Karnataka election: ತನ್ವೀರ್‌ ರಾಜಕೀಯ ನಿವೃತ್ತಿ: ಆತ್ಮಹತ್ಯೆಗೆ ಯತ್ನಿಸಿದ ಅಭಿಯಾನಿ!

ಮಾಜಿ ಸಚಿವ, ನರ​ಸಿಂಹ​ರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರು ಚುನಾ​ವಣಾ ರಾಜ​ಕೀ​ಯ​ದಿ​ಂದ ನಿವೃ​ತ್ತಿ​ ಪ​ಡೆ​ಯಲು ನಿರ್ಧ​ರಿ​ಸಿ​ದ್ದು, ಈ ವಿಚಾರ ಅಭಿ​ಮಾ​ನಿ​ಗ​ಳಲ್ಲಿ ಸಂಚ​ಲನ ಮೂಡಿ​ಸಿದೆ. ಸುದ್ದಿ ತಿಳಿ​ಯು​ತ್ತಿ​ದ್ದಂತೆ ಮೈಸೂರಿನಲ್ಲಿರುವ ಅವ​ರ ಉದಯಗಿರಿ ನಿವಾಸ ಮುಂಭಾಗ ಜಮಾಯಿಸಿದ ಅಭಿ​ಮಾ​ನಿ​ಗ​ಳು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ಕೆಲಕಾಲ ಪ್ರತಿಭಟಿಸಿದ ಪ್ರಸಂಗ ಮಂಗ​ಳವಾರ ನಡೆ​ಯಿ​ತು.

Tanveers political retirement: the campaigner who tried to commit suicide at mysuru rav

ಮೈಸೂರು (ಮಾ.1) ಮಾಜಿ ಸಚಿವ, ನರ​ಸಿಂಹ​ರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರು ಚುನಾ​ವಣಾ ರಾಜ​ಕೀ​ಯ​ದಿ​ಂದ ನಿವೃ​ತ್ತಿ​ ಪ​ಡೆ​ಯಲು ನಿರ್ಧ​ರಿ​ಸಿ​ದ್ದು, ಈ ವಿಚಾರ ಅಭಿ​ಮಾ​ನಿ​ಗ​ಳಲ್ಲಿ ಸಂಚ​ಲನ ಮೂಡಿ​ಸಿದೆ. ಸುದ್ದಿ ತಿಳಿ​ಯು​ತ್ತಿ​ದ್ದಂತೆ ಮೈಸೂರಿನಲ್ಲಿರುವ ಅವ​ರ ಉದಯಗಿರಿ ನಿವಾಸ ಮುಂಭಾಗ ಜಮಾಯಿಸಿದ ಅಭಿ​ಮಾ​ನಿ​ಗ​ಳು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ಕೆಲಕಾಲ ಪ್ರತಿಭಟಿಸಿದ ಪ್ರಸಂಗ ಮಂಗ​ಳವಾರ ನಡೆ​ಯಿ​ತು.

ಈ ವೇಳೆ ಅಭಿ​ಮಾ​ನಿ​ಯೊಬ್ಬ ಸೀಮೆ​ಎಣ್ಣೆ ಸುರಿ​ದು​ಕೊಂಡು ಆತ್ಮ​ಹ​ತ್ಯೆ(Suicide)ಗೆ ಯತ್ನಿ​ಸಿ​ದ್ದ​ಲ್ಲದೆ, ಮತ್ತೊಬ್ಬ ಅಭಿಮಾನಿ ತನ್ವೀರ್‌ ಸೇಠ್‌(Tanveer Seth) ಮನೆ ಮೇಲೆ ಹತ್ತಿ ಧುಮುಕಲು ಯತ್ನಿಸಿದ ಘಟ​ನೆಯೂ ನಡೆ​ಯಿತು. ಇದ​ರಿಂದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಸೇಠ್‌ ಹರಸಾಹಸಪಡಬೇ​ಕಾ​ಯಿ​ತು. ಈ ಅಭಿ​ಮಾನ ಕಂಡು ಒಂದು ಹಂತ​ದಲ್ಲಿ ಭಾವು​ಕ​ರಾದ ಅವರು, ಅನಾ​ರೋಗ್ಯ ಕಾರ​ಣ​ದಿಂದ ಈ ನಿರ್ಧಾ​ರಕ್ಕೆ ಬಂದಿ​ದ್ದೇ​ನೆ. ಆದರೂ ಈ ವಿಚಾ​ರ​ದಲ್ಲಿ ಹೈಕ​ಮಾಂಡ್‌ ನಿರ್ಧಾ​ರಕ್ಕೆ ಬದ್ಧ. ವರಿ​ಷ್ಠ​ರು ಚುನಾವಣೆಗೆ ನಿಲ್ಲುವಂತೆ ಹೇಳಿದರೆ ನಿಲ್ಲು​ತ್ತೇನೆಂದು ಸ್ಪಷ್ಟನೆ ನೀಡಿ​ದ​ರು.

 

ಹೈಕಮಾಂಡ್ ಹೇಳಿದ್ರೆ ನಾನು ಎನ್‌ಆರ್‌ ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು, ತನ್ವೀರ್ ಸೇಠ್​ಗೆ ಟಾಂಗ್ ಕೊಟ್ಟ ಜಮೀರ್

ಡಿಸೆಂಬ​ರ್‌​ನಲ್ಲೇ ಪತ್ರ​: ಚುನಾ​ವಣಾ ರಾಜ​ಕೀ​ಯ​ದಿಂದ ನಿವೃತ್ತಿ ಪಡೆವ ವಿಚಾ​ರಕ್ಕೆ ಸಂಬಂಧಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಗೆ ಈ ಕುರಿತು ಪತ್ರ ಬರೆದಿದ್ದೆ. ಈ ಸಂಬಂಧ ಯಾ​ವುದೇ ನಿರ್ಧಾರ ತೆಗೆದುಕೊಳ್ಳದಂತೆ, ಯಾರಿಗೂ ಹೇಳದಂತೆ ಸೂಚಿಸಿದ್ದರು ಎಂದರು.

2019ರಲ್ಲಿ ಆದ ಮಾರಣಾಂತಿಕ ಹಲ್ಲೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡ ಇದ್ದದ್ದರಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಇತ್ತೀಚೆಗೆ ಛತ್ತೀಸ್‌ಗಡದ ರಾಯಪುರದಲ್ಲಿ ನಡೆದ ಕಾಂಗ್ರೆಸ್‌ ಮಹಾಧಿವೇಶನದಲ್ಲೂ ವರಿಷ್ಠರು ಆತುರದ ನಿರ್ಧಾರ ಕೈಗೊ​ಳ್ಳ​ದಂತೆ ನಿರ್ದೇಶಿಸಿದ್ದರು. ಈ ವಿಚಾ​ರ​ದಲ್ಲಿ ಡಿಸೆಂಬರ್‌ನಿಂದ ಗೌಪ್ಯತೆ ಕಾಯ್ದುಕೊಂಡಿದ್ದೆ. ಮಾಧ್ಯಮಗಳ ಮೂಲಕ ಇದೀಗ ಬಹಿ​ರಂಗ​ವಾ​ಗಿದೆ ಎಂದರು.

ಜೊತೆಗೂಡಿ ಬದುಕಿದಾಗ ಭವ್ಯ ಭಾರತ ನಿರ್ಮಾಣ : ತನ್ವೀರ್ ಸೇಠ್

Latest Videos
Follow Us:
Download App:
  • android
  • ios