Mudhol Election Result 2023: ಮುಧೋಳದಲ್ಲಿ ಗೋವಿಂದ ಕಾರಜೋಳಗೆ ಸೋಲು
ಗೋವಿಂದ ಕಾರಜೋಳ ಅವರು ಒಟ್ಟು 59401 ಮತಗಳನ್ನ ಪಡೆದರೆ, ಅರ್. ಬಿ. ತಿಮ್ಮಾಪುರ ಅವರು 76817 ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಬಾಗಲಕೋಟೆ(ಮೇ.13): ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗೋವಿಂದ ಕಾರಜೋಳ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅರ್. ಬಿ. ತಿಮ್ಮಾಪುರ ವಿರುದ್ಧ ಗೋವಿಂದ ಕಾರಜೋಳ ಪರಾಭವ ಹೊಂದಿದ್ದರು. ಗೋವಿಂದ ಕಾರಜೋಳ ಅವರು ಒಟ್ಟು 59401 ಮತಗಳನ್ನ ಪಡೆದರೆ, ಅರ್. ಬಿ. ತಿಮ್ಮಾಪುರ ಅವರು 76817 ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಗೋವಿಂದ ಕಾರಜೋಳ ವಿರುದ್ಧ ಅರ್. ಬಿ. ತಿಮ್ಮಾಪುರ ಅವರು ಒಟ್ಟು 17416 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮುಧೋಳದಲ್ಲಿ ಮತ್ತೆ ಕಾಂಗ್ರೆಸ್‌ರ ಬಾವುಟ ಹಾರಿಸಿದ್ದಾರೆ.
KARNATAKA ELECTION RESULT 2023: ಕಾಂಗ್ರೆಸ್‌ಗೆ ಜೈ ಎಂದ ಕರ್ನಾಟಕ, ಕಾರ್ಯಕರ್ತರಲ್ಲಿ ಹೆಚ್ಚಿದ ಸಂಭ್ರಮ
ಮುಧೋಳದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಮತದಾರ ಪ್ರಭು ಮಾತ್ರ ತಿಮ್ಮಾಪುರ ಅವರನ್ನ ಕೈ ಹಿಡಿದಿದ್ದಾರೆ. ಈ ಮೂಲಕ ಹಾಲಿ ಸಚಿವರಾಗಿದ್ದ ಕಾರಜೋಳ ಅವರಿಗೆ ಭಾರೀ ಮುಖಭಂಗವಾಗಿದೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.