ಹೈಕಮಾಂಡ್ ಹೇಳಿದ್ರೆ ನಾನು ಎನ್‌ಆರ್ ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು, ತನ್ವೀರ್ ಸೇಠ್ಗೆ ಟಾಂಗ್ ಕೊಟ್ಟ ಜಮೀರ್
ಬಾದಾಮಿ ಜನರು ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್ ನೀಡ ಬಯಸಿದ್ದಾರೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಹೈಕಮಾಂಡ್ ಹೇಳಿದರೆ ನಾನು ಎನ್.ಆರ್.ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು ಎಂದು ಶಾಸಕ ತನ್ವೀರ್ ಸೇಠ್ಗೆ ಟಾಂಗ್ ನೀಡಿದ್ದಾರೆ.
ಮೈಸೂರು (ಡಿ.18): ಹೈಕಮಾಂಡ್ ಹೇಳಿದರೆ ನಾನು ಎನ್.ಆರ್.ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು ಎಂದಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್ಗೆ ಟಾಂಗ್ ನೀಡಿದ್ದಾರೆ. ನಾನು ಈಗ ಚಾಮರಾಜಪೇಟೆ ಶಾಸಕ, ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಇಲ್ಲಿ ಸ್ಪರ್ಧೆ ಬೇಡ ಅಂದ್ರೆ ನಾನು ಏನು ಮಾಡೋದಕ್ಕೆ ಆಗಲ್ಲ. ಒಂದು ವೇಳೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧೆ ಮಾಡಲೇಬೇಕು ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್: 60 ವರ್ಷದಲ್ಲಿ ಆಗದಷ್ಟು ಅಭಿವೃದ್ಧಿ ಐದು ವರ್ಷದಲ್ಲಿ ಆಗಿದೆ. ಆದ್ದರಿಂದ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಬೇಕು ಅಂತ ಬಾದಾಮಿ ತಾಲೂಕಿನ ಜನ ಹೇಳುತ್ತಿದ್ದಾರೆ. ಶಾಸಕನಾದವನು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬರಬೇಕು. ನನಗೆ ಬರೋಕೆ ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದಾಗಿ ಜನ ಹೆಲಿಕಾಪ್ಟರ್ ಕೊಡಿಸೋಕೆ ತೀರ್ಮಾನ ಮಾಡಿದ್ದಾರೆ. 25 ಕೋಟಿ ರೂ. ಆಗಲಿ ಜನರೇ ದುಡ್ಡು ಹಾಕಿ ಹೆಲಿಕಾಪ್ಟರ್ ಕೊಡಿಸಬೇಕು ಅಂದುಕೊಂಡಿದ್ದಾರೆ. ಇದಕ್ಕಾಗಿ ಬಾದಾಮಿ ತಾಲೂಕಿನ ಜನ ಚಂದ ವಸೂಲಿ ಮಾಡುತ್ತಿದ್ದಾರೆ ಎಂದು
ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ: ಜಮೀರ್
ನನ್ನ ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ. ಸುಮಾರು 24 ಮಂದಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ನಾನು ಸಹ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕ. ನನಗೂ ಆಪ್ತರು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಸಹ ಹೈಕಮಾಂಡ್ ಗೆ ತಿಳಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳಲು ನಿರ್ಧಾರಕ್ಕೆ ನಾನು ಬದ್ಧ ಎಂದು ಜಮೀರ್ ಅಹಮ್ಮದ್ ಖಾನ್ ಇದೇ ವೇಳೆ ಹೇಳಿದ್ದಾರೆ.
ಚಾಮರಾಜಪೇಟೆಗೆ ನಾನು ಮಗ, ಸಿದ್ದು ಅಳಿಯ: ಶಾಸಕ ಜಮೀರ್ ಅಹ್ಮದ್
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: 224 ಕ್ಷೇತ್ರದಿಂದಲೂ ಸಿದ್ದರಾಮಯ್ಯಗೆ ಒತ್ತಡವಿದೆ. ನಾನು ಸಹ ಚಾಮರಾಜಪೇಟೆಗೆ ಬನ್ನಿ ಅಂತ ಹೇಳುತ್ತಿದ್ದೇನೆ. ಅವರು ಇನ್ನೂ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಸಿದ್ಧತೆ ನಡೆಸಿಲ್ಲ. ಬಾದಾಮಿಯಲ್ಲಿ ನಾನು ಸಹ ಪ್ರವಾಸ ಮಾಡಿ ಜನರ ಜತೆ ಮಾತನಾಡಿದ್ದೇನೆ. ಅಲ್ಲಿ ದಾರಿಯುದ್ದಕ್ಕೂ ಜನರು ಸಿದ್ದರಾಮಯ್ಯ ಅವರೇ ಬರಬೇಕು ಅನ್ನುತ್ತಿದ್ದಾರೆ. ನಮ್ಮ ಕ್ಷೇತ್ರ ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಇಷ್ಟು ವರ್ಷದಲ್ಲಿ ಆಗದ ಅಭಿವೃದ್ಧಿ ನಾಲ್ಕು ವರ್ಷದಲ್ಲಿ ಆಗಿದೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರವಾದರೂ ಎಚ್ಡಿಕೆ ಮುಸ್ಲಿಂ ಸಿಎಂ ಮಾಡ್ತಾರಾ?: ಜಮೀರ್ ಸವಾಲು
ಹೆಚ್‌ಡಿಕೆ ಮುಸ್ಲಿಂ ಮುಖ್ಯಮಂತ್ರಿ ಹೇಳಿಕೆ ವಿಚಾರ: ಕುಮಾರಸ್ವಾಮಿ ಮುಸಲ್ಮಾನರನ್ನೇ ಸಿಎಂ ಮಾಡ್ತೀವಿ ಅಂತ ಘೋಷಣೆ ಮಾಡಬೇಕು. ಅವರಿಗೆ ಮುಸ್ಲಿಂ ಮೇಲೆ ಪ್ರೀತಿ ಇದ್ದರೆ ಸಿ.ಎಂ.ಇಬ್ರಾಹಿಂ ಅವರನ್ನೇ ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ. ಜೆಡಿಎಸ್ಗೆ 18, 20, 23 ಸ್ಥಾನ ಬರುತ್ತೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ 100 ಸೀಟ್ ಬರೋದಕ್ಕೂ ಆಗಲ್ಲ. ಮುಸ್ಲಿಂ ಮತ ಸೆಳಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ ಜಮೀರ್.