ಇತ್ತೀಚೆಗೆ ಕರ್ನಾಟಕ ವಿಧಾನಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು, (ಫೆ.23): ವಿಧಾನಪರಿಷತ್ನಲ್ಲಿ ಸಂಪೂರ್ಣವಾಗಿ ಮೊಬೈಲ್ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಸದನದೊಳಗೆ ಪರಿಷತ್ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರಿಗೂ ಮೊಬೈಲ್ ಬಳಕೆಗೆ ಅವಕಾಶ ಇಲ್ಲದಂತೆ ಕೆಲವೊಂದು ನಿಯಮ ರೂಪಿಸಲು ಸಭಾಪತಿ ಬಸವರಾಜ್ ಹೊರಟ್ಟಿ ಮುಂದಾಗಿದ್ದಾರೆ.
ಹೌದು... ಇತ್ತೀಚಿಗೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದ್ಯಸರೊಬ್ಬರು ನೀಲಿ ಚಿತ್ರವನ್ನು ನೋಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಪರಿಷತ್ ನಲ್ಲಿ ಯಾರು ಕೂಡ ಮೊಬೈಲ್ ಬಳಕೆ ಮಾಡದಂತೆ ಹೊಸ ರೂಲ್ಸ್ ತರಲು ಹೊರಟ್ಟಿ ತೀರ್ಮಾನಿಸಿದ್ದಾರೆ.
ಪರಿಷತ್‌ನಲ್ಲಿ ಸೆಕ್ಸ್ ವಿಡಿಯೋ ವೀಕ್ಷಣೆ ಪ್ರಕರಣ: ಸಭಾಪತಿಯಿಂದ ಮಹತ್ವದ ಆದೇಶ
ಈ ಕುರಿತು ಇಂದು ವಿಧಾನಸೌಧದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಹೊರಟ್ಟಿ, ಮಾಧ್ಯಮಗಳನ್ನ ಯಾವುದೇ ಕಾರಣಕ್ಕೂ ದೂರ ಇಡುವ ಪ್ರಶ್ನೆಯೇ ಇಲ್ಲ. ಕೊರೋನಾ ಕಾರಣಕ್ಕೆ ಇನ್ನೂ ಮಾಧ್ಯಮಗಳಿಗೆ ಗ್ಯಾಲರಿಯಲ್ಲಿ ಅವಕಾಶ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಬೇರೆ ಬೇರೆ ಕಡೆ ಮಾಧ್ಯಮಗಳನ್ನ ನಿಷೇಧ ಮಾಡಲಾಗಿದೆ. ನಮ್ಮಲ್ಲಿ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರವೇ ಇಡೀ ದಿನ ಸುದ್ದಿಯಾಗಿತ್ತು. ಊಟ ಮಾಡಿ ಸದನಕ್ಕೆ ಸದಸ್ಯರು ಬಂದಾಗ ಕೆಲ ನಿಮಿಷ ನಿದ್ದೆ ಮಾಡ್ತಾರೆ. ಮಾಧ್ಯಮಗಳಲ್ಲಿ ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಇದರಿಂದ ಇಡೀ ಸದನದ ಗೌರವ ಮಣ್ಣಾಗುತ್ತೆ. ಯಾವುದೋ ಒಂದು ಸಣ್ಣ ಘಟನೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತೆ ಎಂದರು.
ಕೆಲ ಮಾಧ್ಯಮಗಳು ಮಾಡುತ್ತಿರುವ ವರದಿಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿ, ಮುಂಬರು ದಿವಸದಲ್ಲಿ ಸದನದಲ್ಲಿ ಕೆಲವು ಬದಲಾವಣೆಯಾಗಲಿದ್ದೇವೆ ಅಂತ ಮೂನ್ಸಚನೆ ನೀಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 23, 2021, 4:29 PM IST