ಸದನ ನಿಯಂತ್ರಣಕ್ಕೆ ಅಭಿಪ್ರಾಯ ತಿಳಿಸಲು ಮೇಲ್ಮನೆ ಸದಸ್ಯರಿಗೆ ಪತ್ರ| ಶಾಸನಸಭೆಯ ಕಾರ್ಯಕಲಾಪಗಳಲ್ಲಿ ಸದಸ್ಯರು ಹೆಚ್ಚು ಹೆಚ್ಚು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು| ಕಲಾಪಗಳಿಗೆ ಅಡ್ಡಿಪಡಿಸುವುದು, ಧಿಕ್ಕಾರಗಳನ್ನು ಕೂಗುವುದು ಸದನದ ಗೌರವಕ್ಕೆ ತಕ್ಕದ್ದಲ್ಲ: ಹೊರಟ್ಟಿ|
ಬೆಂಗಳೂರು(ಫೆ.24): ಸದನದ ನಿಯಮಗಳು ಮತ್ತು ಸತ್ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋಗಲು ಸದನ ನಿಯಂತ್ರಣ, ಸದಸ್ಯರ ಪಾತ್ರ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸದನದ ಘನತೆ ಮತ್ತು ಗೌರವವನ್ನು ಹೆಚ್ಚಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಬಾರಿ ಕೆಲವು ಅಮೂಲಾಗ್ರ ಬದಲಾವಣೆ ಮಾಡುವ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬೇಕು. ಇತ್ತೀಚೆಗಿನ ದಿನದಲ್ಲಿ ಪ್ರಶ್ನೋತ್ತರ ಅವಧಿ ಒಂದು ಗಂಟೆಯೊಳಗೆ ಮುಕ್ತಾಯಗೊಳ್ಳದೆ 2-3 ಗಂಟೆಗಳ ಕಾಲ ನಡೆಯುತ್ತಿರುವ ಕಾರಣ ಬೇರೆ ಕಲಾಪಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದಸ್ಯರು ತಮ್ಮ ಸಲಹೆ, ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಉಲ್ಲೇಖ ಮಾಡಲು ಉದ್ದೇಶಿಸಿದ್ದಾರೆ.
ಸಭಾಪತಿಯಾಗುತ್ತಿದ್ದಂತೆಯೇ ಮಹತ್ವದ ರೂಲ್ಸ್ ಜಾರಿಗೆ ತರಲು ಮುಂದಾದ ಹೊರಟ್ಟಿ
ಶಾಸನಸಭೆಯ ಕಾರ್ಯಕಲಾಪಗಳಲ್ಲಿ ಸದಸ್ಯರು ಹೆಚ್ಚು ಹೆಚ್ಚು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಇತ್ತೀಚೆಗೆ ವಿಧೇಯಕಗಳ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕಾಗಿ ಚರ್ಚೆ ನಡೆಯುವ ವೇಳೆ ಸಾಕಷ್ಟು ಗೊಂದಲ ಉಂಟಾಗುವ ಪ್ರಸಂಗಗಳಿವೆ.
ಜನಹಿತಕ್ಕಾಗಿ ರೂಪಿಸಲ್ಪಡುವ ಕಾನೂನುಗಳ ಆಳವಾದ ಅಧ್ಯಯನ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ ಸದಸ್ಯರು ಪಕ್ಷಾತೀತವಾಗಿ ಬೆಳಕು ಚೆಲ್ಲುವಂತಹ ಚರ್ಚೆಗಳಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲ ಸದಸ್ಯರ ಹಕ್ಕು. ಆದರೆ, ಅದನ್ನೇ ಅಸ್ತ್ರ ಮಾಡಿಕೊಂಡು ಕಲಾಪಗಳಿಗೆ ಅಡ್ಡಿಪಡಿಸುವುದು, ಧಿಕ್ಕಾರಗಳನ್ನು ಕೂಗುವುದು ಸದನದ ಗೌರವಕ್ಕೆ ತಕ್ಕದ್ದಲ್ಲ. ಸದನದ ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದಸ್ಯರು ಕೈ ಜೋಡಿಸಬೇಕು ಎಂದು ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2021, 8:11 AM IST