Asianet Suvarna News Asianet Suvarna News

ಜೊತೆಗೂಡಿ ಬದುಕಿದಾಗ ಭವ್ಯ ಭಾರತ ನಿರ್ಮಾಣ : ತನ್ವೀರ್ ಸೇಠ್

ಎಲ್ಲರೂ ಜೊತೆಗೂಡಿ ಬದುಕುವ ಮನೋಭಾವ ಇದ್ದಾಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು

 when we live together its Become Great India says Tanveer Seth snr
Author
First Published Nov 13, 2022, 5:22 AM IST

 ಮೈಸೂರು (ನ.13):  ಎಲ್ಲರೂ ಜೊತೆಗೂಡಿ ಬದುಕುವ ಮನೋಭಾವ ಇದ್ದಾಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ಮೈಸೂರಿನ (Mysuru)  ಸಿದ್ದಾರ್ಥನಗರದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಆವರಣದಲ್ಲಿರುವ ಕನಕ ಭವನದಲ್ಲಿ ಸಂತ ಕನಕದಾಸರ ಜಯಂತ್ಯುತ್ಸವ ಸಮಿತಿಯು ಶನಿವಾರ ಆಯೋಜಿಸಿದ್ದ ಭಕ್ತ ಕನಕದಾಸರ 535ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ (Society) ಕಾಣುತ್ತಿರುವ ವ್ಯತ್ಯಾಸ, ವೈರುಧ್ಯಗಳು ಈ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿದ್ದೇವೆ. ಇದನ್ನು ಗಮನಿಸಿ 500 ವರ್ಷಗಳ ಹಿಂದೆಯೇ ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಸೂಚ್ಯವಾಗಿ ಹೇಳುವ ಮೂಲಕ ಜಾತಿ ವ್ಯವಸ್ಥೆಯನ್ನು ತಮ್ಮದೇ ದಾಟಿಯಲ್ಲಿ ಟೀಕಿಸಿದ್ದರು. ನಾವು ಯಾರು ಇಂತದ್ದೇ ಜಾತಿ ಹಾಗೂ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸಿರುವುದಿಲ್ಲ. ‘ನೀ ತಂದೆ, ನಾ ಬಂದೆ, ನೀನೆ ನನ್ನ ತಂದೆ? ಎನ್ನುವ ಕಲ್ಪನೆಯಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದರು.

500 ವರ್ಷದ ಹಿಂದೆಯೇ ಸುಖ ಜೀವನವನ್ನು ತ್ಯಜಿಸಿದ ಮಹಾನುಭಾವ ಕನಕದಾಸರಾಗಿದ್ದರು. ಇತರರು ಸುಖವಾಗಿರಲಿ ಎಂಬ ಆಶಯ ಅವರದ್ದಾಗಿತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ನಾನೊಬ್ಬ ಚೆನ್ನಾಗಿರಬೇಕು, ಸುಖವಾಗಿ ಬಾಳಬೇಕು ಎಂದು ಅನೇಕರು ಬಯಸುತ್ತಾರೆ. ಇಂತಹ ಮನೋಭಾವಕ್ಕೆ ಕನಕದಾಸರು ತದ್ವಿರುದ್ಧ ಎನಿಸಿದ್ದರು. ಸಾಕಷ್ಟುಅತ್ಯುತ್ತಮವಾದ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಎಷ್ಟುಸಾಧ್ಯವೋ ಅಷ್ಟನ್ನು ಜೀವನದಲ್ಲಿ ಅಳವಡಿಸಿಕೊಂಡು ಕೆಲಸ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಅವರು ತಿಳಿಸಿದರು.

ಇದೇ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌, ಪಾಲಿಕೆ ಸದಸ್ಯರಾದ ಜೆ. ಗೋಪಿ, ರಮೇಶ್‌, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್‌. ಶಿವರಾಮು, ಪತ್ರಕರ್ತ ಎಂ.ಟಿ. ಯೋಗೇಶ್‌ಕುಮಾರ್‌, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾಳೇಗೌಡ, ಕಂಸಾಳೆ ಸಿದ್ದರಾಮು, ಬಸಪ್ಪ, ರೇವಣ್ಣ ಸೇರಿದಂತೆ ಇತರನ್ನು ಸನ್ಮಾನಿಸಲಾಯಿತು.

ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಉಪ ಮೇಯರ್‌ ಡಾ.ಜಿ. ರೂಪಾ, ಮಾಜಿ ಮೇಯರ್‌ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಬ್ಯಾಂಕ್‌ ಪುಟ್ಟಸ್ವಾಮಿ, ಎಂ. ಶಿವಣ್ಣ, ಸೋಮಶೇಖರ್‌, ಎಂ.ಕೆ. ಶಂಕರ್‌, ವಿಶ್ವ, ಕುರುಬಾರಹಳ್ಳಿ ಪ್ರಕಾಶ್‌, ಎಂ.ಎ. ಕಮಲಾ ಅನಂತ್‌ರಾಮ್‌ ಮೊದಲಾದವರು ಇದ್ದರು.

ಭಕ್ತ ಕನಕದಾಸರ ತತ್ವ, ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಕನಕಸದಾಸರು.

- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್‌ ಸದಸ್ಯರು

 ಕನಕ ಚಲನಚಿತ್ರೋತ್ಸವ ಮಾಡಿ

ಸಾಹಿತಿ ಬನ್ನೂರು ಕೆ. ರಾಜು ಮಾತನಾಡಿ, ಕನಕದಾಸರು ಸರಳ ಭಾಷೆಯಲ್ಲಿ ಕೀರ್ತನೆಗಳ ಮೂಲಕ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿ ಹೇಳುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅವರ ಕೀರ್ತನೆಗಳಲ್ಲಿದ್ದ ಗೂಡಾರ್ಥಗಳನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಅನೇಕ ಗೂಡಾರ್ಥಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದರು ಎಂದರು.

ಎಲ್ಲರೂ ಜೊತೆಗೂಡಿ ಬದುಕುವ ಮನೋಭಾವ ಇದ್ದಾಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಆವರಣದಲ್ಲಿರುವ ಕನಕ ಭವನದಲ್ಲಿ ಸಂತ ಕನಕದಾಸರ ಜಯಂತ್ಯುತ್ಸವ

Follow Us:
Download App:
  • android
  • ios