Sirsi Vishweshwara Hegade Kageri election results 2023: ಭೀಮಣ್ಣನ ಮುಂದೆ ಜಾರಿಬಿದ್ದ ಕಾಗೇರಿ!
Sirsi Election Results 2023: ಹಲವು ವರ್ಷಗಳ ಕಾಲ ಬಿಜೆಪಿಯ ಭದ್ರಕೋಟೆಯಾಗಿದ್ದ ಉತ್ತರ ಕನ್ನಡದ ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಕೈ ಧ್ವಜ ಹಾರಿಸಿದ್ದಾರೆ. ವಿರೋಧಿ ಅಲೆ ಎದುರಿಸುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು ಕಂಡಿದ್ದಾರೆ.
ಶಿರಸಿ (ಮೇ.13): ಬಿಜೆಪಿ ಪಾಲಿಗೆ ಉತ್ತರ ಕನ್ನಡದ ಭದ್ರಕೋಟೆ ಎನಿಸಿಕೊಂಡಿದ್ದ ಶಿರಸಿ ಕ್ಷೇತ್ರದಲ್ಲಿ ಮಹಾಸೋಲು ಎದುರಾಗಿದೆ. 15ನೇ ವಿಧಾನಸಭೆಯಲ್ಲಿ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ್ ಎದುರು ಸೋಲು ಕಂಡಿದ್ದಾರೆ. ಬರೋಬ್ಬರಿ ಆರು ಬಾರಿ ಶಿರಸಿ ಕ್ಷೇತ್ರದಲ್ಲಿ ಗೆಲವು ಕಂಡಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ 66, 639 ಮತಗಳನ್ನು ಪಡೆದುಕೊಂಡರೆ, ಭೀಮಣ್ಣ ನಾಯ್ಕ್ 75, 656 ಮತಗಳನ್ನು ಪಡೆದುಕೊಳ್ಳುವ ಮೂಲಕ 9017 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಜೆಡಿಎಸ್‌ನ ಉಪೇಂದ್ರ 8948 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಇದು ಅಂಚೆ ಮತಗಳ ಹೊರತುಪಡಿಸಿ ಸಿಕ್ಕಿರುವ ಗೆಲುವಿನ ಅಂತರವಾಗಿದೆ. ಪ್ರತಿ ಬಾರಿ ಕಾಗೇರಿಗೆ ಎದುರಾಳಿಯಾಗಿರುತ್ತಿದ್ದ ಭೀಮರ್ಣಣ ನಾಯ್ಕ್ ಹಿಂದಿನ ಬಹುತೇಕ ಚುನಾವಣೆಯಲ್ಲಿ ನಿರಾಸೆ ಎದುರಿಸಿದ್ದರು. ಈ ಬಾರಿ ಕಾಗೇರಿ ವಿರುದ್ಧ ಭರ್ಜರಿ ಗೆಲುವು ಕಂಡಿದ್ದಾರೆ. ಹವ್ಯಕ ಬ್ರಾಹ್ಮಣರು ಹಾಗೂ ನಾಮಧಾರಿಗಳ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಗೇರಿ ಬ್ರಾಹ್ಮಣ ಸಮುದಾಯದವರಾಗಿದ್ದರೆ, ಭೀಮಣ್ಣ ನಾಯ್ಕ್ ನಾಮಧಾರಿ ಸಮಾಜದ ಪ್ರಮುಖ ನಾಯಕ. ಭೀಮಣ್ಣ ನಾಯ್ಕ್ ಈಗಾಗಲೇ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಸೋಲು ಕಂಡಿದ್ದರೆ, ಮೂರನೇ ಯತ್ನದಲ್ಲಿ ವಿಧಾನಸಭೆ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.
ಯಲ್ಲಾಪುರದಲ್ಲಿ ಒಮ್ಮೆ ವಿಧಾನಪರಿಷತ್ ಚುನಾವಣೆಯಲ್ಲೂ ಭೀಮಣ್ಣ ನಾಯ್ಕ್ ಸೋಲು ಕಂಡಿದ್ದರು. ಈ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ವೆಂಕಟೇಶ್ ಹೊಸಬಾಳೆ ಕೊನೇ ಹಂತದಲ್ಲಿ ನಾಮಪತ್ರ ವಾಪಾಸ್ ಪಡೆದುಕೊಂಡಿದ್ದರಿಂದ ಕಾಗೇರಿ ಹಾಗೂ ಭೀಮಣ್ಣ ನಡುವೆ ನೇರಫೈಟ್‌ಗೆ ಸಾಕ್ಷಿಯಾಗಿತ್ತು. ಅದಲ್ಲದೆ, ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿದ್ದೂ ಬಿಜೆಪಿಯ ಹಿನ್ನಡೆಗೆ ಕಾರಣವಾಯಿತು. ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಶಶಿಭೂಷಣ್ ಹೆಗಡೆ ಬಿಜೆಪಿಗೆ ಬಂದಿದ್ದೂ ಯಾವುದೇ ಲಾಭವಾಗಿಲ್ಲ. ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿದ್ದ ಉಪೇಂದ್ರ ಪೈ 10 ಸಾವಿರ ಮತಗಳನ್ನು ಪಡೆಯಲು ಕೂಡ ವಿಫಲರಾಗಿದ್ದಾರೆ.
Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
Karnataka Election Result 2023: ಮುಧೋಳದಲ್ಲಿ ಗೋವಿಂದ ಕಾರಜೋಳಗೆ ಸೋಲು