ್ರದೆಸೆ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಮಾತನಾಡಿ, ಈ ಬಾರಿ ಕ್ಷೇತ್ರದಲ್ಲಿ ನಮ್ಮ ಜೆಡಿಎಸ್ ಮುಖಂಡರು ಅಭಿವೃದ್ಧಿಯ ಪರ ನಿಲ್ಲಲಿದ್ದಾರೆ. ಈ ಬಾರಿ ಶಿಡ್ಲಘಟ್ಟವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಶಿಡ್ಲಘಟ್ಟಕ್ಕೆ ಶುಕ್ರದೆಸೆ ಬಂದಿದೆ ನನ್ನ ಕ್ಷೇತ್ರದ ಅಕ್ಕ-ತಂಗಿಯರು ಅಣ್ಣ ತಮ್ಮಂದಿರು ನನಗೆ ಆಶೀರ್ವಾದ ಮಾಡಲಿದ್ದಾರೆ. ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಶಾಸಕನಾಗುತ್ತೇನೆ ಹಾಗೂ ಕುಮಾರಣ್ಣನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ನಮ್ಮ ನಿಮ್ಮೆಲ್ಲರ ಆಸೆಯಾಗಿದೆ ಎಂದರು.
ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್ ಕಣ್ಣೀರಧಾರೆ!
ವೇದಿಕೆಯ ಕಾರ್ಯಕ್ರಮದ ನಂತರ ರವಿಕುಮಾರ್ ಕಾರ್ಯಕರ್ತರ ಜೊತೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೂಡಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದ ರಾಜು , ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫುತ್ರ್ರಲ್ಲಾ ಖಾನ್ , ಜೆಡಿಎಸ್ ನ ಸ್ಟಾರ್ ಪ್ರಚಾರಕಿ ಫರ್ಜಾನಾ , ಜೆಡಿಎಸ್ ಮಾಜಿ ಅಧ್ಯಕ್ಷ ಧನಂಜಯ ರೆಡ್ಡಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಂಕ್ ಮುನಿಯಪ್ಪ , ನಗರಸಭಾ ಅಧ್ಯಕ್ಷೆ ಸುಮಿತ್ರ ರಮೇಶ್, ಮಾಜಿ ನಗರಸಭಾ ಅಧ್ಯಕ್ಷರಾದ ಜಗ್ಗಪ್ಪ ,ಸದಾಶಿವ, ಮುಗಿಲಡಪಿ ನಂಜಪ್ಪ , ಸೇರಿದಂತೆ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.